November 19, 2025

“ಸಂಸ್ಕಾರ ಸುಧಾ” ಅರಿವಿನ ಹಲವು ದಾರಿಗಳು ಎನ್ನುವ ನೈತಿಕ ಮೌಲ್ಯಗಳ ಹತ್ತನೇಯ ಸಂಚಿಕೆ

ಭಟ್ಕಳ : ಜೀವನದಲ್ಲಿ ಪ್ರಾರ್ಥನೆ, ಆರಾಧನೆ ಮತ್ತು ಸಾಧನೆ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವ ಆಧಾರ ಸ್ತಂಭಗಳು ಎಂದು ಪುಣೆಯ ಎಮ್.ಆಯ್.ಟಿ ಇನ್ಸಿ÷್ಟಟ್ಯೂಟ್ ಆಪ್ ಡಿಸೈನ್ ಮತ್ತು ಟೆಕ್ನಾಲಜಿ ಯುನಿವರ್ಸಿಟಿಯ ನಿವೃತ್ತ ಪ್ರಾಧ್ಯಾಪಕ ಸೂರ್ಯನಾರಾಯಣ ರಾವ್ ಹೇಳಿದರು. ಅವರು ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ ಪಿ.ಯು ಕಾಲೇಜಿನಲ್ಲಿ ಆಯೋಜಿಸಿದ್ದ “ಸಂಸ್ಕಾರ ಸುಧಾ” ಅರಿವಿನ ಹಲವು ದಾರಿಗಳು ಎನ್ನುವ ನೈತಿಕ ಮೌಲ್ಯಗಳ ಹತ್ತನೇಯ ಸಂಚಿಕೆ ಯ “ಮೌಲ್ಯಯುತರಾಗಿರಿ” ಎನ್ನುವ ವಿಷಯದ ಮೇಲೆ ಮಾತನಾಡುತ್ತಾ ದೇವರಲ್ಲಿ ಶ್ರಧ್ಧೆಯಿಂದ ಪ್ರಾರ್ಥಿಸಿ ಉತ್ತಮ ಮೌಲ್ಯಗಳನ್ನು ಆರಾಧಿಸಿ ಗುರಿ ಮತ್ತು ಉದ್ದೇಶಗಳನ್ನು ಸಾಧಿಸಿದಾಗ ರಾಷ್ಟçದ ನಿರ್ಮಾಣ ಸಾದ್ಯ ಎಂದು ಹೇಳಿದರು. ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಚೇರಮನ್ ಡಾ. ಸುರೇಶ ವಿ. ನಾಯಕ ಅಧ್ಯಕ್ಷತೆ ವಹಿಸಿದ್ದರು. ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಟ್ರಸ್ಟಿ ರಮೇಶ ಖಾರ್ವಿ, ವಿದ್ಯಾಂಜಲಿ ಪಬ್ಲಿಕ್ ಶಾಲೆಯ ಮುಖ್ಯೋದ್ಯಾಪಕ ರಾಘವೇಂದ್ರ ಕಾಮತ, ವಿದ್ಯಾಭಾರತಿ ಶಾಲೆಯ ಮುಖ್ಯೋದ್ಯಾಪಕಿಯಾದ ರೂಪಾ ಖಾರ್ವಿ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಡಾ. ವಿರೇಂದ್ರ ವಿ ಶಾನಭಾಗ ವಂದಿಸಿದರು, ವಿದ್ಯಾರ್ಥಿಗಳಾದ ಅಶ್ವಿನಿ ಕಡ್ಲೆ ಮತ್ತು ಅಂಕಿತಾ ಕಾಮತ ಪ್ರಾರ್ಥಿಸಿದರು. ಉಪನ್ಯಾಸಕ ಶಿವಾನಂದ ಭಟ್ ನಿರೂಪಿಸಿದರು.

About The Author

error: Content is protected !!