November 18, 2025

ಬಿ.ಎಡ್ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶ

ಭಟ್ಕಳ: ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ 2024-25 ನೇ ಸಾಲಿನ ಬಿ.ಎಡ್ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಪಲಿತಾಂಶವು ಶೇ. 100 ರಷ್ಟಾಗಿದ್ದು ಪರೀಕ್ಷೆಗೆ ಕುಳಿತ ಒಟ್ಟು 47 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು ಶೇ. 90 ಕ್ಕಿಂತ ಹೆಚ್ಚು ಅಂಕವನ್ನು ಪಡೆದು ತೇರ್ಗಡೆಯಾಗಿದ್ದು ಉಳಿದ ವಿದ್ಯಾರ್ಥಿಗಳು ಶೇ. 80 ಕ್ಕಿಂತ ಹೆಚ್ಚು ಅಂಕವನ್ನು ಪಡೆದು ತೇರ್ಗಡೆಯಾಗಿದ್ದಾರೆ.

ಮಹಾವಿದ್ಯಾಲಯದ ನೂತನಾ ಮಂಜುಗೌಡ 93.67% ಅಂಕದೊAದಿಗೆ ಪ್ರಥಮ, ಅನಿತಾ ನಿಂಗಪ್ಪ ಹರವಳ್ಳಿ 92.67% ಅಂಕದೊAದಿಗೆ ದ್ವಿತೀಯ ಮತ್ತು ಗೀತಾ ಅಣ್ಣಪ್ಪ ನಾಯ್ಕ 92.17% ಅಂಕದೊAದಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಉತ್ತಮ ಸಾಧನೆ ತೋರಿದ ಎಲ್ಲಾ ವಿದ್ಯಾರ್ಥಿಗಳಿಗೆ ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಅಧ್ಯಕ್ಷರಾದ ಡಾ. ಸುರೇಶ ವಿ. ನಾಯಕ, ಮ್ಯಾನೇಜಿಂಗ್ ಟ್ರಸ್ಟಿಯವರಾದ ಶ್ರೀ ಆರ್. ಈ. ಕೊಲ್ಲೆ, ಟ್ರಸ್ಟಿ ಮ್ಯಾನೇಜರ್À ಶ್ರೀ ರಾಜೇಶ ನಾಯಕ, ಪ್ರಾಂಶುಪಾಲರಾದ ಡಾ. ವಿರೇಂದ್ರ ವಿ. ಶಾನಬಾಗ, ಹಾಗೂ ಬೋಧಕ- ಬೋಧಕೇತರ ಸಿಬ್ಬಂಧಿಗಳು ಅಭಿನಂದಿಸಿರುತ್ತಾರೆ.

About The Author

error: Content is protected !!