November 19, 2025

ವೈದ್ಯಕೀಯ ಪರೀಕ್ಷೆಯ ವೇಳೆ ಪರಾರಿಯಾಗಿದ್ದ ಕುಖ್ಯಾತ ಕಳ್ಳ ಫೌಜಾನ್, ಮಂಡ್ಯದಲ್ಲಿ ಹೆಡೆಮುರಿ ಕಟ್ಟಿ ಬಂಧಿಸಿದ ಕುಮಟಾ ಪೊಲೀಸರು

ಭಟ್ಕಳ : ಕುಮಟಾ ಗಿಬ್ ಸರ್ಕಲ್ ಬಳಿಯ ಬ್ಯಾಟರಿ ಅಂಗಡಿ ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವಾಗ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ಕುಖ್ಯಾತ ಕಳ್ಳ ಫೌಜಾನ್ ಅಹ್ಮದ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮೂರು ದಿನಗಳ ಬೆನ್ನಟ್ಟಿದ ಅಪರಾಧ ವಿಭಾಗದ ಪಿಎಸ್ ಐ ಮಯೂರ ಪಟ್ಟಣ ಶೆಟ್ಟಿ ತಂಡ, ಮಂಡ್ಯ ಜಿಲ್ಲೆಯ ಮದ್ದೂರು ಸರ್ಕಾರಿ ಆಸ್ಪತ್ರೆಗೆ ನುಗ್ಗಿ ಆರೋಪಿ ಹೆಡೆಮುರಿ ಕಟ್ಟಿ ವಶಕ್ಕೆ ಪಡೆದುಕೊಂಡಿದೆ.

ಮೂಲಗಳ ಪ್ರಕಾರ, ಬ್ಯಾಟರಿ ಶಾಪ್ ಕಳ್ಳತನ ಪ್ರಕರಣದಲ್ಲಿ ಫೌಜಾನ್ ಅಹ್ಮದ (ಭಟ್ಕಳ ಬದ್ರಿಯಾ ಕಾಲೋನಿ) ಸೇರಿದಂತೆ ಇನ್ನಿಬ್ಬರನ್ನು ಪೊಲೀಸರು ಕೇವಲ 24 ಗಂಟೆಗೂ ಒಳಗಾಗಿ ಶಿರಸಿಯಲ್ಲಿ ಪತ್ತೆಹಚ್ಚಿ ಬಂಧಿಸಿದ್ದರು. ನ್ಯಾಯಾಲಯಕ್ಕೆ ಹಾಜರು ಮಾಡುವ ಮೊದಲು, ಶುಕ್ರವಾರ ರಾತ್ರಿ ಆರೋಪಿ ಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿತ್ತು. ಪರೀಕ್ಷೆ ಮುಗಿದ ಬಳಿಕ ವಾಪಸ್ ತೆರಳುವ ಸಂದರ್ಭದಲ್ಲಿ, ಕರ್ತವ್ಯ ನಿರತ ಸಿಬ್ಬಂದಿ ಅಜಾಗರೂಕತೆಯಿಂದ ಫೌಜಾನ್ ಕಾಂಪೌAಡ್ ಹಾರಿ ಕತ್ತಲಿನಲ್ಲಿ ಪರಾರಿಯಾಗಿದ್ದನು.

