November 19, 2025

ವೆಂಕ್ಲಾಪುರ ಕ್ರಾಸ್ ಬಳಿ ಮರಳು ಸಾಗಾಟ ತಡೆ ಚಾಲಕನ ವಿರುದ್ಧ ಪ್ರಕರಣ

ಭಟ್ಕಳ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ವೆಂಕ್ಲಾಪುರ ಕ್ರಾಸ್ ಬಳಿ ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದ ವಾಹನವನ್ನು ಭಟ್ಕಳ ಗ್ರಾಮೀಣ ಠಾಣೆ ಪಿಎಸ್‌ಐ ಭರಮಪ್ಪ ಬೆಳಗಲಿ ಪತ್ತೆಹಚ್ಚಿ ಪ್ರಕರಣ ದಾಖಲಿಸಿದ್ದಾರೆ.

ಟಾಟಾ 407 ವಾಹನದಲ್ಲಿ ಸುಮಾರು ರೂ.5,000 ಮೌಲ್ಯದ 1.5 ಯುನಿಟ್ ಮರಳು ಸಾಗಿಸುತ್ತಿದ್ದ ವೇಳೆ ಪೊಲೀಸರು ವಾಹನವನ್ನು ತಡೆದು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಚಾಲಕ ಫೈರೋಜ್ ಖಾನ್ (ತಂದೆ ರೆಹಮಾನ್ ಖಾನ್, ಗುಳ್ಮೇ ಸುನ್ನಿ ಮಸೀದಿ ಹತ್ತಿರ)ನನ್ನು ಬಂಧಿಸಿ, ಮರಳು ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಯಾವುದೇ ಪಾಸ್ ಅಥವಾ ಪರವಾನಗಿ ಇಲ್ಲದೆ ಮರಳು ಸಾಗಾಟ ನಡೆಸಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುವುದರ ಜೊತೆಗೆ ಪರಿಸರಕ್ಕೂ ಹಾನಿ ಉಂಟಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಕುರಿತು ಭಟ್ಕಳ ಗ್ರಾಮೀಣ ಠಾಣೆಯ ಪಿಎಸ್‌ಐ ಭರಮಪ್ಪ ಬೆಳಗಲಿ ಸರಕಾರದ ಪರವಾಗಿ ದೂರು ನೀಡಿದ್ದಾರೆ.

About The Author

error: Content is protected !!