ಭಟ್ಕಳ: ಅಂಜುಮನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನವೆಂಬರ್ 15ರಂದು ರಾಜ್ಯದ ಪ್ರಥಮ ಹಾಗೂ ದ್ವಿತೀಯ ವರ್ಷದ ಸೈನ್ಸ್ ವಿದ್ಯಾರ್ಥಿಗಳಿಗಾಗಿ ಸ್ಟೆಮ್-25 ಫೆಸ್ಟ್ ಭವ್ಯವಾಗಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಫಜಲುರ್ ರೆಹಮಾನ್ ತಿಳಿಸಿದರು.

ಕಾಲೇಜು ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟೆಮ್-25 ಅನ್ನು ವಿಜ್ರಂಭಣೆಯಿAದ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದರು. ಫೆಸ್ಟ್ನಲ್ಲಿ ಶೆರ್ಲಾಕ್, ಟೆಕ್‌ವಿಜ್, ಯುರೇಖಾ ಹಾಗೂ ಮಾದರಿ ಎಕ್ಸ್ಪೋ ಎಂಬ ನಾಲ್ಕು ವಿಭಾಗಗಳನ್ನು ಮಾಡಲಾಗಿದ್ದು, ಪ್ರತಿಯೊಂದರಲ್ಲಿ ಅತ್ಯುತ್ತಮ ಪ್ರತಿಭೆ ತೋರಿದವರಿಗೆ ಬಹುಮಾನ ವಿತರಿಸಲಾಗುತ್ತದೆ ಎಂದರು.
ಒಟ್ಟು ರೂ 80 ಸಾವಿರ ಮೌಲ್ಯದ ಬಹುಮಾನಗಳನ್ನು ನೀಡಲಾಗುತ್ತಿರುವ ಈ ಫೆಸ್ಟ್ಗೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸೈನ್ಸ್ ವಿದ್ಯಾರ್ಥಿಗಳು ಆಗಮಿಸುವ ನಿರೀಕ್ಷೆ ಇದೆ. ಸೈನ್ಸ್ ಉಪನ್ಯಾಸಕರಿಗೂ ಪಾಲ್ಗೊಳ್ಳುವ ಅವಕಾಶವಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮ ಬೆಳಿಗ್ಗೆ 9.30ರಿಂದ ಆರಂಭಗೊಳ್ಳಲಿದ್ದು, ವಿದ್ಯಾರ್ಥಿಗಳ ಜ್ಞಾನವೃದ್ಧಿಗೆ ನೆರವಾಗುವ ಅನೇಕ ಇವೆಂಟ್‌ಗಳನ್ನು ಆಯೋಜಿಸಲಾಗಿದೆ. ಇಂತಹ ಫೆಸ್ಟ್ಗಳು ವಿದ್ಯಾರ್ಥಿಗಳಲ್ಲಿ ವಿಜ್ಞಾನಾಭಿರುಚಿ ಹೆಚ್ಚಿಸಲು ಸಹಾಯಕವಾಗುತ್ತವೆ ಎಂದರು.
ಈ ಸಂದರ್ಭದಲ್ಲಿ ಸ್ಟೆಮ್-25 ಫೆಸ್ಟ್ನ ಪೋಸ್ಟರ್‌ನ್ನು ಬಿಡುಗಡೆ ಮಾಡಲಾಯಿತು. ಕಾಲೇಜಿನ ಕಾರ್ಯದರ್ಶಿ ಮೊಹ್ಮದ್ ಅನ್‌ಸಾರ್ ದಾಮ್ದಾ ಅಬು, ಕಾರ್ಯಕ್ರಮ ಸಂಯೋಜಕ ಶ್ರೀಶೈಲ ಭಟ್, ಮಾಧ್ಯಮ ಸಂಚಾಲಕ ಸುಬ್ರಹ್ಮಣ್ಯ ಭಾಗವತ್ ಹಾಗೂ ಇತರರು ಹಾಜರಿದ್ದರು.

More Stories
ಭಟ್ಕಳ ತಲಾಂದ ಶಾಲೆಯಲ್ಲಿ ಉತ್ಸಾಹಭರಿತ ಪ್ರತಿಭಾ ಕಾರಂಜಿ, ಪುರವರ್ಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಸಡಗರ
ಭಟ್ಕಳದಲ್ಲಿ ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ ಅದ್ದೂರಿ ಸ್ವಾಗತ
ವ್ಯವಹಾರಿಕ ಜ್ಞಾನಕ್ಕೆ ಪಾಠ ಕಲಿಸಿದ ಮಕ್ಕಳ ಸಂತೆ