ಹೊನ್ನಾವರ; ದುಡಿಯುವ ವರ್ಗದ ಮೇಲಿನ ದಬ್ಬಾಳಿಕೆ ಹಿಮ್ಮೆಟ್ಟಿಸಲು, ಕಾರ್ಮಿಕ ಕಾಯ್ದೆಗಳ ಸಂಹಿತಿಕರಣ ವಿರೋಧಿಸಿ, ಬೆಲೆ ಏರಿಕೆ ತಡೆಗಟ್ಟಿ ಶಾಸನಬದ್ಧ ಕನಿಷ್ಠ ಕೂಲಿಗಾಗಿ, ಯೋಜನಾ ಕಾರ್ಮಿಕರನ್ನೂ ಒಳಗೊಂಡ ಎಲ್ಲಾ ದುಡಿಯುವ ಮಹಿಳೆಯರ ಹಕ್ಕುಗಳಿಗಾಗಿ, ಪರಿಸರ ಪೂರಕ ಉದ್ಯೋಗಾವಕಾಶಕ್ಕಾಗಿ, ಜಿಲ್ಲೆಯ ಅಭಿವೃದ್ಧಿ ಹಾಗೂ ಕೋಮು ಸೌಹಾರ್ದತೆ ಸಾಧಿಸಲು, ರೈತ, ಕಾರ್ಮಿಕ, ಕೃಷಿಕೂಲಿಕಾರರ ಸಖ್ಯತೆ ಬಲಗೊಳಿಸಲು ಎರಡು ದಿನಗಳ ಜಿಲ್ಲಾ ಸಮ್ಮೇಳನ ನಡೆಸಲಾಯಿತು.
ಕಾರ್ಮಿಕ ವರ್ಗ ಆಳುವವರ ಬಣ್ಣದ ಮಾತುಗಳಿಗೆ ಮರುಳಾಗದೇ ಕಾರ್ಮಿಕ – ರೈತಾಪಿ ಸಖ್ಯತೆಯಲ್ಲಿ ಹೋರಾಟಗಳ ತೀವ್ರಗೊಳಿಸೋಣ ಮತ್ತು ಸಂಘಟನೆಯನ್ನು ಇನ್ನಷ್ಟು ಬಲಗೊಳಿಸಿ ಆಳುವವರ ಹಿಂದಿನ ರಾಜಕೀಯ ಬಯಲುಗೊಳಿಸೋಣ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರA ಕರೆ ನೀಡಿದರು.
ಅವರು ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ ೪-೫ ಅಕ್ಟೋಬರ್ ೨೦೨೫ ಎರಡು ದಿನಗಳ ಕಾಲ ನಡೆದ ಸಿಐಟಿಯು ಉತ್ತರ ಕನ್ನಡ ಜಿಲ್ಲಾ ೧೧ ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಂದುವರಿದು ಮಾತಾಡುತ್ತ, “ಹಿಂದಿನ ಬಿಜೆಪಿ ಸರ್ಕಾರ ಕೊನೆಯ ಅಧಿವೇಶನದ ಕೊನೆಯ ದಿನ ಕಾರ್ಖಾನೆ ಕಾಯ್ದೆಗೆ ತಿದ್ದುಪಡಿ ತಂದು ೮ ಗಂಟೆಯಿದ್ದ ಕೆಲಸದ ಅವಧಿಯನ್ನು ೧೨ ಗಂಟೆಗೆ ಹೆಚ್ಚಿಸಿ, ಚಾರಿತ್ರಿಕವಾಗಿ ಪಡೆದಿದ್ದ ಕೆಲಸದ ಅವಧಿಯ ಹಕ್ಕನ್ನು ಮೊಟಕುಗೊಳಿಸಿತು. ಪ್ರಪಂಚದಾದ್ಯAತ ಕೆಲಸದ ಅವಧಿಯನ್ನು ಕಡಿಮೆ ಮಾಡಿ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಬಾರತದಲ್ಲಿ ಈ ತಿದ್ದುಪಡಿಗಳನ್ನು ತರುವ ಮೂಲಕ ಐ.ಎಲ್.ಓ. ಸಮ್ಮೇಳನದÀ ನಿರ್ಣಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ. ನಮ್ಮ ಸರ್ಕಾರಗಳು ಕೆಲಸದ ಅವಧಿಯನ್ನು ಹೆಚ್ಚಿಸಿ ಓವರ್ ಟೈಮ್ ಗಂಟೆಗಳನ್ನು ೭೫ ರಿಂದ ೧೪೦ ಗಂಟೆಗಳಿಗೆ ಹೆಚ್ಚಿಸಿರುವ ಕ್ರಮದಿಂದ ನಿರುದ್ಯೋಗ ಮತ್ತಷ್ಟು ಹೆಚ್ಚಾಗಲಿದೆ. ಈ ರೀತಿ ದಿನಕ್ಕೆ ೧೪ ಗಂಟೆಗಳ ಕಾಲ ಕೆಲಸ ಮಾಡಲು ಒತ್ತಾಯಿಸುವುದು ಎಂದರೆ, ಬ್ರಿಟಿಷ್ ವಸಾಹತುಶಾಹಿ ಯುಗಕ್ಕೆ ಕಾರ್ಮಿಕರನ್ನು ಹಿಂದಕ್ಕೆ ತಳ್ಳಿದಂತೆ ಎಂದರು.

