ಹೊನ್ನಾವರ: ರೆಡ್ ರಿಬ್ಬನ್ ಕ್ಲಬ್ ವಿಭಾಗ ಸೆಂಟ್ ಇಗ್ನೆಶಿಯಸ್ ಆರೋಗ್ಯ ವಿಜ್ಞಾನ ವಿದ್ಯಾಲಯ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಸನ್ ಸೊಸೈಟಿ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಕಾರವಾರ, ಐಸಿಟಿಸಿ ವಿಭಾಗ ತಾಲೂಕ ಆಸ್ಪತ್ರೆ ಹೊನ್ನಾವರ ಇವುಗಳ ಸಂಯುಕ್ತಾಶ್ರಯದಲ್ಲಿ ಹೆಚ್.ಐ.ವಿ/ಏಡ್ಸ ಕುರಿತು ನಗರದ ಪ್ರಮುಖ ಸ್ಥಳಗಳಾದ ಮಾರ್ಕೆಟ್, ಬಸ್ ನಿಲ್ದಾಣ ಐ.ಟಿ.ಐ ಕಾಲೇಜ್, ಪ್ರಭಾತ ನಗರದ ರಿಕ್ಷಾ ನಿಲ್ದಾಣದ ಹತ್ತಿರ ಸ್ಥಳಗಳಲ್ಲಿ ಸೆಂಟ್ ಇಗ್ನೇಶಿಯಸ್ ವಿದ್ಯಾರ್ಥಿಗಳಿಂದ ಬೀದಿ ನಾಟಕ ಪ್ರದರ್ಶಿಸಲ್ಪಟ್ಟಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಸಾರ್ವಜನಿಕರಿಗೆ ಮನದಟ್ಟಾಗುವ ರೀತಿಯಲ್ಲಿ ಅಭಿನಯದ ಮೂಲಕ ಹೆಚ್.ಐ.ವಿ ಕುರಿತು ಮಾಹಿತಿ ನೀಡಿದರು. ಕಾಲೇಜ್ ಉಪಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳು, ತಾಲೂಕ ಆಸ್ಪತ್ರೆ ಆಪ್ತಸಮಾಲೋಚಕರಾದ ವಿನಾಯಕ ಪಟಗಾರ, ಪ್ರಯೋಗಶಾಲಾ ತಂತ್ರಜ್ಞರಾದ ಉಮೇಶ ಕೆ ಉಪಸ್ಥಿತರಿದ್ದರು.
ವರದಿ : ವಿಶ್ವನಾಥ ಸಾಲ್ಕೋಡ್, ಹೊನ್ನಾವರ

More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”