November 19, 2025

ಹಿರಿಯ ನಟ ರಾಮಕೃಷ್ಣ ಅವರಿಂದ ಬನವಾಸಿಯಲ್ಲಿ ಉಮೇಶ ಮುಂಡಳ್ಳಿ ಅವರಿಗೆ ಕದಂಬ ಕನ್ನಡ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ

ಭಟ್ಕಳ- ಕದಂಬ ಕನ್ನಡ ಸೇನೆ ಕರ್ನಾಟಕ ಇವರು ಆಯೋಜಿಸಿದ ಕದಂಬರ ನಾಡಿನಲ್ಲಿ ಕನ್ನಡದ ವೈಭವ ಕಾರ್ಯಕ್ರಮ ದಲ್ಲಿ ಕವಿ ಲೇಖಕ ಸಂಗೀತ ಸುಗಮಸಂಗೀತ ಗಾಯಕ ಉಮೇಶ ಮುಂಡಳ್ಳಿ ಅವರಿಗೆ ಕದಂಬ ಕನ್ನಡ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕನ್ನಡದ ಮೊಟ್ಟಮೊದಲ ರಾಜ ಮನೆತನ ಕದಂಬರ ಐತಿಹಾಸಿಕ ಬನವಾಸಿಯ ಶ್ರೀ ಮಧುಕೇಶ್ವರ ದೇವಾಲಯದ ಪ್ರಾಗಂಣದಲ್ಲಿ ಸೋಮವಾರ ಸಂಜೆ ನಡೆದ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡದ ಹಿರಿಯ ಜನಪ್ರಿಯ ಚಿತ್ರನಟ ನಿರ್ನಳ್ಳಿ ರಾಮಕೃಷ್ಣ ಅವರು ಉಮೇಶ ಮುಂಡಳ್ಳಿ ಅವರಿಗೆ ಸಾಲು ಹೊದಿಸಿ “ಕದಂಬ ಕನ್ನಡ ಸಾಹಿತ್ಯ ರತ್ನ 2025 ” ಪ್ರಶಸ್ತಿ ಪ್ರಧಾನ ಮಾಡಿ ಹರಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ರಾಜ್ಯದ ಅನೇಕ ಸಾಧಕರನ್ನು ಗೌರವಿಸಲಾಯಿತು.

ಕಾರ್ಯಕ್ರವನ್ನು ಶಿರಸಿ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ ಉದ್ಟಾಟಿಸಿದ್ದರು. ವೇದಿಕೆಯಲ್ಲಿ ಹಿರಿಯ ನಟ ನೀರ್ನಳ್ಳಿ ರಾಮಕೃಷ್ಣ, ಬನವಾಸಿ ಮಧುಕೇಶ್ವರ ದೇವಾಲಯದ ಧರ್ಮದರ್ಶಿ ರಾಜಶೇಖರ್ ಒಡೆಯರ್, ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಮಲ್ಲೇಶ್ವರ, ಸನಾತನ ಮಂಚ್ ನ ದಕ್ಷಿಣ ಭಾರತ ಪ್ರಮುಖರಾದ ರಾಜು, ಕದಂಬ ಸೇನೆಯ ಸಂಸ್ಥಾಪಕ ಅಧ್ಯಕ್ಷ ಕದಂಬ ನಾ.ಅಂಬರೀಶ್, ರಾಜ್ಯಾಧ್ಯಕ್ಷ ಕದಂಬ ಶಿವಕುಮಾರ್,ಕದಂಬ ಬಸಣ್ಣ ಮೊದಲಾದವರು ಉಪಸ್ಥಿತರಿದ್ದರು.

About The Author

error: Content is protected !!