ಹೊನ್ನಾವರ: ಜಿಲ್ಲೆಯ ದಶಕಗಳ ಬೇಡಿಕೆಯಾದ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ, ಶರಾವತಿ ಪಂಪ್ಡ ಸ್ಟೋರೇಜ್ ಯೋಜನೆಯನ್ನು ಕೈಬಿಡುವಂತೆ ಮುಖ್ಯಮಂತ್ರಿಗಳ ಗಮನ ಸೆಳೆಯಲು ಪೊಸ್ಟ ಕಾರ್ಡ್ ಅಭಿಯಾನಕ್ಕೆ ಸಾಮಾಜಿಕ ಹೋರಾಟಗಾರ ಮಾಸಪ್ಪ ನಾಯ್ಕ ಚಾಲನೆ ನೀಡಿದರು.

ಹೊನ್ನಾವರ ಪಟ್ಟಣದ ಖಾಸಗಿ ಹೊಟೇಲನಲ್ಲಿ ನಡೆದ ಪತ್ರಿಕಾಗೊಷ್ಠಿಯಲ್ಲಿ ರಕ್ತದಲ್ಲಿ ಪೊಸ್ಟಕಾರ್ಡ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಸರಿಸುಮಾರು ೧೬ ಲಕ್ಷ ಜನಸಾಂದ್ರತೆ ಜಿಲ್ಲೆಯಲ್ಲಿ ಹೊಂದಿದ್ದರೂ, ಅನೇಕ ಜಲವಿದ್ಯುತ್ ಯೋಜನೆಗೆ ಇಲ್ಲಿಯ ಜನತೆಯು ತ್ಯಾಗ ಮಾಡಿದ್ದಾರೆ. ಕೈಗಾ ಅಣು ವಿದ್ಯುತ್ ಸ್ಥಾವರ, ನೌಕಾನೆಲೆ ನಿರ್ಮಾಣ, ಬಂದರು ಯೋಜನೆಗೆ ಜಮೀನು ಕಳೆದುಕೊಂಡು ನಿರಾಶ್ರೀತರಾಗಿದ್ದಾರೆ. ಗುಡ್ಡಕುಸಿತ, ಅನಿಲಸೋರಿಕೆ, ಐ.ಆರ್.ಬಿ ಅವೈಜ್ಞಾನಿಕ ಹೆದ್ದಾರಿ ಅಗಲೀಕರಣದ ದುರಂತದಿAದ ಅನೇಕರು ತಮ್ಮ ಉಸಿರನ್ನು ಕೈ ಚೆಲ್ಲಿದ್ದಾರೆ. ಜಿಲ್ಲೆಗೆ ಸುಸಜ್ಜಿತವಾದ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಿಸುವಲ್ಲಿ ನಮ್ಮನ್ನು ಆಳಿದ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಜಿಲ್ಲೆಗೆ ಆಗಮಿಸಿದಾಗ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ನೀಡಿದ ಭರವಸೆ ಈಡೇರಿಲ್ಲ.
ಜಿಲ್ಲೆಯಲ್ಲಿ ದುರಂತ ಅಥವಾ ಅಪಘಾತ ಸಂಭವಿಸಿದಾಗ ಚಿಕಿತ್ಸೆಗಾಗಿ ೨೦೦ ಕೀ.ಮೀ ದೂರ ತೆರಳಬೇಕಾದ ದುಸ್ಥಿತಿ ಇದೆ. ಸರ್ಕಾರವು ಮುಂದಿನ ಬಜೆಟನಲ್ಲಿ ಬೇಡಿಕೆ ಈಡೇರಿಸಬೇಕು ಎಂದು ಪೊಸ್ಟಕಾರ್ಡ್ ಮೂಲಕ ಚಳುವಳಿ ಆರಂಭಿಸುತ್ತಿದ್ದು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಸಂಘಸAಸ್ಥೆಯವರು ಯೋಜನೆ ಯಶ್ವಸಿಗೆ ಕೈ ಜೋಡಿಸುವ ಮೂಲಕ ಜಿಲ್ಲೆಗೆ ನ್ಯಾಯ ಒದಗಿಸುವಲ್ಲಿ ಶ್ರಮಿಸಬೇಕು.

