November 19, 2025

ಮಾನಸಿಕವಾಗಿ ನೆಮ್ಮದಿಯಿಂದ ಕೂಡಿರಲು ಪ್ರಾಣಾಯಾಮವು ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ನಿವೃತ್ತ ಉಪನ್ಯಾಸಕರಾದ ನರಸಿಂಹ ಪಂಡಿತ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

 ಹೊನ್ನಾವರ : ಸರ್ಕಾರಿ ಪದವಿ ಕಾಲೇಜಿನಲ್ಲಿ ಶನಿವಾರ ಲಯನ್ಸ್ ಕ್ಲಬ್ ವತಿಯಿಂದ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿ ಜೀವನದಲ್ಲಿ ಮಾನಸಿಕ ಒತ್ತಡ ನಿವಾರಣೆಗೆ ಇರುವ ವ್ಯಾಯಮಗಳ ಬಗ್ಗೆ ಅರಿತುಕೊಂಡಾಗ, ಭವಿಷ್ಯದಲ್ಲಿ ಆರೋಗ್ಯವಂತ ನಾಗರಿಕನಾಗಲು ಸಾಧ್ಯವಿದೆ. ನಮ್ಮ ಮನಸ್ಸಿನ ಭಾವನೆಗೆ ಹಾಗೂ ಉಸಿರಿಗೂ ಸಂಭದವಿದೆ. ಮನಸ್ಸು ನಿಯಂತ್ರಣ ಮಾಡಲು ಸುಲಭವಾಗಿ ಸಾಧ್ಯವಿಲ್ಲ.  ಗಾಳಿಪಟವನ್ನು ಹೇಗೆ ದಾರದಿಂದ ನಿಯಂತ್ರಿಸಲು ಸಾಧ್ಯವೋ, ಹಾಗೆಯೇ ನಮ್ಮ ಮನಸ್ಸನ್ನು ಉಸಿರಾಟದ ಮೂಲಕ ನಿಯಂತ್ರಣ ಮಾಡಬಹುದು ಎಂದು ಮಾನಸಿಕವಾಗಿ ಸದೃಡವಾಗಿರಲು  ಇರುವ ಮಾರ್ಗಗಳ ಕುರಿತು ಮಾಹಿತಿ ನೀಡಿದರು.

ಲಯನ್ಸ್ ಅಧ್ಯಕ್ಷ ಜೀವತ್ತಮ ನಾಯ್ಕ ಮಾತನಾಡಿ ಅಕ್ಟೋಬರ್ 10 ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಒಂದು ವಾರಗಳ ಕಾಲ ಮಾನಸಿಕ ಆರೋಗ್ಯದ ಜಾಗೃತಿ ಕಾರ್ಯಕ್ರಮ ಇಡಿ ವಿಶ್ವದೆಲ್ಲಡೆ ಲಯನ್ಸ್ ಕ್ಲಬ್ ಆಯೋಜಿಸುತ್ತಿದೆ. ದೈಹಿಕವಾಗಿ ಅಷ್ಟೆ ಅಲ್ಲದೇ ಮಾನಸಿಕವಾಗಿ ವ್ಯಕ್ತಿ ಸದೃಡವಾದಾಗ ಮಾತ್ರ ಲವಲವಿಕೆಯಿಂದ ಇರಲು ಸಾಧ್ಯವಿದೆ ಎಂದು ಲಯನ್ಸ್ ಕ್ಲಬ್ ಕಾರ್ಯವೈಖರಿಯ ಕುರಿತು ಮಾಹಿತಿ ನೀಡಿದರು.

  ಲಯನ್ಸ್ ಕಾರ್ಯದರ್ಶಿ ಎ.ವಿ.ಶ್ಯಾನಭಾಗ ಪ್ರಾಸ್ತವಿಕವಾಗಿ ಮಾತನಾಡಿ ತಾಲೂಕಿನಲ್ಲಿ 61 ಜನರು ಲಯನ್ಸ ಸದಸ್ಯರಿದ್ದು, ಈ ವರ್ಷ ಸುವರ್ಣ ಮಹೋತ್ಸವದ ನಿಮಿತ್ತ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಜಗತ್ತಿನ ಅತಿದೊಡ್ಡ ಸಂಸ್ಥೆ ಲಯನ್ಸ ಕ್ಲಬ್ 200 ದೇಶದಲ್ಲಿ 15 ಲಕ್ಷ ಸದಸ್ಯರಿದ್ದಾರೆ ಎಂದು ತಾಲೂಕಿನಲ್ಲಿ ಲಯನ್ಸ್ ಸೇವಾ ಕಾರ್ಯದ ಕುರಿತು ಮಾಹಿತಿ ನೀಡಿದರು.

ಕಾಲೇಜಿನ ಪ್ರಾಚಾರ್ಯ ಡಾ. ಎನ್.ಎಮ್. ಖಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಲಯನ್ ರಾಜೇಶ ಸಾಳೆಹಿತ್ತಲ್ ಲಯನ್ಸ್ ಸದಸ್ಯರು ಕಾಲೇಜಿನ ಉಪನ್ಯಾಸಕರು ಇದ್ದರು.
ಕಾಲೇಜಿನ ಎನ್.ಎಸ್,ಎಸ್ ಸಂಯೋಜಕರಾದ ಸುರೇಶ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ರೊವರ್ಸ್ ವಿಭಾಗದ ಉಪನ್ಯಾಸಕ ಡಾ. ಪ್ರಸನ್ನ ಎಂ. ವಂದಿಸಿದರು.
ಭಾವನಾ ಟಿವಿಗಾಗಿ ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!