December 24, 2025

ಪ್ರತಿಷ್ಠಿತ ಶ್ರೀಮಾರುತಿ ಸಹಕಾರಿ ಪತ್ತಿನ ಸಂಘಕ್ಕೆ ಉತ್ತಮ ಸಹಕಾರಿ ಪತ್ತಿನ ಸಂಘ ಪ್ರಶಸ್ತಿ

ಭಟ್ಕಳ : ಕರ್ನಾಟಕ ರಾಜ್ಯ ಸರ್ಕಾರ ಸಹಕಾರ ಇಲಾಖೆ.,ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲನಿ., ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಲನಿ. ಬೆಂಗಳೂರು ಇವರ ನೇತ್ರತ್ವದಲ್ಲಿ ಹಾವೇರಿಯಲ್ಲಿ ಏರ್ಪಡಿಸಿದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಶಿರಾಲಿಯ ಶ್ರೀಮಾರುತಿ ಸಹಕಾರಿ ಪತ್ತಿನ ಸಂಘಕ್ಕೆ ಜಿಲ್ಲೆಯ ಉತ್ತಮ ಸಹಕಾರಿ ಪತ್ತಿನ ಸಂಘ 2025″ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಮಹಾಮಂಡಲದ ನಿರ್ದೇಶಕರಾದ ಡಾ.ಸಂಜಯ ಹೊಸಮಠ ಇವರು ಸಂಘದ ಪರವಾಗಿ ಅಧ್ಯಕ್ಷರಾದ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಅಶೋಕ ಪೈ, ಉಪಾಧ್ಯಕ್ಷರಾದ ಉಮೇಶ ಕಾಮತ್, ಹಾಗೂ ಮುಖ್ಯ ಕಾರ್ಯನಿರ್ವಾಹಕರಾದ ರಾಜೇಂದ್ರ ಶಾನಭಾಗರವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.

ನಿರ್ದೇಶಕರಾದ ರವೀಂದ್ರ ಪ್ರಭು, ಅನಂತ ಕಾಮತ್, ಶಾಖಾಪ್ರಭಂದಕರಾದ ಪ್ರಸನ್ನ ಪ್ರಭು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು. 26ವರ್ಷಗಳ ಇತಿಹಾಸ ಹೊಂದಿರುವ ಶ್ರೀಮಾರುತಿ ಪತ್ತಿನ ಸಂಘವು ತನ್ನ 4ಶಾಖೆಗಳ ಮೂಲಕ 116 ಕೋಟಿಗೂ ಮಿಕ್ಕಿ ಠೇವಣಿ ಸಂಗ್ರಹಿಸಿ ಸದಸ್ಯರಿಗೆ ರೂ.103.62ಕೋಟಿಸಾಲವನ್ನು ನೀಡಿ 98.49% ಸಾಲ ವಸೂಲಾತಿಯೊಂದಿಗೆ ಸುಮಾರು 2.53 ಕೋಟಿಗೂ ಮಿಕ್ಕಿಲಾಭಗಳಿಸಿದೆ. ಸದಸ್ಯರಿಗೆ 12% ಲಾಭಾಂಶವನ್ನು ವಿತರಿಸುತ್ತ ಸಂಘದ ಲೆಕ್ಕಪರಿಶೋಧನಾವರದಿಯಲ್ಲಿ ಸತತ 14ವರ್ಷಗಳಿಂದ ಸಂಘವು “ಅ” ದರ್ಜೆ ಪಡೆದಿರುವುದು ಈ ಪ್ರಶಸ್ತಿಗಳಿಸಲು ಸಹಕಾರಿಯಾಯಿತು.ಸಚಿವರಾದ ಹೆಚ್.ಕೆ.ಪಾಟೀಲ್,ಸಭಾಪತಿಗಳಾದ ಬಸವರಾಜಹೊರಟ್ಟಿ, ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷರಾದ ಜಿ.ಟಿ.ದೇವೇಗೌಡ ಮುಂತಾದ ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಶ್ರೀಮಾರುತಿ ಪತ್ತಿನ ಸಂಘಕ್ಕೆ ಈ ಪ್ರಶಸ್ತಿಯು 3ನೇ ಬಾರಿ ಲಭಿಸಿದ್ದು ಈ ಹಿಂದೆ 2017 ಹಾಗೂ 2024ರಲ್ಲಿಯೂ ಲಭಿಸಿದ್ದನ್ನು ಸ್ಮರಿಸಬಹುದು. ಅಲ್ಲದೇ ಸಂಘವು 2023-24ನೇ ಸಾಲಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸದ್ದನ್ನು ಪರಿಗಣಿಸಿ ಕೆ.ಡಿಸಿ.ಸಿ.ಬ್ಯಾಂಕ್‌ನಿAದ ಕೊಡಮಾಡುವ ಜಿಲ್ಲಾ ಮಟ್ಟದ ಉತ್ತಮ ಸಹಕಾರಿಸಂಘ ಪ್ರಶಸ್ತಿಗೆ ಭಾಜನವಾಗಿತ್ತು.

About The Author

error: Content is protected !!