ಸರ್ಕಾರ ನಮ್ಮ ಮನವಿ ಎಚ್ಚೆತ್ತುಕೊಳ್ಳದೇ ಹೊದಲ್ಲಿ ಶರಾವತಿ ಎಡ ಬಲ ದಂಡೆಯ ನಿವಾಸಿಗಳು ಜಿಲ್ಲೆಯ ಜನರು ಒಗ್ಗೂಡಿ ಬೃಹತ್ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಒಂದೊಮ್ಮೆ ಬೇಡಿಕೆ ಈಡೇರಿಸದೆ ಹೊದಲ್ಲಿ ದಯಾಮರಣ ಕೋರಿ ಅರ್ಜಿ ಹಾಕುದಾಗಿಯೂ ಇದೆ ವೇಳೆ ಎಚ್ಚರಿಸಿದರು.
ಪರಿಸರ ಹೋರಾಟಗಾರರಾದ ಅಖಿಲೇಶ ಚಿಪಳಗಿ ಮಾತನಾಡಿ ಕೆ.ಪಿ.ಟಿ.ಸಿ.ಎಲ್ ಬಳಸಿಕೊಂಡು ಸರ್ಕಾರ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿ ಮಾಡಲು ಮುಂದಾಗಿದೆ. ಜಿಲ್ಲೆಯ ಜನ ಸ್ವೌಮ್ಯ ಸ್ವಭಾವದವರಾಗಿದ್ದಾರೆ. ಜಿಲ್ಲೆಗೆ ಏನು ಅಗತ್ಯವಿದೆಯೋ ಅದನ್ನು ಮಾಡದೇ, ಅನಗತ್ಯ ಇರುವುದನ್ನು ಜಾರಿ ಮಾಡಲು ಮುಂದಾಗಿದೆ. ಈ ಯೋಜನೆಗೆ ತಡೆಹಿಡಿಯುವುದು ಇದು ಕಣ್ಣೊರೆಸುವ ತಂತ್ರ. ಇದು ತಡೆಯುವುದು ಅಲ್ಲ, ರದ್ದತಿಯು ಅಲ್ಲವಾಗಿದ್ದು, ಹೋರಾಟಗಾರರ ದಿಕ್ಕು ತಪ್ಪಿಸುವ ತಂತ್ರವಾಗಿದೆ. ಯೋಜನೆ ಜಾರಿ ಮಾಡುವಾಗ ವಿಷಕಾರಿ ತ್ಯಾಜ್ಯ ನದಿಪಾತ್ರದ ತೀರಕ್ಕೆ ಹಾಕುವುದರಿಂದ, ವಿಷದ ನೀರು ಕುಡಿಯಬೇಕಾಗುತ್ತದೆ. ಆಸ್ಪತ್ರೆ ಕೇಳಿದರೆ, ವಿಷ ನೀಡುತ್ತಾರೆ. ಭೃಷ್ಟಚಾರದ ತೆವಲಿಗಾಗಿ ಜಿಲ್ಲೆಯ ಒಂದು ಭಾಗವನ್ನೆ ನಾಶ ಮಾಡಲು ಹೋಗುತ್ತಿದ್ದಾರೆ.
