November 18, 2025

ವತ್ತಿನಕಟ್ಟೆ ಮಹಾಸತಿ ನೂತನ ಸಭಾ ಭವನಾ ಉದ್ಘಾಟನೆ

ಬೈಂದೂರು : ಮಹಾಸತಿ ಅಮ್ಮನವರ ದೇವಸ್ಥಾನ ವತ್ತಿನಕಟ್ಟೆ ಬೈಂದೂರು ಇದರ ನೂತನ ಸಭಾ ಭವನ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಸಂಜೆ ನಡೆಯಿತು.

ಆನಗಳ್ಳಿ ಡಾ ವೇದಮೂರ್ತಿ ಚೆನ್ನಕೇಶವ ಗಾಯತ್ರಿ ಭಟ್ ಹಾಗೂ ಕ್ಷೇತ್ರದ ಅರ್ಚಕ ಕೃಷ್ಣಮೂರ್ತಿ ನಾವಡ ಅವರ ನೇತೃತ್ವದಲ್ಲಿ ಗುರುವಾರ ಸಂಜೆ ಸಭಾಭವನದ ವಾಸ್ತು ಹೋಮ, ಶುದ್ಧಿಕರಣ, ವಾಸ್ತು ಬಲಿ, ಧಾರ್ಮಿಕ ವಿಧಿವಿಧಾನ ಕಾರ್ಯ ನಡೆಸಿದರು.

ಶ್ರೀಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ ಬಾಬು ಹೆಗ್ಡೆ ಅವರು ಉದ್ಘಾಟಿಸಿ, ಮಾತನಾಡಿ, ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನವು ಕಾರಣಿಕ ಸ್ಥಳವಾಗಿದ್ದು, ಸಾವಿರಾರು ಭಕ್ತರು ನಂಬಿ ಬಂದಿದ್ದಾರೆ. ಈ ಕ್ಷೇತ್ರದ ಅರ್ಚಕರು ನಿರಂತರ ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿದ್ದು, ಇದೊಂದು ಧಾರ್ಮಿಕ ಬುನಾದಿಗೆ ಕಾರಣವಾಗಿದೆ. ಇದೀಗ ದಾನಿಗಳ ಸಹಕಾರದೊಂದಿಗೆ ಸುಸಜ್ಜಿತವಾಗಿ ಸಭಾಭವನ ಉದ್ಘಾಟನೆಗೊಂಡಿದೆ. ಬೈಂದೂರು ಭಾಗದ ಜನರು ಹಾಗೂ ಇಲ್ಲಿ ನಂಬಿದ ಭಕ್ತಾಧಿಗಳು ಸದುಪಯೋಗ ಪಡಿಸಬೇಕು ಎಂದರು.

ಮಹಾಸತಿ ಅಮ್ಮನವರ ದೇವಸ್ಥಾನ ವತ್ತಿನಕಟ್ಟೆ ಬೈಂದೂರು ಗೌರವಾಧ್ಯಕ್ಷ ಎಸ್. ರಾಜು ಪೂಜಾರಿ, ವತ್ತಿನಕಟ್ಟೆ ಬೈಂದೂರು ಮಹಾಸತಿ ಅಮ್ಮನವರ ದೇವಸ್ಥಾನದ ಅಧ್ಯಕ್ಷ ನಾಕಟ್ಟೆ ನಾಗರಾಜ್ ಶೆಟ್ಟಿ, ಬೈಂದೂರು ಸೇನೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು, ಬೈಂದೂರು ಪಟ್ಟಣ ಪಂಚಾಯತ್ ನಾಮ ನಿರ್ದೇಶಕರಾದ ಸದಾಶಿವ ಡಿ. ಪಡುವರಿ, ನಾಗರಾಜ್ ಗಾಣಿಗ ಬಂಕೇಶ್ವರ, ಮಹಾಸತಿ ಅಮ್ಮನವರ ದೇವಸ್ಥಾನ ವತ್ತಿನಕಟ್ಟೆ ಕಾರ್ಯದರ್ಶಿ ಎಸ್. ಶಿವರಾಮ ಪೂಜಾರಿ, ಸದಸ್ಯರಾದ ಶಂಕರ ಮೊಗವೀರ, ಮಂಜುನಾಥ ಆಚಾರ್ಯ, ಸತ್ಯಪ್ರಸನ್ನ, ಕ್ಷೇತ್ರದ ಪಾತ್ರಿ ಅಣ್ಣಪ್ಪ ಪೂಜಾರಿ ಹಾಗೂ ಊರಿನ ಗ್ರಾಮಸ್ಥರು ಇದ್ದರು.

ವರದಿ : ಎಚ್ ಸುಶಾಂತ್ ಆಚಾರ್ ಬೈಂದೂರು

About The Author

error: Content is protected !!