ಹೊನ್ನಾವರ; ಪ್ರತಿಷ್ಠೆಯ ಕಣವಾಗಿದ್ದ ಹೊನ್ನಾವರ ಪಿಎಲ್ ಡಿ ಬ್ಯಾಂಕ್ ಚುನಾವಣೆಯ ಫಲಿತಾಂಶವು ಪ್ರಕಟಗೊಂಡಿದ್ದು ಸಚಿವ ಮಂಕಾಳ ವೈದ್ಯ ಬಣದ ಅಭ್ಯರ್ಥಿಗಳು ಎಲ್ಲಾ ಕ್ಷೇತ್ರದಲ್ಲಿಯೂ ಗೆಲುವು ಸಾಧಿಸುವ ಮುಲಕ ಪ್ರಾಬಲ್ಯ ಮೆರೆದಿದೆ.

ಮಂಗಳವಾರ ಹೊನ್ನಾವರ ಪಟ್ಟಣದ ನ್ಯೂ ಇಂಗ್ಲೀಷ್ ಸ್ಕೂಲ್ ಸಭಾಭವನದಲ್ಲಿ ನಡೆದ ಮತ ಏಣಿಕೆಯನ್ನು ನಡೆಸಲಾಯಿತು. ಸರಿಸುಮಾರು ಒಂಬತ್ತು ತಿಂಗಳ ಹಿಂದೆ ಜನವರಿಯಲ್ಲಿ ನಡೆದ ಚುನಾವಣೆ ನಡೆದಿತ್ತು. ಕೊರ್ಟ್ ಆದೇಶದ ಬಳಿಕ ಮತ ಏಣಿಕೆ ಕಾರ್ಯ ನಡೆದಿದ್ದು, ನೂತನ ನಿರ್ದೆಶಕರಾಗಿ ಸಾಲಗಾರ ಕ್ಷೇತ್ರದಿಂದ ಗೋವಿಂದ ಸುಬ್ಬ ನಾಯ್ಕ ಗೇರುಸೊಪ್ಪಾ, ಯೋಗೀಶ ರಾಯ್ಕರ್, ರಾಘವೇಂದ್ರ ನಾಯ್ಕ ಗೇರುಸೊಪ್ಪಾ, ವಿ.ಕೆ.ವಿಶಾಲ್ ವಂದೂರು, ಸತೀಶ ತಾಂಡೇಲ್ ಕರ್ಕಿ, ಸಂಜೀವ ನಾಯ್ಕ ಮಂಕಿ, ಹನುಮಂತ ನಾಯ್ಕ ಚಂದಾವರ, ಹರೀಶ ಗೌಡ ಕೆರವಳ್ಳಿ ಆಯ್ಕೆಯಾದರು. ಪರಿಶಿಷ್ಠ ಜಾತಿ ಮೀಸಲು ಕ್ಷೇತ್ರದಲ್ಲಿ ಶಿವರಾಮ ಸಂಗುಮಣೆ ಮಂಕಿ, ಹಿಂದುಳಿದ ಅ ವರ್ಗ ಕ್ಷೇತ್ರದಲ್ಲಿ ಕೃಷ್ಣ ಗೌಡ ಮಾವಿನಕುರ್ವಾ ಮಹಿಳಾ ಮೀಸಲು ಕ್ಷೇತ್ರದಲ್ಲಿ ಶ್ರುತಿ ಗುರುದತ್ತ ಭಟ್ ಅಪಗಾಲ, ವಾಸಂತಿ ಅಣ್ಣಯ್ಯ ನಾಯ್ಕ ಮಂಕಿ, ಬ ವರ್ಗ ಮೀಸಲು ಕ್ಷೇತ್ರದಿಂದ ಚಂದ್ರಶೇಖರ ಗೌಡ ಚಿತ್ತಾರ, ಸಾಲಗಾರಲ್ಲದ ಕ್ಷೇತ್ರದಿಂದ ರಾಜೇಶ ನಾಯ್ಕ ಹುಂಜಿನಮಕ್ಕಿ ಆಯ್ಕೆಯಾಗಿದ್ದಾರೆ. ಪರಿಶಿಷ್ಠ ಪಂಗಡ ಮೀಸಲು ಕ್ಷೇತ್ರದಿಂದ ಭಾಗೀರಥಿ ಗೊಂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಜೇತರಾದ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿಗಳು ಆದೇಶ ಪ್ರತಿ ವಿತರಿಸಿದರು. ಕಾಂಗ್ರೇಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪಟ್ಟಣದ ಸಚಿವರ ಕಾರ್ಯಲಯದಲ್ಲಿ ಜಿಲ್ಲಾ ಉಸ್ತುವಾರಿ ರಾಜ್ಯದ ಮೀನುಗಾರಿಕೆ ಬಂದರು, ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ ವೈದ್ಯ ವಿಜೇತರಾದವರಿಗೆ ಅಭಿನಂದಿಸಿದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”