November 19, 2025

ಸರಕಾರಿ ಪ್ರೌಢಶಾಲೆ ತೆಂಗಿನಗುAಡಿಯ ವಿದ್ಯಾರ್ಥಿಗಳು ಕ್ರೀಡಾ ವಿಭಾಗದಲ್ಲಿ ಉತ್ತಮ ಸಾಧನೆ

ಭಟ್ಕಳ: ಸರಕಾರಿ ಪ್ರೌಢಶಾಲೆ ತೆಂಗಿನಗುAಡಿಯ ವಿದ್ಯಾರ್ಥಿಗಳು ಕ್ರೀಡಾ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿ ಇಬ್ಬರು ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಾರವಾರದಲ್ಲಿ ನಡೆದ ಜಿಲ್ಲಾಮಟ್ಟದ 17 ವಯೋಮಾನದ ಒಳಗಿನ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಹರ್ಷಿತ ವಸಂತ ದೇವಾಡಿಗ ಈಕೆ 100 ಮೀಟರ್, 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ, 400 ಮೀಟರ್ ಓಟದಲ್ಲಿ ದ್ವಿತಿಯ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆ. 100 ಮೀಟರ್ ಹರ್ಡಲ್ಸ್ನಲ್ಲಿ ಹೇಮಲತಾ ಮಾದೇವ ಗಾವಡಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಉತ್ತಮ ಕ್ರೀಡಾ ಸಾಧನೆ ತೋರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಇಬ್ಬರು ವಿದ್ಯಾರ್ಥಿಗಳನ್ನು ಮುಖ್ಯೋಪಾಧ್ಯಾಯ ಸಂತೋಷ ಶ್ರೇಷ್ಠಿ, ತರಬೇತಿ ನೀಡಿದ ಶಿಕ್ಷಕ ನಾಗರಾಜ್ ಎನ್.ಎಸ್, ಸಹಕರಿಸಿದ ವಿನಾಯಕ ಪಟಗಾರ, ಗೋವಿಂದ ಪಟಗಾರ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಮೋಹನ್ ದೇವಾಡಿಗ ಅಭಿನಂದಿಸಿದ್ದಾರೆ.

About The Author

error: Content is protected !!