ಜಿಲ್ಲೆಯ ಧಾರಣಾ ಸಾಮರ್ಥ್ಯ ಅಧ್ಯಯನ ನಡೆಯಲಿ ಎಂದು ಸಂಸದರು ಹೇಳುತ್ತಾರೆ, ಈಗಾಗಲೇ ಅಧ್ಯಯನವಾಗಿದ್ದು, ಭೂಕುಸಿತವಲಯ, ಪಶ್ಚಿಮಘಟ್ಟಕ್ಕೆ ಉಂಟಾಗುವ ಹಾನಿಯ ಬಗ್ಗೆ ವರದಿ ನೀಡಿದೆ. ಜಿಲ್ಲೆಯಲ್ಲಿ ಮರಳು ಮಾಪಿಯಾ, ಮಣ್ಣಿನ ಮಾಪಿಯಾ ಜೊತೆ ಮರದ ಮಾಪಿಯಾ ಈ ಯೋಜನೆಯ ಕಾರ್ಯಗತವಾಗಲು ಕೆಲಸ ಮಾಡುತ್ತಿದೆ ಎಂದರು. ಕೊಡಗು, ಕೇರಳ, ಜಿಲ್ಲೆಯ ಶಿರೂರು ಗುಡ್ಡ ದುರಂತ ಸರ್ಕಾರಕ್ಕೆ ಎಚ್ಚರಿಕೆ ಸಂದೇಶವಾದರೂ ಇನ್ನು ಪಾಠ ಕಲಿತಿಲ್ಲ ಎಂದು ಆರೋಪಿಸಿದರು.
ಧಾರವಾಡ ಐಐಟಿ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀಪತಿ ಭಟ್ ಮಾತನಾಡಿ, ದೇಶದ ಹಿತಾಶಕ್ತಿಗಾಗಿ ಯೋಜನೆಯ ಡಿಪಿಆರ್ ಬಹಿರಂಗಪಡಿಸಿಲ್ಲ ಎನ್ನುತ್ತಾರೆ. ಹಾಗಾದರೆ ಇವರಿಗೆ ಶರಾವತಿ ಕಣಿವೆ ನಾಶವಾಗುವ ಬಗ್ಗೆ ಅರಿವಿಲ್ಲವೇ ಎಂದರು. ಯುವ ವಿಜ್ಞಾನಿ ಡಾ.ಎನ್.ಎಮ್ ಗುರುಪ್ರಸಾದ ಮಾತನಾಡಿ, ಕೆಪಿಸಿಎಲ್ ೧೩ ಇಲಾಖೆಗಳ ತಾತ್ಕಾಲಿಕ ಒಪ್ಪಿಗೆ ಪಡೆದಿದೆ. ಆದರೆ ಸಾವಿರಕ್ಕೂ ಹೆಚ್ಚು ನಿಯಮ ಹಾಕಿದೆ. ಯೋಜನೆ ಜಾರಿ ಆದಲ್ಲಿ ಗೇರುಸೊಪ್ಪದಿಂದ ಹೊನ್ನಾವರಕ್ಕೆ ಹರಿಯುವ ನದಿಯ ನೀರಿನಲ್ಲಿ ವ್ಯತ್ಯಾಸ ಆಗುತ್ತದೆ. ಉಪ್ಪುನೀರು ಕುಡಿಯುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ನಗರಬಸ್ತಿಕೇರಿಯಲ್ಲಿ ಈ ವರ್ಷ ಜಿಲ್ಲೆಯಲ್ಲೆ ಅತಿ ಹೆಚ್ಚಿನ ಮಳೆಯಾದ ಪ್ರದೇಶವಾಗಿದೆ. ಇಂತಹ ಸ್ಥಳದಲ್ಲಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವುದು ಆತಂಕಕಾರಿ ಬೆಳವಣೆಯಾಗಿದೆ ಎಂದರು.
ಪತ್ರಿಕಾಗೊಷ್ಠಿಯಲ್ಲಿ ರಾಜೇಶ ನಾಯ್ಕ, ವಿಶ್ವ ನಾಯ್ಕ, ನವೀನ ನಾಯ್ಕ, ವೆಂಕಟೇಶ ನಾಯ್ಕ ಮತ್ತಿತರಿದ್ದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”