November 19, 2025

ಅಕ್ಟೋಬರ್ 12 ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥ ಸಂಚಲನಕ್ಕೆ ಭದ್ರತಾ ರೂಟ್ ಮಾರ್ಚ್

ಭಟ್ಕಳ: ಅಕ್ಟೋಬರ್ 12ರಂದು ತಾಲ್ಲೂಕಿನಲ್ಲಿ ನಡೆಯಲಿರುವ ಬೃಹತ್ ಪಥ ಸಂಚಲನದ ಹಿನ್ನೆಲೆಯಲ್ಲಿ ಭಟ್ಕಳ ನಗರದಲ್ಲಿ ಪೊಲೀಸರು ಭದ್ರತಾ ಕ್ರಮವಾಗಿ ರೂಟ್ ಮಾರ್ಚ್ ನಡೆಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್ ಅವರ ಮಾರ್ಗದರ್ಶನದಲ್ಲಿ ಹಳೆಯ ಬಸ್ ನಿಲ್ದಾಣ, ಮಾರಿಕಟ್ಟೆ, ಹನುಮಾನ್ ದೇವಸ್ಥಾನ, ಹೋ ಮಾರ್ಕೆಟ್ ಮುಂತಾದ ಪ್ರಮುಖ ಬೀದಿ ಮತ್ತು ರಸ್ತೆಗಳು, ಗಲ್ಲಿಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರೂಟ್ ಮಾರ್ಚ್ ಜರುಗಿತು.

ಈ ವೇಳೆ ಡಿವೈಎಸ್ಪಿ ಮಹೇಶ್ ಕೆ.ಎಂ, ಡಿಆರ್ ಡಿವೈಎಸ್ಪಿ ರಾಘವೇಂದ್ರ ನಾಯ್ಕ, ನಗರ ಮತ್ತು ಗ್ರಾಮಿಣ ಠಾಣೆಗಳ ಸಿಪಿಐಗಳು ದಿವಾಕರ ಪಿ.ಎಂ., ಮಂಜುನಾಥ ಲಿಂಗಾರೆಡ್ಡಿ, ಪಿಎಸೈ ನವೀನ್ ನಾಯ್ಕ, ತಿಮ್ಮಪ್ಪ ಮೊಗೇರ್ ರನ್ ಗೌಡ್ ಮತ್ತು ಅನೇಕ ಪೊಲೀಸ್ ಅಧಿಕಾರಿಗಳು ಹಾಜರಾಗಿದ್ದರು.

About The Author

error: Content is protected !!