ಪರಾರಿಯಾದ ಆರೋಪಿಯನ್ನು ಪತ್ತೆಹಚ್ಚಲು ತಕ್ಷಣವೇ ವಿಶೇಷ ತಂಡ ರಚಿಸಲಾಯಿತು. ಪಿಎಸ್ ಐ ಮಯೂರ ಪಟ್ಟಣಶೆಟ್ಟಿ ಜೊತೆಗೆ ಸಿಬ್ಬಂದಿಗಳಾದ ಗಣೇಶ ನಾಯ್ಕ, ದಯಾನಂದ ನಾಯ್ಕ, ಚಿಂದನAದ ನಾಯ್ಕ ಮತ್ತು ಕಿರಣ ನಾಯ್ಕ ಕಾರ್ಯಾಚರಣೆಗೂ ಮುಂದಾಗಿದರು. ಆರೋಪಿ ಬಳಕೆ ಮಾಡಿದ ಮೊಬೈಲ್ ಫೋನ್ ಲೊಕೇಶನ್ ಹಾಗೂ ಇತರ ತಾಂತ್ರಿಕ ಮಾಹಿತಿಗಳನ್ನು ಆಧರಿಸಿ, ಆತ ಮಂಡ್ಯ ಜಿಲ್ಲೆಯ ಮದ್ದೂರು ಪ್ರದೇಶದಲ್ಲಿ ಅಡಗಿಕೊಂಡಿರುವುದು ಖಚಿತವಾಯಿತು.

ಇದಕ್ಕಿಂತ ಮುನ್ನ, ಆತ ಪ್ರೀತಿಸುತ್ತಿದ್ದ ಯುವತಿಯೊಂದಿಗೆ ನಿಶ್ಚಿತಾರ್ಥ ಕಾರ್ಯಕ್ರಮ ನಿಗದಿ ಮಾಡಿಕೊಂಡಿದ್ದರೂ, ಪೊಲೀಸರು ಸನ್ನಾಹದಲ್ಲಿದ್ದಾರೆಂದು ಅನುಮಾನಗೊಂಡ ಫೌಜಾನ್ ನಿಶ್ಚಿತಾರ್ಥವನ್ನು ರದ್ದುಮಾಡಿ ಮದ್ದೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆಂದು ತನಿಖೆಯಿಂದ ತಿಳಿದುಬಂದಿದೆ. ಅಲ್ಲಿಗೆ ಗುಪ್ತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ತಂಡ ಆರೋಪಿ ಫೌಜಾನ್ ಅಹ್ಮದನ್ನು ಶಾಂತಿಯಿAದ ಹೆಡೆಮುರಿ ಕಟ್ಟಿ ವಶಕ್ಕೆ ಪಡೆದು, ನಂತರ ಕುಮಟಾಕ್ಕೆ ಕರೆತಂದು ಕಳ್ಳತನ ಮತ್ತು ಕರ್ತವ್ಯ ನಿರತ ಪೊಲೀಸರ ಕೈಯಿಂದ ಪರಾರಿಯಾದ ಪ್ರಕರಣಗಳಿಗೆ ಸಂಬAಧಿಸಿದAತೆ ಕಠಿಣ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಫೌಜಾನ್ ವಿರುದ್ಧ ಬೈಂದೂರು, ಭಟ್ಕಳ, ಬೇಲೂರು ಸೇರಿ ಹಲವು ಕಡೆ ಕಾರು ಕಳ್ಳತನ, ಬೈಕ್ ಕಳ್ಳತನ, ಪಂಪ್‌ಸೆಟ್ ಮತ್ತು ಮನೆ ಕಳ್ಳತನ ಪ್ರಕರಣಗಳು ದಾಖಲಾಗಿವೆ.

ಇತ್ತೀಚೆಗೆ ಬೇಲೂರಿಗೆ ತೆರಳಿ ಅಲ್ಲಿ ಮನೆ ಕಳ್ಳತನ ಮಾಡಿ ರಿಡ್ಚ್ ಕಾರು ಕದ್ದ ಪ್ರಕರಣದಲ್ಲೂ ಅವನ ಕೈವಾಡವಿದೆ ಎನ್ನಲಾಗುತ್ತಿದೆ. ಜಾಮೀನು ಮೇಲೆ ಹೊರಬಂದ ಬಳಿಕವೂ ಆತ ಮತ್ತೆ ಕಳವುಗಳಲ್ಲಿ ತೊಡಗಿದ್ದಾನೆಂಬುದು ಪೊಲೀಸರ ಆರೋಪ.

About The Author

error: Content is protected !!