November 19, 2025

ಗುಂಡ್ಲುಪೇಟೆಯ ಮೋನಿಷಾ ಎಂ ರವರು ಚಿನ್ನದ ಪದಕ

ಗುಂಡ್ಲುಪೇಟೆ: ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ 14ನೇ ಮಿನಿ ಕರ್ನಾಟಕ ಒಲಂಪಿಕ್ಸ್ ಕ್ರೀಡಾಕೂಟ 2025 ವುಶು ಮಾಸ್ಟರ್ ಆರ್ಟ್ಸ್ ಸಬ್ ಜೂನಿಯರ್ ಕ್ರೀಡಾಕೂಟದಲ್ಲಿ ಗುಂಡ್ಲುಪೇಟೆಯ ಮೋನಿಷಾ ಎಂ ರವರು ಚಿನ್ನದ ಪದಕವನ್ನು ಪಡೆದಿದ್ದಾರೆ. ಇವರ ತಾಯಿ ನಂದಿನಿ ಹಾಗೂ ತಂದೆ ಮಧು ತಾಲೂಕು ಪಂಚಾಯಿತಿ ವಸತಿ ನೋಡಲ್ ಅಧಿಕಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಮೋನಿಷಾ ರವರು ಪ್ರೇಮ್ ಸ್ಟುಡಿಯೋ ನಲ್ಲಿ ಪಾರ್ಥಿವ ಹಾಗೂ ದರ್ಶನ್ ರವರ ಹತ್ತಿರ ತರಬೇತಿಯನ್ನು ಪಡೆದಿದ್ದಾರೆ.
ವರದಿ : ಸದಾನಂದ ಕನ್ನೆಗಾಳ ಗುಂಡ್ಲಪೇಟೆ

About The Author

error: Content is protected !!