ಬಹಿರ0ಗ ಸಭೆ ಉದ್ಘಾಟನೆಯ ಅತಿಥಿಗಳಾದ ಸಿಐಟಿಯು ರಾಜ್ಯ ಕಾರ್ಯದರ್ಶಿ ಹಾಗೂ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಗಳೂ ಆದ ಎಚ್.ಎಸ್.ಸುನಂದಾ ಅವರು ಮಾತನಾಡಿ, ನವ ಉದಾರಿಕರಣದ ನೀತಿಗಳ ಪರಿಣಾಮವಾಗಿ ಸರಕಾರಿ ಹಾಗೂ ಖಾಸಗಿ ಉದ್ಯೋಗಗಳಲ್ಲಿ ಗುತ್ತಿಗೆ, ಹಂಗಾಮಿ, ತಾತ್ಕಾಲಿಕ, ಟ್ರೆöÊನಿ, ನಿಗಧಿತ ಅವಧಿಯ ಕಾರ್ಮಿಕ, ಮುಂತಾದ ಹಲವು ಖಾಯಂಯೇತರ ಸ್ವರೂಪದ ಕೆಲಸಗಳಲ್ಲಿನ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಬಂಡವಾಳದಾರರ ಲಾಭದ ಹೆಚ್ಚಳಕ್ಕೆ ಅಗ್ಗದ ದರದಲ್ಲಿ ಕಾರ್ಮಿಕರ ಶ್ರಮವು ದೊರೆಯುವಂತೆ ಮಾಡಿ ಕಾರ್ಮಿಕರನ್ನು ಶೋಷಣೆ ಮಾಡಲಾಗುತ್ತಿದೆ.
ಭಾರತದಲ್ಲಿ ಮಾನವ ಅಭಿವೃದ್ಧಿ ಸೂಚ್ಯಾಂಕವನ್ನು ವ್ಯವಸ್ಥಿತವಾಗಿ ಕಾಪಾಡಲು ದೇಶ ಮಟ್ಟದಲ್ಲಿ ೭೦ ಕ್ಕೂ ಹೆಚ್ಚು ಸರ್ಕಾರಿ ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಈ ಯೋಜನೆಗಳನ್ನು ೬೩ ಕ್ಕೆ ಇಳಿಸಲಾಯಿತು. ನಂತರ ೮ ಯೋಜನೆಗಳನ್ನು ವಿಸರ್ಜನೆ ಮಾಡಿರುವುದು ದುರಂತ. ಇದೆಲ್ಲದರ ವಿರುದ್ಧ ಜಾಗೃತ ಪ್ರಜ್ಞೆ ವಹಿಸಿ ಹೋರಾಟಕ್ಕೆ ಇಳಿಯುವುದೊಂದೇ ಮಾರ್ಗ ಎಂದರು.
ಸ್ವಾಗತ ಸಮಿತಿ ಸಲಹೆಗಾರರು ಹಾಗೂ ರಂಗ ನಿರ್ದೇಶಕರಾದ ಸಾಹಿತಿ ಕಿರಣ್ ಭಟ್ ಬಂಡವಾಳಶಾಹಿ ಕುತಂತ್ರಗಳ ಕುರಿತು ವಿವರಿಸಿ ಕವಿ ಸಿದ್ದಲಿಂಗಯ್ಯನವರ ಕಾವ್ಯ ಪ್ರಸ್ತುತಪಡಿಸಿದರು. ಯಮುನಾ ಗಾಂವ್ಕರ್, ಜಿಲ್ಲೆಯಲ್ಲಿ ಕಾರ್ಮಿಕರ ರೈತಾಪಿ ಜನತೆಯ ಸ್ಥಿತಿಗತಿಗಳ ಬಗ್ಗೆ, ಪರಿಸರ ಪೂರಕ ಕೈಗಾರಿಕೆಗಳ ಸ್ಥಾಪನೆ ಬಗ್ಗೆ ವಿವರಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಕಾ. ಶ್ಯಾಮನಾಥ ನಾಯ್ಕ ಕಾರ್ಮಿಕ-ಕೃಷಿಕರ ಸಖ್ಯತೆಯ ಅಗತ್ಯತೆಯನ್ನು ವ್ಯಕ್ತಪಡಿಸಿದರು. ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ಗೌಡ ಸ್ವಾಗತಿಸಿದರು. ಸ್ವಾಗತ ಸಮಿತಿಯ ಖಜಾಂಚಿ ಗೀತಾ ನಾಯ್ಕ ವಂದಿಸಿದರು. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಸಿ ಆರ್ ಶಾನಭಾಗ ಪ್ರಾಸ್ತಾವಿಕ ಮಾತುಗಳನ್ನಾಡಿ ಸಮ್ಮೇಳನದ ಉದ್ದೇಶಗಳನ್ನು ವಿವರಿಸಿದರು. ವೇದಿಕೆಯಲ್ಲಿ ನಾಗಪ್ಪ ನಾಯ್ಕ್, ಸಲೀಂ ಸೈಯದ್, ತಿಮ್ಮಪ್ಪ ಗೌಡ, ಮುತ್ತ ಪೂಜಾರಿ, ಗೀತಾ ನಾಯ್ಕ್ ಹೊನ್ನಾವರ, ಗೀತಾ ನಾಯ್ಕ್ ಭಟ್ಕಳ, ವಿದ್ಯಾ ವೈದ್ಯ ಉಪಸ್ಥಿತರಿದ್ದರು.
