November 18, 2025

ರಾಜ್ಯ ಮಟ್ಟದ ನವೋನ್ಮೇಷ – 2025 ಎನ್ನುವ ಸ್ಪರ್ಧೆಯಲ್ಲಿ ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ್ ಪಿ ಯು ಕಾಲೇಜಿನ ವಿದ್ಯಾರ್ಥಿಗಳು….

ಕುಂದಾಪುರ ಐ ಎಮ್ ಜೆ ಇನ್ಸಿ÷್ಟಟ್ಯುಟ್ ಮೂಡಲಕಟ್ಟೆ ಕುಂದಾಪುರದಲ್ಲಿ ನಡೆದ ರಾಜ್ಯ ಮಟ್ಟದ ನವೋನ್ಮೇಷ – 2025 ಎನ್ನುವ ಸ್ಪರ್ಧೆಯಲ್ಲಿ ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ್ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರಿದ್ದು ಲೋಗೋ ಡಿಸೈನ್ ನಲ್ಲಿ ನಾಗರಾಜ ಜಿ ಶಿರಾಲಿ ಪ್ರಥಮ, ಟೆಕ್ನೋಗ್ರಿಡ್ ನಲ್ಲಿ ಯುವರಾಜ ಜಿ ನಾಯ್ಕ ಮತ್ತು ತೆಜಸ ರವಿ ನಾಯ್ಕ ದ್ವಿತೀಯ ಹಾಗೂ ಪೂರ್ಣಾ ಹೆಗಡೆ, ಅಂಕಿತಾ ಕಾಮತ, ವಸುಧಾ ಹೆಬ್ಬಾರ ಮತ್ತು ಲಾವಣ್ಯ ದೇವಾಡಿಗ ಇವರು ಗಾನ ವೈಭವ – ಸಮೂಹ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಅಧ್ಯಕ್ಷರಾದ ಡಾ. ಸುರೇಶ ವಿ. ನಾಯಕ, ಮ್ಯಾನೇಜಿಂಗ್ ಟ್ರಸ್ಟಿಯವರಾದ ಶ್ರೀ ಆರ್, ಜಿ, ಕೊಲ್ಲೆ, ಟ್ರಸ್ಟಿ ಮ್ಯಾನೇಜರ್À ಶ್ರೀ ರಾಜೇಶ ನಾಯಕ, ಪ್ರಾಂಶುಪಾಲರಾದ ಡಾ. ವಿರೇಂದ್ರ ವಿ. ಶಾನಬಾಗ, ಸಾಂಸ್ಕೃತಿಕ ಸ್ಪರ್ಧೆಯ ಸಂಯೋಜಕರಾದ ಉಪನ್ಯಾಸಕಿ ದೀಕ್ಷಾ ಭಂಡಾರಿ ಮತ್ತು ವಿಲಿಯಂ ಹಾಗೂ ಬೋಧಕ- ಬೋಧಕೇತರ ಸಿಬ್ಬಂಧಿಗಳು ಅಭಿನಂದಿಸಿರುತ್ತಾರೆ.

About The Author

error: Content is protected !!