November 19, 2025

ಹಳೆಯ ವೈಷಮ್ಯಕ್ಕೆ ನಶೆಯ ನಂಟಿನಲ್ಲಿ ಚಾಕು ದಾಳಿ : ಯುವಕನಿಗೆ ಗಂಭೀರ ಗಾಯ

ಭಟ್ಕಳ : ನಶೆಯ ನಂಟಿನಲ್ಲಿ ಉಗ್ರನಾದ ಯುವಕನೊಬ್ಬ ಹಳೆಯ ವೈಷಮ್ಯದ ಹಿನ್ನಲೆಯಲ್ಲಿ ಮತ್ತೊಬ್ಬನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಭಟ್ಕಳ ಸಂಶುದ್ದೀನ್ ಸರ್ಕಲ್‌ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಮಂಜುನಾಥ ಮಾಸ್ತಪ್ಪ ನಾಯ್ಕ (34) ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಡಿ.ಪಿ. ಕಾಲೋನಿಯ ನಗೀನಕುಮಾರ ಶೆಟ್ಟಿ ಎನ್ನುವಾತನು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಶೆಯ ತೀವ್ರತೆಯಲ್ಲಿ ನಗೀನಕುಮಾರ, ಹಣ ಕೇಳಿದ್ರೆ ಬೈಯ್ದು ಕಳಿಸಿದ್ದಿಯಾ, ಇವತ್ತು ನಿನ್ನನ್ನ ಬಿಡೋದಿಲ್ಲ ಎಂದು ಬೈಯುತ್ತಾ ಮಂಜುನಾಥನ ಮೇಲೆ ಚಾಕು ಬೀಸಿದ್ದಾನೆ ಎನ್ನಲಾಗಿದೆ.ಈ ವೇಳೆ ಮಂಜುನಾಥನ ಎಡ ಕಂಕಳ, ಕುತ್ತಿಗೆ, ಹೊಟ್ಟೆ, ಕಿವಿಯ ಹತ್ತಿರ ಹಾಗೂ ತಲೆಯ ಭಾಗಕ್ಕೆ ಇರಿತದ ಗಾಯಗಳು ಉಂಟಾಗಿವೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಸಿಪಿಐ ದಿವಾಕರ ಪಿ.ಎಂ. ಮತ್ತು ಪಿಎಸ್‌ಐ ನವೀನ್ ನಾಯ್ಕ ನೇತೃತ್ವದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದಾರೆ.ಗಾಯಗೊAಡ ಮಂಜುನಾಥನನ್ನು ಮೊದಲು ಭಟ್ಕಳ ಸರ್ಕಾರಿ ಆಸ್ಪತ್ರೆಗೆ, ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಸ್ಥಳಾಂತರಿಸಲಾಗಿದೆ.ಈ ಸಂಬAಧ ಗಣೇಶ ಶನಿಯಾರ ನಾಯ್ಕ ದೂರು ನೀಡಿದ್ದು, ಪಿಎಸ್‌ಐ ನವೀನ್ ನಾಯ್ಕ ಅವರ ನೇತೃತ್ವದಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.

ಆರೋಪಿ ನಗೀನಕುಮಾರ ಶೆಟ್ಟಿ ಹಲವು ವರ್ಷಗಳಿಂದ ಮಾದಕ ವಸ್ತುಗಳ ವ್ಯಸನದಲ್ಲಿ ತೊಡಗಿದ್ದು, ಆಗಾಗ ಅಸ್ವಸ್ಥ ಸ್ವಭಾವ ತೋರಿಸುತ್ತಿದ್ದನೆಂಬ ಮಾಹಿತಿ ಸ್ಥಳೀಯರಿಂದ ಲಭಿಸಿದೆ.ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕಾರವಾರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

About The Author

error: Content is protected !!