October 7, 2025

ಹೊನ್ನಾವರ ಮಹರ್ಷಿ ವಾಲ್ಮೀಕಿ ಜಯಂತಿ

ಹೊನ್ನಾವರ; ರಾಮಾಯಣ ಮಹಾಕಾವ್ಯವನ್ನು ಜನಸಾಮನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸರಳವಾಗಿ ಬರೆದ ವಾಲ್ಮೀಕಿಯವರ ಬದಲಾವಣೆಯ ಗುಣವು ಸಮಾಜಕ್ಕೆ ಪ್ರೇರಣೆಯಾಗಿದೆ ಎಂದು ವಿಶ್ರಾಂತ ಉಪನ್ಯಾಸಕರಾದ ಎಂ.ಆರ್.ನಾಯ್ಕ ಅಭಿಪ್ರಾಯಪಟ್ಟರು.

ಪ.ಪಂ.ಸಭಾಭವನದಲ್ಲಿ ತಾಲೂಕ ಆಡಳಿತ , ತಾಲೂಕ ಪಂಚಾಯತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ರಾಮಾಯಣದ ಆದರ್ಶ ಗುಣವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಜಯಂತಿಯು ಸಾರ್ಥಕವಾಗಲಿದೆ ಎಂದರು

ಪ.ಪಂ.ಅಧ್ಯಕ್ಷ ವಿಜಯ ಕಾಮತ್ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.ಶೈಕ್ಷಣಿಕವಾಗಿ ಸಾಧನೆ ಮಾಡಿದ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.   ವಿಶ್ರಾಂತ ಉಪನ್ಯಾಸಕ ಡಾ. ಜಿ.ಪಿ ಪಾಠಣಕರ ಮಾತನಾಡಿ ಇಂದು ದೇಶದೆಲ್ಲಡೆ ರಾಮನ ಗುಣಗಾನ ಮಾಡುತ್ತಾರೆ. ಆದರೆ ರಾಮನನ್ನು ಈ ಸಮಾಜಕ್ಕೆ ಪರಿಚಯಿಸಿದ ವಾಲ್ಮೀಕಿಯ ಜಯಂತಿ ಆಚರಣೆಗೆ ಜನರ ನಿರಾಶಕ್ತಿಯು ಬೇಸರ ಉಂಟು ಮಾಡುತ್ತಿದೆ. ಸಮಾಜದಲ್ಲಿ ಇಂತವರ ಕೊಡುಗೆ ಸ್ಮರಿಸುವ ಕಾರ್ಯವಾದಾಗ ಮಾತ್ರ ಮುಂದಿನ ತಲೆಮಾರಿನವರಿಗೆ ಇವರ ಪರಿಚಯ ಇರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 ವೇದಿಕೆಯಲ್ಲಿ ತಹಶೀಲ್ದಾರ ಪ್ರವೀಣ ಕರಾಂಡೆ ಪ.ಪಂ. ಮುಖ್ಯಾಧಿಕಾರಿ ಏಸು ಬೆಂಗಳೂರು, ತಾ.ಪಂ. ಕಾರ್ಯನಿರ್ವಹಣಾಧಿಕಾರಿ  ಚೇತನಕುಮಾರ, ತಾಲೂಕ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ  ಮಹೇಶ ಮೇಸ್ತ, ಸದಸ್ಯ ತಾರಾ ಕುಮಾರಸ್ವಾಮಿ, ಡಾ.ಜಿ.ಪಿ.ಪಾಠಣಕರ್, ಕೃಷಿ ಇಲಾಖೆಯ ಸಹಾಯಕ ನಿರ್ದೆಶಕರಾದ ಪಾಂಡಪ್ಪ ಲಂಬಾಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ನೂತನಾ ನಾಯ್ಕ, ಕರವೇ ಅಧ್ಯಕ್ಷ ಮಂಜುನಾಥ ಗೌಡ, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಜಿ.ಟಿ.ಹಳ್ಳೇರ್, ಗ್ರಾ.ಪಂ. ಸದಸ್ಯ ಅಣ್ಣಪ್ಪ ಗೌಡ ಉಪಸ್ಥಿತರಿದ್ದರು. ಸಮಾಜಕಲ್ಯಾಣ ಇಲಾಖೆಯ ಅಧಿಕಾರಿ ಸುಮಂಗಲಾ ಭಟ್ ಸ್ವಾಗತಿಸಿದರು. ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!