November 19, 2025

ಭಟ್ಕಳ ಹವ್ಯಕ ವಲಯದಲ್ಲಿ ಪಂಚ ವಲಯೋತ್ಸವ ನಡೆಸಲು ತೀರ್ಮಾನ.

ಭಟ್ಕಳ: ಅವಿಚ್ಛಿನ್ನ ಪರಂಪರೆಯ ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಸದಾಶಯಗಳಂತೆ ಭಟ್ಕಳ ಹವ್ಯಕ ವಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಪಂಚ ವಲಯೋತ್ಸವ ನಡೆಸಲು ತೀರ್ಮಾನಿಸಲಾಯಿತು.

ಇತ್ತೀಚೆಗೆ ಬಸ್ತಿಮಕ್ಕಿಯಲ್ಲಿರುವ ಆಚಾರ್ಯಭವನದಲ್ಲಿ ಭಟ್ಕಳ ಹವ್ಯಕ ವಲಯದ ಅಧ್ಯಕ್ಷ ಎಂ.ವಿ.ಹೆಗಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಂಚ ವಲಯೋತ್ಸವದ ಆಮಂತ್ರಣ ಪತ್ರಿಕೆಯನ್ನು ವಲಯದ ವೈವಾಹಿಕ ವಿಭಾಗದ ಪ್ರಧಾನ ಕೃಷ್ಣಾನಂದ ಭಟ್ಟ ಬಲ್ಸೆ ಬಿಡುಗಡೆಗೊಳಿಸಿದರು. ಪ್ರಥಮ ಕಾರ್ಯಕ್ರಮ ನ.16ರಂದು ರವಿವಾರ ಬಸ್ತಿಮಕ್ಕಿಯ ಆಚಾರ್ಯ ಭವನದಲ್ಲಿ ಕುಂಕುಮಾರ್ಚನೆ, ಸಾಮೂಹಿಕ ಗುರುಪಾದುಕಾ ಸ್ತೋತ್ರ ಪಠಣ ಹಾಗೂ ಸಂಸ್ಕಾರ-ಸAವಾದ ಕಾರ್ಯಕ್ರಮ ನಡೆಯಲಿದೆ. ಕೃಷ್ಣಾನಂದ ಭಟ್ಟ ಬಲ್ಸೆ ಅವರ ಆತಿಥ್ಯದಲ್ಲಿ ನಡೆಯಲಿದೆ. ಎರಡನೇ ಕಾರ್ಯಕ್ರಮ ಡಿ.7ರಂದು ರವಿವಾರ ಬಸ್ತಿಮಕ್ಕಿ ಆಚಾರ್ಯ ಭವನದಲ್ಲಿ ಮಾತೃ ವಿಭಾಗದಿಂದ ನಡೆಯಲಿದ್ದು ಕುಂಕುಮಾರ್ಚನೆ, ಸಾಮೂಹಿಕ ಗುರುಪಾದುಕಾ ಸ್ತೋತ್ರ ಪಠಣ ನಡೆಯಲಿದೆ.

