November 19, 2025

ಶಿಲ್ಪಿ ಅಣ್ಣಪ್ಪ ನಾಯ್ಕ ನಿಧನ

ಹೊನ್ನಾವರ: ಶಿಲಾಮಯ ದೇವಸ್ಥಾನಗಳ ಶಿಲ್ಪಿ ಕೊಡ್ಸುಳು ಅಣ್ಣಪ್ಪ ನಾಯ್ಕ (47) ನಿಧನರಾಗಿದ್ದಾರೆ. ಅವರಿಗೆ ಪತ್ನಿ ಕುಸುಮಾ ಅಣ್ಣಪ್ಪ ನಾಯ್ಕ, ಪುತ್ರರಾದ ಶಶಾಂಕ, ಧನುಷ್, ಪುತ್ರಿ ನಮಿತಾ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.

1990 ರಿಂದ ಅವರು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಹಲವಾರು ಶಿಲಾಮಯ ದೇವಸ್ಥಾನ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಹೊನ್ನಾವರದ ಶ್ರೀ ಶಾರದಾಂಬಾ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ, ಶಿರಾಲಿಯ ಶ್ರೀ ಅನ್ನಪೂರ್ಣ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ಶಿವಲಿಂಗೇಶ್ವರ ದೇವಸ್ಥಾನದ ಶಿಲಾಮಯ ಕಟ್ಟಡವು ಆಕರ್ಷಕವಾಗಿ ನಿರ್ಮಿಸಿದ್ದರು.
ವರದಿ : ವಿಶ್ವನಾಥ ಸಾಲ್ಕೋಡ್, ಹೊನ್ನಾವರ

About The Author

error: Content is protected !!