August 29, 2025

ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಫಲಿತಾಂಶ ಶೇಕಡಾ 100

ಭಟ್ಕಳ ; ಕರ್ನಾಟಕ ವಿಶ್ವವಿದ್ಯಾಲಯದವರು ನಡೆಸಿದ 2024-25 ನೇ ಸಾಲಿನ ಬಿ.ಎಡ್ 3 ನೇ ಸೆಮಿಸ್ಟರ ಪರೀಕ್ಷೆಯ ಫಲಿತಾಂಶವು ಪ್ರಕಟವಾಗಿದ್ದು, ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಫಲಿತಾಂಶ ಶೇಕಡಾ 100 ರಷ್ಟು ಆಗಿದ್ದು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಗೀತಾ ಕೆ. ಆರ. 91.17% ಅಂಕದೊAದಿಗೆ ಪ್ರಥಮ, ಪೂಜಾ ಪ್ರಕಾಶ ನಾಯ್ಕ 90.67% ಅಂಕದೊAದಿಗೆ ದ್ವಿತೀಯ ಹಾಗೂ ಪ್ರಿಯಾಂಕಾ ದೇವಾಡಿಗ ಮತ್ತು ಲತಾ ದೇವಾಡಿಗ 90.50% ಅಂಕದೊAದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ. ಉತ್ತಮ ಸಾಧನೆ ತೋರಿದ ಎಲ್ಲಾ ವಿದ್ಯಾರ್ಥಿಗಳಿಗೆ ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಅಧ್ಯಕ್ಷರಾದ ಡಾ. ಸುರೇಶ ವಿ. ನಾಯಕ, ಮ್ಯಾನೇಜಿಂಗ್ ಟ್ರಸ್ಟಿಯವರಾದ ಶ್ರೀ ಆರ್, ಜಿ, ಕೊಲ್ಲೆ, ಟ್ರಸ್ಟಿ ಮ್ಯಾನೇಜರ್À ಶ್ರೀ ರಾಜೇಶ ನಾಯಕ, ಪ್ರಾಂಶುಪಾಲರಾದ ಡಾ. ವಿರೇಂದ್ರ ವಿ. ಶಾನಬಾಗ, ಹಾಗೂ ಬೋಧಕ- ಬೋಧಕೇತರ ಸಿಬ್ಬಂಧಿಗಳು ಅಭಿನಂದಿಸಿರುತ್ತಾರೆ.

About The Author