November 19, 2025

ದುಃಖದ ಕ್ಷಣದಲ್ಲಿ ಗ್ರಾಹಕ ಕುಟುಂಬದ ಬೆಂಬಲಕ್ಕೆ ಕರ್ಣಾಟಕ ಬ್ಯಾಂಕ್: ರೂ 10 ಲಕ್ಷ ವಿಮಾ ಚೆಕ್ ಹಸ್ತಾಂತರ

ಭಟ್ಕಳ: ಕರ್ಣಾಟಕ ಬ್ಯಾಂಕ್ ಹಾಗೂ ಯುನಿವರ್ಸಲ್ ಸೊಂಪೊ ಜನರಲ್ ಇನ್ಸುರೆನ್ಸ್ ಕಂಪನಿಯ ಒಡಂಬಡಿಕೆಯಡಿ ನೀಡಲ್ಪಡುವ ಕೆ.ಬಿ.ಎಲ್. ಸುರಕ್ಷಾ ವಿಮೆ ಪಾಲಿಸಿಯಡಿ, ಅಪಘಾತದಲ್ಲಿ ಮೃತಪಟ್ಟ ಭಟ್ಕಳ ಶಾಖೆಯ ಗ್ರಾಹಕ ಯೋಗೇಶ ನಾಗಪ್ಪ ನಾಯ್ಕ ಅವರ ತಾಯಿ ಮಳ್ಳಿ ನಾಗಪ್ಪ ನಾಯ್ಕ ಅವರಿಗೆ ?10 ಲಕ್ಷಗಳ ವಿಮಾ ಪರಿಹಾರ ಹಣವನ್ನು ಬ್ಯಾಂಕಿನ ವತಿಯಿಂದ ಹಸ್ತಾಂತರಿಸಲಾಯಿತು.

ಭಟ್ಕಳ ಶಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೆಕ್ಕನ್ನು ಹಸ್ತಾಂತರಿಸಿದ ಬ್ಯಾಂಕಿನ ಉತ್ತರ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಮುಖ್ಯ ವ್ಯವಸ್ಥಾಪಕ ರಂಜಿತ್ ಶೆಟ್ಟಿ ಎ. ಮಾತನಾಡಿ, ಕರ್ಣಾಟಕ ಬ್ಯಾಂಕು ಸದಾ ಗ್ರಾಹಕ ಸ್ನೇಹಿ. ಕುಟುಂಬದ ಸದಸ್ಯರು ಆಕಸ್ಮಿಕವಾಗಿ ಮೃತಪಟ್ಟ ನೋವಿಗೆ ಪರ್ಯಾಯ ಶಬ್ದಗಳಿಲ್ಲ. ಆದರೆ ಈ ವಿಮಾ ಮೊತ್ತ ಕುಟುಂಬಕ್ಕೆ ಜೀವನ ನಿರ್ವಹಣೆಗೆ ನೆರವಾಗುತ್ತದೆ. ದುಃಖದ ಕ್ಷಣದಲ್ಲಿ ಗ್ರಾಹಕರ ಜೊತೆಯಲ್ಲಿರುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.

ಶಾಖೆಯ ವ್ಯವಸ್ಥಾಪಕ ಸುನಿಲ್ ಪೈ ಮಾತನಾಡಿ ಕಳೆದ ಜನವರಿಯಲ್ಲಿ ನಮ್ಮ ಗ್ರಾಹಕ ಯೋಗೇಶ ಅಪಘಾತದಲ್ಲಿ ಮೃತರಾದುದು ಅತ್ಯಂತ ದುಃಖದ ವಿಷಯ. ಈ ನಷ್ಟ ಭರಿಸಲಾಗದಂತದ್ದು. ಕುಟುಂಬದ ದುಃಖದಲ್ಲಿ ಬ್ಯಾಂಕು ಸಹ ಭಾಗಿಯಾಗಿದ್ದು, ಜೀವನ ಭದ್ರತೆಗೆ ವಿಮಾ ಮೊತ್ತ ಹಸ್ತಾಂತರಿಸುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಯುನಿವರ್ಸಲ್ ಸೊಂಪೊ ಜನರಲ್ ಇನ್ಸುರೆನ್ಸ್ನ ಸಂತೋಷ, ಬ್ಯಾಂಕಿನ ಸಹಾಯಕ ವ್ಯವಸ್ಥಾಪಕಿ ಗಾನವಿ ಎಚ್.ಬಿ., ಅಧಿಕಾರಿ ಅನಂತ ಪೈ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

error: Content is protected !!