ಹೊನ್ನಾವರ: ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿಯಲ್ಲಿ ಸಂಭ್ರಮ ಆಚರಣೆ ಅಂಗವಾಗಿ ಮಕ್ಕಳ ಸಂತೆ ಕಾರ್ಯಕ್ರಮವನ್ನು ಜರುಗಿತು. ಮಕ್ಕಳಲ್ಲಿ ಸೃಜನಶೀಲತೆ, ಹೊಣೆಗಾರಿಕೆ, ವ್ಯವಹಾರಿಕ ಜ್ಞಾನ ಮತ್ತು ತಂಡಭಾವವನ್ನು ಬೆಳೆಸುವ ಉದ್ದೇಶದಿಂದ ಈ ಸಂತೆ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳು ವಿವಿಧ ಮನರಂಜನಾ ಆಟಗಳು, ತರಕಾರಿ ಹಣ್ಣು ಹಂಪಲು, ತಿಂಡಿ ತಿನಿಸುಗಳು ಬಟ್ಟೆ ಅಂಗಡಿ ಮತ್ತಿತರ ಅಂಗಡಿಗಳನ್ನು ತೆರೆದಿದ್ದರು. ವಿದ್ಯಾರ್ಥಿಗಳು ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಹಣದ ಮೌಲ್ಯ, ಲೆಕ್ಕಾಚಾರ ಮತ್ತು ಗ್ರಾಹಕರೊಂದಿಗೆ ಮಾತನಾಡುವ ನೈಪುಣ್ಯವನ್ನು ಕಲಿತುಕೊಂಡರು. ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿತು. ಕಾರ್ಯಕ್ರಮದ ಅವಧಿಯಲ್ಲಿ ಮಕ್ಕಳ ಉತ್ಸಾಹ ಮತ್ತು ಶಿಸ್ತು ಪ್ರಶಂಸನೀಯವಾಗಿತ್ತು.



ಮಕ್ಕಳ ಸಂತೆಯನ್ನು ಹಳದಿಪುರ ಗ್ರಾ.ಪಂ. ಸದಸ್ಯ ಶಾಲೆಯ ಪೂರ್ವ ವಿದ್ಯಾರ್ಥಿ ನವಿನ್ ನಾಯ್ಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯಾಧ್ಯಾಪಕರಾದ ಎಲ್ ಎಂ ಹೆಗಡೆ ಆಡಳಿತ ಮಂಡಳಿಯ ಅಧ್ಯಕ್ಷ ಗಜಾನನ ಹೆಗಡೆ, ಊರಿನ ಮುಖಂಡರಾದ ಶ್ರೀಕಾಂತ ಮೊಗೇರ, ತುಕಾರಾಮ ನಾಯ್ಕ, ನಾಗರಾಜ್ ನಾಯ್ಕ , ಆಡಳಿತ ಮಂಡಳಿಯ ನಿರ್ದೇಶಕರುಗಳು, ಊರಿನ ಶಿಕ್ಷಣ ಅಭಿಮಾನಿಗಳು, ಪಾಲಕರು ಪೋಷಕರು ಶಿಕ್ಷಕರು ಉಪಸ್ಥಿತರಿದ್ದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
ಭಟ್ಕಳ ತಲಾಂದ ಶಾಲೆಯಲ್ಲಿ ಉತ್ಸಾಹಭರಿತ ಪ್ರತಿಭಾ ಕಾರಂಜಿ, ಪುರವರ್ಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಸಡಗರ
ಭಟ್ಕಳದಲ್ಲಿ ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ ಅದ್ದೂರಿ ಸ್ವಾಗತ
ದುಃಖದ ಕ್ಷಣದಲ್ಲಿ ಗ್ರಾಹಕ ಕುಟುಂಬದ ಬೆಂಬಲಕ್ಕೆ ಕರ್ಣಾಟಕ ಬ್ಯಾಂಕ್: ರೂ 10 ಲಕ್ಷ ವಿಮಾ ಚೆಕ್ ಹಸ್ತಾಂತರ