November 19, 2025

ಭಟ್ಕಳದಲ್ಲಿ ನಕಲಿ ರಿಯಾಯಿತಿ ಸ್ಕೀಮ್ ಮೂವರು ತಮಿಳುನಾಡು ಮೂಲದ ಆರೋಪಗಳು ಬಂಧನ

ಭಟ್ಕಳ: ಗ್ಲೋಬಲ್ ಎಂಟರ್‌ಪ್ರೈಸಸ್ ಎಂಬ ಹೆಸರಿನಲ್ಲಿ ಮನೆಬಳಕೆ ಸಾಮಾನುಗಳ ಅಂಗಡಿ ತೆರೆದು ೧೦ರಿಂದ ೪೦ ಶೇಕಡಾ ರಿಯಾಯಿತಿ ನೀಡುತ್ತೇವೆ ಎಂದು ಹೇಳಿ ಜನರನ್ನು ನಂಬಿಸಿ ಹಣ ಪಡೆದು ಮೋಸ ಮಾಡಿದ ಮೂವರು ಆರೋಪಿಗಳನ್ನು ಭಟ್ಕಳ ನಗರ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿಗಳು ಭಟ್ಕಳ ಮಾರ್ಕೆಟ್ ರಸ್ತೆಯ ಮಿಸ್ಮಾ ಟವರ್ ಎದುರಿನ ಕಟ್ಟಡದಲ್ಲಿ ಅಂಗಡಿ ಆರಂಭಿಸಿ, ನಕಲಿ ಡಿಸ್ಕೌಂಟ್ ಸ್ಕೀಮ್‌ಗಳ ಮೂಲಕ ಗ್ರಾಹಕರಿಂದ ಹಣ ವಸೂಲಿ ಮಾಡಿ ನಂತರ ಅಂಗಡಿ ಬಂದಮಾಡಿ ಪರಾರಿಯಾಗಿದ್ದರು. ತಮಿಳುನಾಡಿನ ನಿವಾಸಿಗಳಾದ ಎಂ. ಗಣೇಶ ಮುತ್ತಯ್ಯ, ತ್ಯಾಗರಾಜನ್ ಶಿವಕಡಾಸಮ್ ಮೈಯನಾದನ್ ಕರುಪ್ಪಯ್ಯ, ಬಂಧಿತ ಆರೋಪಿಗಳು ಆಗಿದ್ದಾರೆ

ಈ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ., ಭಟ್ಕಳ ಉಪವಿಭಾಗದ ಡಿವೈಎಸ್ಪಿ ಮಹೇಶ್ ಎಂ.ಕೆ. ಅವರ ನೇತೃತ್ವದಲ್ಲಿ, ನಗರ ಠಾಣೆಯ ಇನ್ಸ್ಪೆಕ್ಟರ್ ದಿವಾಕರ ಪಿ.ಎಂ., ಪಿಎಸ್‌ಐ ನವೀನ್ ಎಸ್. ನಾಯ್ಕ, ಪಿಎಸ್‌ಐ ತಿಮ್ಮಪ್ಪ ಎಸ್. ಹಾಗೂ ಸಿಬ್ಬಂದಿಗಳಿAದ ಯಶಸ್ವಿಯಾಗಿ ನಡೆಸಲಾಯಿತು.

ಕಾರ್ಯಾಚರಣೆಯಲ್ಲಿ ವಿನಾಯಕ ಪಾಟೀಲ್, ದೀಪಕ ನಾಯ್ಕ, ದಿನೇಶ್ ನಾಯ್ಕ, ದೇವು ನಾಯ್ಕ, ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗೊಣಸಿ, ಸುರೇಶ ಮರಾಠಿ, ರೇವಣಸಿದ್ದಪ್ಪ, ಕಿರಣ ಪಾಟೀಲ್, ಸಚಿನ್ ಪವಾರ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ಸಿಬ್ಬಂದಿ ಉದಯ ಗುನಗಾ ಮತ್ತು ಬಬನ್ ಕದಂ ಭಾಗವಹಿಸಿದ್ದರು. ಪೊಲೀಸರು ಆರೋಪಿಗಳಿಂದ ಸಾರ್ವಜನಿಕರ ಹಣ ವಾಪಸ್ ಪಡೆಯುವ ಕಾರ್ಯಾಚರಣೆಯನ್ನೂ ಮುಂದುವರಿಸಿದ್ದಾರೆ.

About The Author

error: Content is protected !!