ಜಯಕರ್ನಾಟಕ ಜನಪರ ವೇದಿಕೆ ಆಶ್ರಯದಲ್ಲಿ ಕನ್ನಡ ರಾಜ್ಯೊತ್ಸವ, ರಸವಮಂಜರಿ, ಡ್ಯಾನ್ಸ ಧಮಾಕಾ ಕಾರ್ಯಕ್ರಮ ನ. ೧ ರಂದು ರಾತ್ರಿ ೭ ಗಂಟೆಗೆ ಹೊನ್ನಾವರ ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯಲಿದೆ ಎಂದು ಸಂಘಟನೆಯ ತಾಲೂಕ ಅಧ್ಯಕ್ಷ ಆರ್.ಕೆ.ಮೇಸ್ತ ಮಾಹಿತಿ ನೀಡಿದರು.

ಹೊನ್ನಾವರ: ಪ್ರವಾಸಿ ಮಂದಿರದಲ್ಲಿ ನಡೆದ ಆಮಂತ್ರಣ ಬಿಡುಗಡೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಕಳೆದ ಹಲವು ವರ್ಷದಿಂದ ಬೈಕ್ ಜಾಥಾ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸುತ್ತಾ ಬಂದ ಸಂಘಟನೆಯು ಕಳೆದ ವರ್ಷದಿಂದ ಮನೊರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಈ ಬಾರಿಯು ನವೆಂಬರ್ ೧ ರಂದು ಕಾರ್ಯಕ್ರಮ ಆಯೋಜಿಸುತ್ತಿದ್ದು, ಸಾರ್ವಜನಿಕರು ಆಗಮಿಸಿ ಸಹಕಾರ ನೀಡುವಂತೆ ಮನವಿ ಮಾಡಿದರು.
ಸಾಲ್ಕೋಡ್ ವಿ.ಎಸ್.ಎಸ್. ಉಪಾಧ್ಯಕ್ಷ ವಿನಾಯಕ ಶೆಟ್ಟಿ ಮಾತನಾಡಿ ಈ ಬಾರಿಯು ತಾಲೂಕಿನಲ್ಲಿ ಅದ್ದೂರಿ ರಾಜ್ಯೋತ್ಸವ ಆಚರಣೆಗೆ ಸಂಘಟನೆ ಮುಂದಾಗಿದೆ. ಸ್ಥಳಿಯ ಪ್ರತಿಭೆಗಳಿಗೆ ಸಹಕಾರದ ಜೊತೆ ಮಂಗಳೂರಿನ ವಿವಿಧ ಕಲಾ ತಂಡಗಳಿAದ ರಸಮಂಜರಿ, ಡ್ಯಾನ್ಸ ದಮಕಾ ಆಯೋಜಿಸಲಾಗಿದೆ. ಎಲ್ಲಾ ಸಂಘಟನೆಯ ಸಹಕಾರದ ಮೇರೆಗೆ ಕಾರ್ಯಕ್ರಮ ಆಯೋಜಿಸುತ್ತಿದ್ದು, ಪಕ್ಷಾತೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಸಚಿವ ಮಂಕಾಳ ವೈದ್ಯ ಉದ್ಘಾಟಿಸುವರು. ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕಿ ಶಾರದಾ ಶೆಟ್ಟಿ, ಕಾಂಗ್ರಸ್ ಮುಖಂಡ ಮಂಜುನಾಥ ನಾಯ್ಕ, ಎಸ್.ಪಿ ದೀಪನ್ ಎಂ.ಎನ್., ತಹಸೀಲ್ದಾರ ಪ್ರವೀಣ ಕರಾಂಡೆ, ಪ.ಪಂ.ಮೂಖ್ಯಾಧಿಕಾರಿ ಏಸು ಬೆಂಗಳೂರು, ಉದ್ಯಮಿ ಶ್ರೀಕಾಂತ ನಾಯ್ಕ, ಕೃಷ್ಣ ಗೌಡ, ಹೆನ್ರಿ ಲೀಮಾ, ಸಂದೀಪ ಪೂಜಾರಿ, ಪ.ಪಂ.ಅಧ್ಯಕ್ಷ ವಿಜಯ ಕಾಮತ, ಎಪಿಎಂಸಿ ಅಧ್ಯಕ್ಷ ಗೋವಿಂದ ನಾಯ್ಕ, ಪಿಸಿಎಆರ್ ಡಿ ಬ್ಯಾಂಕ್ ನಿರ್ದೇಶಕರಾದ ಸಂಜೀವ ನಾಯ್ಕ, ವಿ.ಕೆ.ವಿಶಾಲ್, ಗ್ರಾ.ಪಂ.ಅಧ್ಯಕ್ಷ ಐ.ವಿ.ನಾಯ್ಕ, ಯೋಗೇಶ ರಾಯ್ಕರ್, ರವಿ ಮೊಗೇರ, ಸಾಲ್ಕೋಡ ವಿ???ಸ್ ಎಸ್ ಉಪಾಧ್ಯಕ್ಷ ವಿನಾಯಕ ಶೆಟ್ಟಿ, ಲುಕಾಸ್ ಫರ್ನಾಂಡೀಸ್, ರೆಗನ್ ಫರ್ನಾಂಡಿಸ್, ಜಯಕರ್ನಾಟಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಪ್ರದೀಪ ಶೆಟ್ಟಿ, ತಾಲೂಕು ಅಧಕ್ಷ ಆರ್.ಕೆ.ಮೇಸ್ತ ಪಾಲ್ಗೊಳ್ಳುವರು.
ಸಭಾ ಕಾರ್ಯಕ್ರಮದ ನಂತರ ಮಂಗಳೂರಿನ ಗೆಜ್ಜೆನಾದ ತಂಡದಿAದ ರಸಮಂಜರಿ, ಡ್ಯಾನ್ಸ ಧಮಕಾ ನಡೆಯಲಿದೆ ವಿಶೇಷ ಆಕರ್ಷಣೆಯಾಗಿ ಕಾಂತಾರ ಸಿನಿಮಾದ ಚಿಕ್ರಾ ಖ್ಯಾತಿಯ ರಕ್ಷಿತ್ ರಾಮಚಂದ್ರ ಶೆಟ್ಟಿ ಆಗಮಿಸಲಿದ್ದಾರೆ. ಸಭಾ ಕಾರ್ಯಕ್ರಮದ ಮೊದಲು ಸ್ಥಳಿಯ ಪ್ರತಿಭೆಗಳಿಂದ ಮನೊರಂಜನಾ ಕಾರ್ಯಕ್ರಮ ಜರುಗಲಿದೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೊಷ್ಠಿಯಲ್ಲಿ ಸಿಂಜಾವ್ ರೋಡ್ರಗೀಸ್,ಕೇಶವ ಮೇಸ್ತ ,ಶ್ರೀಕಾಂತ್ ಮೇಸ್ತ ,ಶಂಕರ ಪಾವಸ್ಕಾರ, ಸಂತೋಷ ಮೇಸ್ತ, ದಾಮೋದರ, ಮಂತು ಫರ್ನಾಂಡಿಸ್, ಹನಿಪ್ ಶೇಖ್, ಶರಣಪ್ಪ ಗೇರುಸೊಪ್ಪ ಮತ್ತಿತರಿದ್ದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”