November 18, 2025

ಅಂಜುಮನ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಭಟ್ಕಳ ತಾಲೂಕಾ ಮಟ್ಟದ ಸಾಂಸ್ಕೃತಿಕ ಚಟುವಟಿಕೆ

ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ ಪಿಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ

ಭಟ್ಕಳ : ಅಂಜುಮನ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಭಟ್ಕಳ ತಾಲೂಕಾ ಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ ಪಿಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದು ಪ್ರಥಮ ಪಿಯು ವಿಭಾಗದಲ್ಲಿ ವಸುಧಾ ಹೆಬ್ಬಾರ ಭಾವಗೀತೆ ಯಲ್ಲಿ ಪ್ರಥಮ, ನಾಗರಾಜ ಶಿರಾಲಿ ಚಿತ್ರಕಲೆಯಲ್ಲಿ ಪ್ರಥಮ, ಚರಣ ನಾಯ್ಕ ಏಕಪಾತ್ರಾಭಿನಯದಲ್ಲಿ ದ್ವಿತೀಯ, ಕೌಶಿಕ ದೇವಾಡಿಗ ಮತ್ತು ಕಾರ್ತಿಕ ಹೆಗ್ಡೆ ರಸಪ್ರಶ್ನೆಯಲ್ಲಿ ದ್ವಿತೀಯ, ಭರತ ಕುಮಾರ ನಾಯ್ಕ ಜನಪದ ಗೀತೆ ದ್ವಿತೀಯ, ಧೀರಜ ವಿಜ್ಞಾನ ಮಾದರಿ ತಯಾರಿಕೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ದ್ವಿತೀಯ ಪಿಯು ವಿಭಾಗದಲ್ಲಿ ಪೂಜಾ ಗೊಂಡ ಎಕಪಾತ್ರಾಭಿನಯದಲ್ಲಿ ಪ್ರಥಮ, ಚಂದನಾ ನಾಯ್ಕ ಚಿತ್ರಕಲೆ ಪ್ರಥಮ, ಯುವರಾಜ ನಾಯ್ಕ ವಿಜ್ಞಾನ ಮಾದರಿ ತಯಾರಿಕೆ ಪ್ರಥಮ, ಲಾವಣ್ಯ ದೇವಾಡಿಗ ಜನಪದ ಗೀತೆ ಪ್ರಥಮ, ಪೂರ್ಣ ಹೆಗಡೆ ಭಾವಗೀತೆ ಪ್ರಥಮ, ಸಂಜನಾ ನಾಯ್ಕ ಕನ್ನಡ ಪ್ರಬಂಧ ಪ್ರಥಮ ಹಾಗೂ ಸುಬ್ರಮಣ್ಯ ಮೊಗೇರ ಜನಪದ ನೃತ್ಯ ಪ್ರಥಮ ಬಹುಮಾನ ಪಡೆದು ಕೊಂಡಿರುತ್ತಾರೆ.

ಉತ್ತಮ ಸಾಧನೆ ತೋರಿದ ಎಲ್ಲಾ ವಿದ್ಯಾರ್ಥಿಗಳಿಗೆ ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಅಧ್ಯಕ್ಷರಾದ ಡಾ. ಸುರೇಶ ವಿ. ನಾಯಕ, ಮ್ಯಾನೇಜಿಂಗ್ ಟ್ರಸ್ಟಿಯವರಾದ ಶ್ರೀ ಆರ್, ಜಿ, ಕೊಲ್ಲೆ, ಟ್ರಸ್ಟಿ ಮ್ಯಾನೇಜರ್À ಶ್ರೀ ರಾಜೇಶ ನಾಯಕ, ಪ್ರಾಂಶುಪಾಲರಾದ ಡಾ. ವಿರೇಂದ್ರ ವಿ. ಶಾನಬಾಗ, ಸಾಂಸ್ಕೃತಿಕ ಸ್ಪರ್ಧೆಯ ಸಂಯೋಜಕರಾದ ಉಪನ್ಯಾಸಕಿ ದೀಕ್ಷಾ ಭಂಡಾರಿ ಹಾಗೂ ಬೋಧಕ- ಬೋಧಕೇತರ ಸಿಬ್ಬಂಧಿಗಳು ಅಭಿನಂದಿಸಿರುತ್ತಾರೆ.

About The Author

error: Content is protected !!