November 18, 2025

ಸುರಕ್ಷಿತ ಚಾಲನೆಗೆ ಭಟ್ಕಳದ ರಾಮಚಂದ್ರ ನಾಯ್ಕರಿಗೆ ಬೆಳ್ಳಿ ಪದಕ ಗೌರವ

ಐದು ವರ್ಷಗಳಿಂದ ಅಪಘಾತರಹಿತ ಸೇವೆ ವಾ.ಕ.ರ.ಸಾ.ಸಂ. ವತಿಯಿಂದ ಸುರಕ್ಷಾ ಚಾಲಕ ಪ್ರಶಸ್ತಿ

ಭಟ್ಕಳ: ಸುರಕ್ಷಿತ ಚಾಲನೆಯ ಮಾದರಿಯಾಗಿರುವ ಭಟ್ಕಳದ ಚಾಲಕ ರಾಮಚಂದ್ರ ಎಲ್. ನಾಯ್ಕ ಅವರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾ.ಕ.ರ.ಸಾ.ಸಂ) ವತಿಯಿಂದ 2022-23ನೇ ಸಾಲಿನ ಸುರಕ್ಷಾ ಚಾಲಕ ಬೆಳ್ಳಿ ಪದಕ ಗೌರವ ಕ್ಕೆ ಆಯ್ಕೆ ಆಗಿದ್ದಾರೆ.

ಶಿರಸಿ ಘಟಕದ ಭಟ್ಕಳ ಡಿಪೋಗೆ ಸೇರಿದ ರಾಮಚಂದ್ರ ನಾಯ್ಕ ಅವರು ಭಟ್ಕಳ ತಾಲ್ಲೂಕಿನ ತಲಾನ ಕಸಲಗದ್ದೆ ನವರು ಆಗಿದ್ದು
ಇವರು ಕಳೆದ ಐದು ವರ್ಷಗಳಿಂದ ಯಾವುದೇ ಅಪಘಾತವಿಲ್ಲದೆ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಮಳೆಗಾಲದ ರಾತ್ರಿ, ಕಷ್ಟದ ಹಾದಿ, ದಟ್ಟ ಸಂಚಾರ ಯಾವ ಸವಾಲಿನಲ್ಲೂ ಕರ್ತವ್ಯದಿಂದ ಹಿಂದೆ ಸರಿಯದೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ಗಮ್ಯಸ್ಥಾನಕ್ಕೆ ತಲುಪಿಸುತ್ತಿರುವುದಕ್ಕಾಗಿ ಸಂಸ್ಥೆಯು ಈ ಗೌರವಕ್ಕೆ ಆಯ್ಕೆ ಮಾಡಿದೆ.

ನಾಳೆ(ಶುಕ್ರವಾರ) ನಡೆಯುವ ಹುಬ್ಬಳ್ಳಿ ಧಾರವಾಡದ ನೂತನ ಬಸ್ ನಿಲ್ದಾಣಗಳ ಉದ್ಘಾಟನಾ ಕಾರ್ಯಕ್ರಮದ ವೇಳೆ ಈ ಪದಕ ಪ್ರದಾನ ನಡೆಯಲಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಇತರ ಗಣ್ಯರು ಉಪಸ್ಥಿತರಿರುವರು.
ರಾಮಚಂದ್ರ ನಾಯ್ಕರ ಈ ಸಾಧನೆ ಭಟ್ಕಳ ಡಿಪೋಗೆ ಮಾತ್ರವಲ್ಲ, ಇಡೀ ಉತ್ತರ ಕನ್ನಡ ಜಿಲ್ಲೆಯ ಸಾರಿಗೆ ಸಿಬ್ಬಂದಿಗೆ ಪ್ರೇರಣೆಯ ಕಿರಣವಾಗಿದೆ.

About The Author

error: Content is protected !!