November 19, 2025

ಸಂಬಳವಿಲ್ಲದೆ ಪರದಾಡುತ್ತಿರುವ ಹೊರಗುತ್ತಿಗೆ ನೌಕರರು, ಭಟ್ಕಳ ಸರ್ಕಾರಿ ಆಸ್ಪತ್ರೆಯ ನೌಕರರ ದುಸ್ಥಿತಿ

ಭಟ್ಕಳ: ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರು ಕಳೆದ ಮೂರು ತಿಂಗಳಿನಿAದ ಸಂಬಳವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಸಾಲ ಮಾಡಿ ಕುಟುಂಬದ ಖರ್ಚು ನಿಭಾಯಿಸುತ್ತಿರುವ ಇವರು, ಇಂದಿನ ಪರಿಸ್ಥಿತಿಯಲ್ಲಿ ಬದುಕು ಸಾಗಿಸುವುದೇ ಕಷ್ಟವಾಗಿದೆ.

ಪ್ರತಿದಿನ ಬಡ ರೋಗಿಗಳಿಗೆ ಸೇವೆ ನೀಡುತ್ತಾ ಆಸ್ಪತ್ರೆಯ ಶುದ್ಧತೆ, ನೈರ್ಮಲ್ಯ ಕಾಪಾಡುವ ಈ ನೌಕರರಿಗೆ ವೇತನವೇ ಈಗ ಮರೀಚಿಕೆಯಾಗಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಕಾಲಕ್ಕೆ ಸಿಗದಿರುವುದು ನಮ್ಮ ಮನೋಭಾವನೆಗೆ ಧಕ್ಕೆ ತಂದಿದೆ ಎಂದು ನೌಕರರು ಅಳಲು ವ್ಯಕ್ತಪಡಿಸಿದ್ದಾರೆ. ಕಡಿಮೆ ಸಂಬಳವನ್ನೂ ಮೂರು ನಾಲ್ಕು ತಿಂಗಳಿಗೊಮ್ಮೆ ಮಾತ್ರ ಪಾವತಿಯಾಗುತ್ತಿದ್ದು, ಮನೆ ಖರ್ಚು, ವಿದ್ಯುತ್ ಬಿಲ್, ಶಾಲಾ ಶುಲ್ಕ, ಸಾಲದ ಕಂತುಗಳ ಒತ್ತಡದಿಂದ ಜೀವನ ಸಂಕಷ್ಟದಲ್ಲಿದೆ. ಅಧಿಕಾರಿಗಳ ಬಳಿ ಎಷ್ಟೇ ಮನವಿ ಮಾಡಿದರೂ ಸ್ಪಂದನೆ ದೊರೆಯದೆ ಹೋಗಿದೆ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ಯಾಂಕಿನಿAದ ಪಡೆದ ಸಾಲ ಪಾವತಿಯಾಗದಿದ್ದರೆ ಅಧಿಕಾರಿಗಳಿಂದ ಹಿಂಸೆ ಎದುರಾಗುತ್ತಿದೆ. ಜನರ ಆರೋಗ್ಯ ಹಿತಕ್ಕಾಗಿ ಸೇವೆ ನೀಡುತ್ತಾ ನಾವು ತೊಂದರೆ ಅನುಭವಿಸುತ್ತಿದ್ದೇವೆ ಎಂದು ಒಬ್ಬ ಸಿಬ್ಬಂದಿ ಮನವಿ ಮಾಡಿಕೊಂಡರು. ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಒಟ್ಟು ೨೫ ಹೊರಗುತ್ತಿಗೆ ನೌಕರರಿದ್ದು, ಇವರಲ್ಲಿ ೧೦ ಮಂದಿ ನಾನ್-ಕ್ಲೆರಿಕಲ್ ಹಾಗೂ ೧೫ ಮಂದಿ ಗ್ರೂಪ್-ಡಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರತಿದಿನವೂ ಸಂಬಳಕ್ಕಾಗಿ ಕಾಯುತ್ತಿದ್ದರೂ ಅನುದಾನ ಲಭ್ಯವಿಲ್ಲ ಎಂಬ ನೆಪದಿಂದ ಸರ್ಕಾರ ಕೈತೊಳೆದುಕೊಳ್ಳುತ್ತಿದೆ. ನಾವು ಗ್ರೂಪ್-ಡಿ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ ತಿಂಗಳ ವೇತನ ಸಿಗುವುದೇ ಕಷ್ಟವಾಗಿದೆ. ಕಿರಾಣಿ ಬಿಲ್, ವಿದ್ಯುತ್ ಬಿಲ್, ಶಾಲಾ ಶುಲ್ಕ ಎಲ್ಲವೂ ಬಾಕಿ ಇದೆ. ಮೂರು ನಾಲ್ಕು ತಿಂಗಳಿಗೊಮ್ಮೆ ಸಿಗುವ ವೇತನ ಬಡ್ಡಿ ಪಾವತಿಗೆ ಹೋಗುತ್ತದೆ. ಸರ್ಕಾರ ತಕ್ಷಣ ಕ್ರªಸಂಬಳವಿಲ್ಲದೆ ಪರದಾಡುತ್ತಿರುವ ಹೊರಗುತ್ತಿಗೆ ನೌಕರರು, ಭಟ್ಕಳ ಸರ್ಕಾರಿ ಆಸ್ಪತ್ರೆಯ ನೌಕರರ ದುಸ್ಥಿತಿ