ಆತಿಥ್ಯವನ್ನು ಗಣಪತಿ ಪರಮೇಶ್ವರ ಭಟ್ಟ ಮೊಮ್ಮನಕೆರೆ ಹಾಗೂ ವಲಯ ಮಾತೆಯರು ವಹಿಸಲಿದ್ದಾರೆ. ಮೂರನೇ ಕಾರ್ಯಕ್ರಮ ಡಿ.28ರಂದು ರವಿವಾರ ಕಡವಿನಕಟ್ಟೆ ಶ್ರೀ ಜಗನ್ಮಾತೆ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ. ಕುಂಕುಮಾರ್ಚನೆ, ಸಾಮೂಹಿಕ ಗುರುಪಾದುಕಾ ಸ್ತೋತ್ರ ಪಠಣ, ಪಂಜಾಬ್ ಪಾಟಿಯಾಲದ ಥಾಪರ್ ಇನ್ಸಿಸ್ಟಿಟ್ಯೂಟ್ ಆಫ್ ಇಂಜಿನಿಯರಿAಗ್ ಎಂಡ್ ಟೆಕ್ನಾಲಜಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಕುಮಾರಿ ಶೃತಿ ಭಟ್ಟ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸಾಲಮನೆ ಪ್ರಕಾಶ ಭಟ್ಟ, ಶಿವಾನಂದ ಭಟ್ಟ ಮತ್ತು ಎಂ.ಎಚ್.ಗುರುಮೂರ್ತಿ ಆತಿಥ್ಯ ವಹಿಸಲಿದ್ದಾರೆ. ನಾಲ್ಕನೇ ಕಾರ್ಯಕ್ರಮ ಫೆ.8ರಂದು ರವಿವಾರ ಬೇಂಗ್ರೆ ನಾಗರಾಜ ಭಟ್ಟರ ಮನೆಯಲ್ಲಿ ನಡೆಯಲಿದೆ. ಕುಂಕುಮಾರ್ಚನೆ, ಸಾಮೂಹಿಕ ಗುರುಪಾದುಕಾ ಸ್ತೋತ್ರ ಪಠಣ ಹಾಗೂ ಎಂ.ಎನ್. ಹೆಗಡೆ ಬಳಗದಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಆತಿಥ್ಯವನ್ನು ನಾಗರಾಜ ಮಾಬ್ಲೇಶ್ವರ ಭಟ್ಟ ಕುಟುಂಬಿಕರು ವಹಿಸಲಿದ್ದಾರೆ. ಐದನೇ ಕಾರ್ಯಕ್ರಮ ಮಾ.15ರಂದು ರವಿವಾರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಗೋಳಿಕುಂಬ್ರಿಯಲ್ಲಿ ನಡೆಯಲಿದೆ. ಕುಂಕುಮಾರ್ಚನೆ, ಸಾಮೂಹಿಕ ಗುರುಪಾದುಕಾ ಸ್ತೋತ್ರ ಪಠಣ, ವಲಯ ಮಾತೆಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಆತಿಥ್ಯವನ್ನು ಉತ್ತರಕೊಪ್ಪ, ಶಿರಾಣಿ ಘಟಕದ ಶಿಷ್ಯಂದಿರು, ಗುರಿಕ್ಕಾರರು ಮತ್ತು ವಲಯ ಪದಾಧಿಕಾರಿಗಳು ವಹಿಸಲಿದ್ದಾರೆ.

ಸಭೆಯಲ್ಲಿ ವಲಯದ ಹಿರಿಯರಾದ ಕೃಷ್ಣಾನಂದ ಭಟ್ಟ ಬಲ್ಸೆ, ಹೊನ್ನಾವರ ಮಂಡಳದ ಉಪಾಧ್ಯಕ್ಷ ಶಂಭು ಎನ್. ಹೆಗಡೆ, ಮಾತೃ ಪ್ರಧಾನೆ ರೇಷ್ಮಾ ಯೋಗೀಶ ಭಟ್ಟ, ಭಟ್ಕಳ ವಲಯ ಉಪಾಧ್ಯಕ್ಷ ರಾಧಾಕೃಷ್ಣ ಭಟ್ಟ, ಕಾರ್ಯದರ್ಶಿ ಎಸ್.ಎಂ.ಭಟ್ಟ, ಮಾತೃ ಪ್ರದಾನೆ ಮಂಗಲಾ ಉಪಾಧ್ಯಾಯ, ಮಾಲಿನ ಭಟ್ಟ ವಿದ್ಯಾ ಭಟ್ಟ, ದೀಪಾ ಭಟ್ಟ, ಸಾಧನಾ ಭಟ್ಟ, ಶೈಲಾ ಹೆಗಡೆ, ಗುರಿಕಾರರಾದ ಮಂಜುನಾಥ ಭಟ್ಟ, ಯೋಗೀಶ ಹೆಗಡೆ, ಪಿ.ಎನ್. ಭಟ್ಟ, ಶಿವಾನಂದ ಭಟ್ಟ, ಅನಂತ ಹೆಗಡೆ, ರವೀಂದ್ರ ಭಾಗ್ವತ್, ಅನಂತ ಹೆಗಡೆ ಶಿರಾಲಿ, ನಾರಾಯಣ ಭಟ್ಟ ಮತ್ತಿರರು ಉಪಸ್ಥಿತರಿದ್ದರು.

About The Author

error: Content is protected !!