November 18, 2025

ವೆಂಕಟಾಪುರದಲ್ಲಿ ಗಾಂಜಾ ಸೇವಿಸಿ ಅಡ್ಡಾಡಿದ ಇಬ್ಬರು ಯುವಕರು ಬಂಧನ

ಭಟ್ಕಳ: ತಾಲ್ಲೂಕಿನ ವೆಂಕಟಾಪುರ ಜಾಗಟೆಬೈಲು ಬಳಿ ಗಾಂಜಾ ಸೇವನೆ ಮಾಡಿ ವಿಚಿತ್ರವಾಗಿ ವರ್ತಿಸುತ್ತಿದ್ದ ಇಬ್ಬರು ಯುವಕರನ್ನು ಗ್ರಾಮೀಣ ಠಾಣೆಯ ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಬಂಧಿಸಿದ್ದಾರೆ.

ಬAಧಿತರು ಶಿರಾಲಿ ಮೊಗೇರಕೇರಿಯ ಹರ್ಷತ್ ಅಣ್ಣಪ್ಪ ಮೊಗೇರ (19) ಹಾಗೂ ರೋಹಿತ್ ಶಿವರಾಮ ಮೊಗೇರ (19) ಎಂದು ಗುರುತಿಸಲಾಗಿದೆ.
ಇವರಿಬ್ಬರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿ, ವರದಿಯಲ್ಲಿ ಗಾಂಜಾ ಸೇವನೆ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

error: Content is protected !!