ನಿರ್ಣಯಗಳು: ಪ್ರತಿನಿಧಿ ಅಧಿವೇಶನವು ಸಮ್ಮೇಳನದ ತಳಹದಿಯಾಗಿದ್ದು, ಇದರಲ್ಲಿ ದುಡಿಯುವ ವರ್ಗದ ಮೇಲಿನ ದಬ್ಬಾಳಿಕೆ ಹಿಮ್ಮೆಟ್ಟಿಸುವ ಹೋರಾಟ ರೂಪಿಸಲು ನಿರ್ಧರಿಸಿ ೧೩ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮುಖ್ಯವಾಗಿ ಕನಿಷ್ಟ ವೇತನ ಹೆಚ್ಚಳಕ್ಕೆ ಒತ್ತಾಯಿಸಿ, ಕೆಲಸದ ಅವಧಿ ಹೆಚ್ಚಳ ವಾಪಸ್ಸಿಗೆ ಗುತ್ತಿಗೆ ಪದ್ಧತಿ ನಿಯಂತ್ರಣಕ್ಕೆ ಒತ್ತಾಯಿಸಿ, ಹಿಂಸೆ ಮುಕ್ತ ಬದುಕನ್ನು ಖಾತ್ರಿಗೊಳಿಸಬೇಕೆಂದು ಒತ್ತಾಯಿಸಿ, ಧರ್ಮಸ್ಥಳದಲ್ಲಿ ನಡೆಯುತ್ತಿರುವ ಅಮಾನವೀಯ ಕ್ರೌರ್ಯ ತಡೆಗಟ್ಟಲು ಸಮಗ್ರ ತನಿಖೆಗೆ ಆಗ್ರಹಿಸಿ, ದುಡಿಯುವ ಮಹಿಳೆಯರ ಕುರಿತು ಯೋಜನಾ ಕಾರ್ಮಿಕರಾದ ಅಂಗನವಾಡಿ, ಅಕ್ಷರದಾಸೋಹ ನೌಕರರ ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಸೌಲಭ್ಯಗಳ ಜಾರಿಗಾಗಿ, ಸಾರ್ವಜನಿಕ ಸಂಪತ್ತಿನ ಮಾರಾಟ, ಖಾಸಗಿ ಸಹಭಾಗಿತ್ವ ವಿರೋಧಿಸಿ, ಜಾತಿ ತಾರತಮ್ಯ-ಅಸ್ಪೃಶ್ಯತೆ ಆಚರಣೆ ತಡೆಗಟ್ಟಲು ಒತ್ತಾಯಿಸಿ ಮಹಿಳೆಯರ ಮೇಲಿನ ಎಲ್ಲಾ ರೀತಿಯ ದೌರ್ಜನ್ಯ ತಡೆಗಟ್ಟಲು, ಪಡಿತರ ವ್ಯವಸ್ಥೆಯನ್ನು ಸಾರ್ವತ್ರೀಕರಿಸಿ ಎಲ್ಲ ಜನತೆಗೆ ಆಹಾರ ಭದ್ರತೆಯನ್ನು ಖಾತ್ರಿ ಮಾಡಿ, ರದ್ದಾದ ಬಿ.ಪಿ.ಎಲ್ ರೇಷನ್ ಕಾರ್ಡ್ಗಳನ್ನು ಸಕ್ರಿಯಗೊಳಿಸಬೇಕೆಂದು ಒತ್ತಾಯಿಸಿ, ಬೆಂಬಲ ಬೆಲೆ ಹಾಗೂ ಭೂಮಿ ಹಕ್ಕು ನೀಡಲು ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಹೆಚ್ಚಿಸಲು ಆಗ್ರಹಿಸಿ, ಪೇಪರ್ ಮಿಲ್ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ನಿರ್ಣಯಗಳನ್ನು ಲಿಖಿತವಾಗಿ ಮಂಡಿಸಿ, ಚರ್ಚಿಸಿ ಹೋರಾಟ ತೀವ್ರಗೊಳಿಸುವ ತೀರ್ಮಾನ ಕೈಗೊಳ್ಳಲಾಯಿತು.
ಹೊಸ ಸಮಿತಿ ಆಯ್ಕೆ : ಅಧ್ಯಕ್ಷರಾಗಿ ಕಾ. ತಿಲಕ ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಸಲೀಂ ಸಯ್ಯದ್, ಖಜಾಂಚಿ ಜಯಶ್ರೀ ಹಿರೇಕರ್ ಆಯ್ಕೆ.

More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”