November 19, 2025

ರೈತ ಸಂಘ ಬೈಂದೂರು ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ನೇತ್ರತ್ವದಲ್ಲಿ ಅನಿರ್ಧಿಷ್ಟಾವಧಿ ಧರಣಿ 19ನೇ ದಿನ

ಭಾವನಾ ಸುದ್ದಿ ಬೈಂದೂರು
ಬೈಂದೂರು : ಈಗಿರುವ ಪಟ್ಟಣ ಪಂಚಾಯತಿನಿAದ ಗ್ರಾಮೀಣ ಪ್ರದೇಶಗಳನ್ನು ಬೇರ್ಪಡಿಸಿ ಗ್ರಾಮ ಪಂಚಾಯತಿ ರಚನೆಮಾಡಬೇಕೆಂದು ಆಗ್ರಹಿಸಿ ರೈತ ಸಂಘ ಬೈಂದೂರು ಇದರ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ನೇತ್ರತ್ವದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ 19ನೇ ದಿನಕ್ಕೆ ಕಾಲಿಟ್ಟಿದೆ.

ಬೈಂದೂರು ವ್ಯವಸಾಯ ಸೇವಾ ಸಹಕಾರ ನಿ ಯಡ್ತರೆ ಅಧ್ಯಕ್ಷ ತಗ್ಗರ್ಸೆ ನಾರಾಯಣ ಹೆಗ್ಡೆ ಅವರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಹಳ್ಳಿಭಾಗಗಳನ್ನು ಸೇರಿಸುವುದು ರೈತರಿಗೆ ಮಾಡಿದ ಅನ್ಯಾಯವಾಗಿದೆ. ಈ ಹೋರಾಟ ಪಕ್ಷಾತೀತವಾಗಿ ನಡೆಯುತ್ತಿದ್ದು ಎಲ್ಲಾ ನಾಯಕರು ರಾಜಕೀಯ ಮರೆತು ನ್ಯಾಯ ಒದಗಿಸಿಕೊಡಬೇಕು.ಈ ಹೋರಾಟಕ್ಕೆ ಕ್ಷೇತ್ರದ ಸಮಸ್ತ ರೈತರ ಸಹಕಾರ ಇದೆ.ಸರಕಾರದಿಂದ ಕೇವಲ ಭರವಸೆ ಸಾಲದು.ಸ್ಪಷ್ಟ ಆದೇಶ ಸಿಗುವ ವರಗೆ ಹೋರಾಟ ನಿಲ್ಲದು ಮತ್ತು ಇದಕ್ಕೆ ಪೂರ್ಣ ಸಹಕಾರ ಇದೆ ಎಂದು ಹೇಳಿದರು.

ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ, ರೈತರ ಹೋರಾಟ ಚಳುವಳಿಯಾಗಿ ಬೆಳೆಯುತ್ತಿದೆ ಇದು ರಾಜಕೀಯ ರಹಿತ ಹೋರಾಟ ಇದು ರೈತರ ನ್ಯಾಯದ ಆಗ್ರಹ. ಫೇಸ್ ಬುಕ್, ವಾಟ್ಸಾಪ್ ನಲ್ಲಿ ಅಪಪ್ರಚಾರ ಮಾಡುವವರು ತಾಕತ್ತಿದ್ದರೆ ಈ ವೇದಿಕೆಗೆ ಬನ್ನಿ ಉತ್ತರ ಕೊಡ್ತವೆ ಅದು ಬಿಟ್ಟು ನಿಮ್ಮ ನಾಟಕ ಬೇಡ ಸಾದ್ಯ ಇದ್ದರೆ ಈ ವೇದಿಕೆಗೆ ಬಂದು ರೈತರ ಜೊತೆ ಸಹಕರಿಸಿ ಎಂದರು.

ಕುAಜಳ್ಳಿ ಭಾಗದ ರೈತರು ತಾಲೂಕು ಆಡಳಿತ ಸೌಧದ ಎದುರು ಟ್ರಾಕ್ಟರ್ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮ್ಯಾಥ್ಯ ಕೆ.ಎಸ್, ಕೃಷ್ಣ ದೇವಾಡಿಗ, ನೆಲ್ಯಾಡಿ ದಿವಾಕರ್ ಶೆಟ್ಟಿ, ಪ್ರಭಾಕರ್ ಗಾಣಿಗ ತಗ್ಗರ್ಸೆ, ರಾಜು ಹುದಾರ್ ತಗ್ಗರ್ಸೆ ಹಾಗೂ ನೂರಾರು ಗ್ರಾಮೀಣ ಭಾಗದ ರೈತರು ಪ್ರತಿಭಟನೆ ಭಾಗವಹಿಸಿದ್ದರು.
ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೀರಭದ್ರ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.

ವರದಿ : ಎಚ್. ಸುಶಾಂತ್ ಆಚಾರ್ ಬೈಂದೂರು

About The Author

error: Content is protected !!