ಭಟ್ಕಳ: ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರು ಕಳೆದ ಮೂರು ತಿಂಗಳಿನಿAದ ಸಂಬಳವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಸಾಲ ಮಾಡಿ ಕುಟುಂಬದ ಖರ್ಚು ನಿಭಾಯಿಸುತ್ತಿರುವ ಇವರು, ಇಂದಿನ ಪರಿಸ್ಥಿತಿಯಲ್ಲಿ ಬದುಕು ಸಾಗಿಸುವುದೇ ಕಷ್ಟವಾಗಿದೆ.

ಪ್ರತಿದಿನ ಬಡ ರೋಗಿಗಳಿಗೆ ಸೇವೆ ನೀಡುತ್ತಾ ಆಸ್ಪತ್ರೆಯ ಶುದ್ಧತೆ, ನೈರ್ಮಲ್ಯ ಕಾಪಾಡುವ ಈ ನೌಕರರಿಗೆ ವೇತನವೇ ಈಗ ಮರೀಚಿಕೆಯಾಗಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಕಾಲಕ್ಕೆ ಸಿಗದಿರುವುದು ನಮ್ಮ ಮನೋಭಾವನೆಗೆ ಧಕ್ಕೆ ತಂದಿದೆ ಎಂದು ನೌಕರರು ಅಳಲು ವ್ಯಕ್ತಪಡಿಸಿದ್ದಾರೆ. ಕಡಿಮೆ ಸಂಬಳವನ್ನೂ ಮೂರು ನಾಲ್ಕು ತಿಂಗಳಿಗೊಮ್ಮೆ ಮಾತ್ರ ಪಾವತಿಯಾಗುತ್ತಿದ್ದು, ಮನೆ ಖರ್ಚು, ವಿದ್ಯುತ್ ಬಿಲ್, ಶಾಲಾ ಶುಲ್ಕ, ಸಾಲದ ಕಂತುಗಳ ಒತ್ತಡದಿಂದ ಜೀವನ ಸಂಕಷ್ಟದಲ್ಲಿದೆ. ಅಧಿಕಾರಿಗಳ ಬಳಿ ಎಷ್ಟೇ ಮನವಿ ಮಾಡಿದರೂ ಸ್ಪಂದನೆ ದೊರೆಯದೆ ಹೋಗಿದೆ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ಯಾಂಕಿನಿAದ ಪಡೆದ ಸಾಲ ಪಾವತಿಯಾಗದಿದ್ದರೆ ಅಧಿಕಾರಿಗಳಿಂದ ಹಿಂಸೆ ಎದುರಾಗುತ್ತಿದೆ. ಜನರ ಆರೋಗ್ಯ ಹಿತಕ್ಕಾಗಿ ಸೇವೆ ನೀಡುತ್ತಾ ನಾವು ತೊಂದರೆ ಅನುಭವಿಸುತ್ತಿದ್ದೇವೆ ಎಂದು ಒಬ್ಬ ಸಿಬ್ಬಂದಿ ಮನವಿ ಮಾಡಿಕೊಂಡರು. ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಒಟ್ಟು ೨೫ ಹೊರಗುತ್ತಿಗೆ ನೌಕರರಿದ್ದು, ಇವರಲ್ಲಿ ೧೦ ಮಂದಿ ನಾನ್-ಕ್ಲೆರಿಕಲ್ ಹಾಗೂ ೧೫ ಮಂದಿ ಗ್ರೂಪ್-ಡಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರತಿದಿನವೂ ಸಂಬಳಕ್ಕಾಗಿ ಕಾಯುತ್ತಿದ್ದರೂ ಅನುದಾನ ಲಭ್ಯವಿಲ್ಲ ಎಂಬ ನೆಪದಿಂದ ಸರ್ಕಾರ ಕೈತೊಳೆದುಕೊಳ್ಳುತ್ತಿದೆ. ನಾವು ಗ್ರೂಪ್-ಡಿ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ ತಿಂಗಳ ವೇತನ ಸಿಗುವುದೇ ಕಷ್ಟವಾಗಿದೆ. ಕಿರಾಣಿ ಬಿಲ್, ವಿದ್ಯುತ್ ಬಿಲ್, ಶಾಲಾ ಶುಲ್ಕ ಎಲ್ಲವೂ ಬಾಕಿ ಇದೆ. ಮೂರು ನಾಲ್ಕು ತಿಂಗಳಿಗೊಮ್ಮೆ ಸಿಗುವ ವೇತನ ಬಡ್ಡಿ ಪಾವತಿಗೆ ಹೋಗುತ್ತದೆ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು,ಎಂದು ಸಿಬ್ಬಂದಿ ಮಾಲಾ ನಾಯ್ಕ ಬೇಸರ ವ್ಯಕ್ತಪಡಿಸಿದರು.

