ಹೊನ್ನಾವರ : ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಹಾಗೂ ಶ್ರೀ ಶಾರದಾಂಬ ಕಲಾ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು ಉಪ್ಪೋಣಿಯ ೨೦೨೫_೨೬ ನೇ ಶೈಕ್ಷಣಿಕ ಸಾಲಿನ ಹೊನ್ನಾವರ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಗಳ ಸಾಂಸ್ಕೃತಿಕ/ಸಹಪಠ್ಯ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಆರ್.ಎಸ್.ರಾಯ್ಕರ್ ಉಪ್ಪೋಣಿ ಇವರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಂಸ್ಥೆಯ ಉಪಾಧ್ಯಕ್ಷ ಉಲ್ಲಾಸ್ ಐ ನಾಯಕ ಉಪಸ್ಥಿತರಿದ್ದು ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮ ನಡೆಯುವುದು ಸಂತಸ ಎಂದರು. ಟ್ರಸ್ಟಿನ ಅಧ್ಯಕ್ಷ ಅಬ್ದುಲ್ ರೆಹಮಾನ್ ಸಂಶಿ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಕೊಡುಗೆಯನ್ನು ಸ್ಮರಿಸಿದರು. ಅದೇ ರೀತಿ ಮುಖ್ಯ ಅತಿಥಿ ಯಾಗಿ ಆಗಮಿಸಿದ ಮೌಸಿನ್ ಖಾಜಿ ಸಾಂಸ್ಕೃತಿಕ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.
ವೇದಿಕೆ ಯಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಕೆ ಜಿ ಹೆಗಡೆ, ಸದಸ್ಯ ಖಾಜಾ ಬೊಂಗೆ , ಟ್ರಸ್ಟಿನ ಉಪಾಧ್ಯಕ್ಷ ಜಿಪ್ರಿ ದಾವೂದ್ ಹೆರಂಗಡಿ, ಕಾರ್ಯದರ್ಶಿ ಮೌಲಾ ಗುಲ್ಜಾರ್ ಹೆರಂಗಡಿ, ಸದಸ್ಯರಾದ ಯೋಗೇಶ್ ಆರ್ ರಾಯ್ಕರ್, ಭಾವಪಕಿ ಮಸ್ತಾನ್, ಅಹಮ್ಮದ್ ಸಾಬ್ ಬುಡನ್ ಸಾಬ ಮುಕ್ತೇಸರ್ ಉಪ್ಪೋಣಿ, ಅಲ್ಲಾವುದ್ದೀನ್ ಹೆರಂಗಡಿ, ಇಮ್ತಿಯಾಜ್ ಕುರ್ವೆ, ಜನಾಬ್ ಅಸ್ಲಂ, ಉಪ್ಪೋಣಿ ಜಮಾತ್ ಅಧ್ಯಕ್ಷ ಖಲಂದರ್ ಅಲಿ ಸಾಬ್ ಗೈಮ,ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ ಎಸ್ ಸಂತೋಷಕುಮಾರ್ ಹಾಗೂ ಸಲಹಾ ಸಮಿತಿ ಸದಸ್ಯರಾದ ಹುಸೇನ್ ಗೈಮ, ಅಜೀಜ್ ಖಾನ್,ಅನ್ಸಾರಿ, ರಶೀದ್ ಬುಡನ್,ಥಿusuಜಿ ಸಾಬ್ ಇತರರು ಉಪಸ್ಥಿತರಿದ್ದರು. ತಾಲೂಕಿನ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು ಕಾಲೇಜು ಪ್ರಾಚಾರ್ಯ ಸುರೇಶ್ ವೈದ್ಯ ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು.ಉಪನ್ಯಾಸಕಿ ಜಾಕಿರ ಬೇಗಂ ವಂದನಾರ್ಪಣೆ ಮಾಡಿದರು ಹಾಗೂ ಉಪನ್ಯಾಸಕಿ ನಿಶ್ಮಿತಾ ಮಿರಾಂದ ಕಾರ್ಯಕ್ರಮ ನಿರೂಪಿಸಿದರು
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”