ವೇತನ ಬಾಕಿ ಸಮಸ್ಯೆ ಕೇವಲ ಭಟ್ಕಳದಲ್ಲೇ ಅಲ್ಲ, ಹೊನ್ನಾವರ ಹಾಗೂ ಯಲ್ಲಾಪುರ ತಾಲ್ಲೂಕಿನ ಆಸ್ಪತ್ರೆಗಳಲ್ಲೂ ಇದೇ ಪರಿಸ್ಥಿತಿ ಇದೆ ಎಂದು ಶಿರಸಿಯ ಶಿವಶಕ್ತಿ ಸೆಕ್ಯೂರಿಟಿ ಸಂಸ್ಥೆಯ ಮಾಲಕರು ಗಜಾನನ ಹೆಗಡೆ ತಿಳಿಸಿದರು. ಜೂನ್‌ನಿಂದ ಸರ್ಕಾರದಿಂದ ವೇತನ ಬಾಕಿಯಾಗಿದೆ. ಕಾರ್ಮಿಕರಿಗೆ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ನಾನು ನನ್ನ ಕೈಯಿಂದ ಮೂರು ತಿಂಗಳ ವೇತನ ಪಾವತಿಸಿದ್ದೇನೆ. ಪ್ರತಿ ಆಸ್ಪತ್ರೆಗೆ ತಿಂಗಳಿಗೆ ರೂ೪.೫ ಲಕ್ಷದಂತೆ ಈಗಾಗಲೇ ರೂ.೪೦ ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗಿದೆ. ಆದರೆ ಅನುದಾನ ಸಿಗದೇ ಇಲಾಖೆ ಹಿಂದೆ ಕಳುಹಿಸುತ್ತಿದೆ ಎಂದು ಅವರು ಹೇಳಿದರು.ÀÄ ಕೈಗೊಳ್ಳಬೇಕು,ಎಂದು ಸಿಬ್ಬಂದಿ ಮಾಲಾ ನಾಯ್ಕ ಬೇಸರ ವ್ಯಕ್ತಪಡಿಸಿದರು.

ವೇತನ ಬಾಕಿ ಸಮಸ್ಯೆ ಕೇವಲ ಭಟ್ಕಳದಲ್ಲೇ ಅಲ್ಲ, ಹೊನ್ನಾವರ ಹಾಗೂ ಯಲ್ಲಾಪುರ ತಾಲ್ಲೂಕಿನ ಆಸ್ಪತ್ರೆಗಳಲ್ಲೂ ಇದೇ ಪರಿಸ್ಥಿತಿ ಇದೆ ಎಂದು ಶಿರಸಿಯ ಶಿವಶಕ್ತಿ ಸೆಕ್ಯೂರಿಟಿ ಸಂಸ್ಥೆಯ ಮಾಲಕರು ಗಜಾನನ ಹೆಗಡೆ ತಿಳಿಸಿದರು. ಜೂನ್‌ನಿಂದ ಸರ್ಕಾರದಿಂದ ವೇತನ ಬಾಕಿಯಾಗಿದೆ. ಕಾರ್ಮಿಕರಿಗೆ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ನಾನು ನನ್ನ ಕೈಯಿಂದ ಮೂರು ತಿಂಗಳ ವೇತನ ಪಾವತಿಸಿದ್ದೇನೆ. ಪ್ರತಿ ಆಸ್ಪತ್ರೆಗೆ ತಿಂಗಳಿಗೆ ರೂ೪.೫ ಲಕ್ಷದಂತೆ ಈಗಾಗಲೇ ರೂ.೪೦ ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗಿದೆ. ಆದರೆ ಅನುದಾನ ಸಿಗದೇ ಇಲಾಖೆ ಹಿಂದೆ ಕಳುಹಿಸುತ್ತಿದೆ ಎಂದು ಅವರು ಹೇಳಿದರು.

About The Author

error: Content is protected !!