December 24, 2025

ಕಾರವಾರದಲ್ಲಿ ಡಿ 6 ರಂದು ಅಂಬೇಡ್ಕರ್ ಪರಿವರ್ತನಾ ದಿನಾಚರಣೆ :ಭೂಮಿ ಹಕ್ಕು ಸಂವಿಧಾನ ಭದ್ದ ಹಕ್ಕು ಪ್ರತಿಪಾದನೆ – ರವೀಂದ್ರ ನಾಯ್ಕ

ಭಟ್ಕಳ : ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಡಿ6 ರಂದು ಕಾರವಾರದಲ್ಲಿ ಜರುಗಲಿರುವ ಅರಣ್ಯವಾಸಿಗಳ ಬೃಹತ್ ರ‍್ಯಾಲಿಯನ್ನು ಸಂಘಟಿಸುವ ಮೂಲಕ ಭೂಮಿ ಹಕ್ಕು ಸಂವಿಧಾನ ಭದ್ದ ಹಕ್ಕು ಎಂದು ಪ್ರತಿಪಾದಿಸುತ್ತಾ ಅಂದು ಅಂಬೇಡ್ಕರ ಪರಿವರ್ತನಾ ದಿನಾಚರಣೆ ಆಚರಿಸಲಾಗುವುದು ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳೀದರು.

ಇಂದು ಭಟ್ಕಳದ ಕೋಲಾ ಪೆರಾಡ್ಯಸ್ ಸಂಬಾAಗಣದಲ್ಲಿ ಕಿಕ್ಕಿರಿದು ಸೇರಿದ ಅರಣ್ಯವಾಸಿಗಳ ಸಭೆಯನ್ನೂದ್ದೇಶಿಸಿ ಮಾತನಾಡುತ್ತಾ ಹೇಳಿದರು. ಅರಣ್ಯವಾಸಿಗಳಲ್ಲಿ ಕಾನೂನು ಅರಿವು ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾದ್ಯಂತ ಹಮ್ಮಿಕೊಳ್ಳಲಾದ ಅರಣ್ಯವಾಸಿಗಳ ಕಾನೂನು ಜಾಗೃತ ಜಾಥದ ಅಂಗವಾಗಿ ಕಾರವಾರದಲ್ಲಿ ಜರುಗುವ ಬೃಹತ್ ಸಮಾವೇಶವನ್ನ ಪ್ರತಿಪಾದನೆಯಾಗಿ ಸಂವಿಧಾನ ಭದ್ದ ಭೂಮಿ ಹಕ್ಕು ಸಂದೇಶ ಪ್ರತಿಪಾದನೆಗೆ ಅಂಬೇಡ್ಕರ್ ಪರಿವರ್ತನಾ ದಿನಾಚರಣೆಯಲ್ಲಿ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಕಾನೂನು ಜಾಗೃತ ಜಾಥದ ಅಂಗವಾಗಿ ಜಿಲ್ಲಾದ್ಯಂತ 132 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾನೂನು ಜಾಗೃತ ಕಾರ್ಯಕ್ರಮವನ್ನು ಸಂಘಟಿಸಲು ಹೋರಾಟಗಾರರ ವೇದಿಕೆಯ ತೀರ್ಮಾನಿಸಿದೆ. ಎಂದು ಅವರು ಹೇಳಿದರು. ಸಭೆಯಲ್ಲಿ ಜಿಲ್ಲಾ ಸಂಚಾಲಕರಾದ ದೇವರಾಜ ಗೊಂಡ ಸ್ವಾಗತಿಸಿದರು. ಇನ್ನರ‍್ವ ಜಿಲ್ಲಾ ಸಂಚಾಲಕ ಪಾಂಡುರAಗ ನಾಯ್ಕ ಬೆಳಕೆ ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ ಚಂದ್ರು ನಾಯ್ಕ ಬೆಳಕೆ, ಚಂದ್ರ ಬೆಳಕೆ, ವೆಂಕಟ ನಾಯ್ಕ, ಶಿವು ಮರಾಠಿ, ಕುಪ್ಪಯ್ಯ ಭಂಡಾರಿ, ಗಣೇಶ ಕಲ್ಯಾಣಿ, ಶಂಕರ್ ನಾಯ್ಕ, ದೇವಿ ಚಂದ್ರ ಗೊಂಡ, ಸಾದಿಯಾ ಹೆಬ್ಬಳೆ, ಶ್ರೀದರ ಮುಣಕುಳಿ, ಗುಂಡು ಆಚಾರಿ, ಗಿರಿಜಾ ಮೋಗೇರ್, ದೇವಕಿ ಮೋಗೇರ್, ವಿಮಲಾ ಮೋಗೇರ, ಕೈರುನ್ನಿಸಾ, ಅಲಿಮಾ ಮುಂತಾದವರು ಉಪಸ್ಥಿತರಿದ್ದರು.

ಡಿ.3 ರಂದು ಜಾಥಾ ಭಟ್ಕಳದಲ್ಲಿ ಚಾಲನೆ:
ಅರಣ್ಯ ಹಕ್ಕು ಕಾಯಿದೆ ಜಾಗೃತ ಜಾಥವೂ ಡಿ.3 ರಂದು ಚಾಲನೆ ನೀಡಲಾಗುವುದು ಎಂದು ಅವರು ಹೇಳುತ್ತಾ, ಹೆಚ್ಚಿನ ಸಂಖ್ಯೆಯಲ್ಲಿ ಅರಣ್ಯವಾಸಿಗಳು ಕಾನೂನು ಜಾಗೃತ ಜಾಥದ ಪ್ರಯೋಜನ ಪಡೆದುಕೊಳ್ಳಬೇಕೆಂದು ರವೀಂದ್ರ ನಾಯ್ಕ ಕರೆ ನೀಡಿದರು.

ಐದು ಲಕ್ಷ ಕರಪತ್ರ:
ಅರಣ್ಯ ಹಕ್ಕು ಕಾಯಿದೆ ಜಾಗೃತ ಜಾಥಾದಲ್ಲಿ ರಾಜ್ಯದ 16 ಜಿಲ್ಲೆಗಳಲ್ಲಿ ಅರಣ್ಯ ಹಕ್ಕು ಕಾಯಿದೆಗೆ ಸಂಭAದಿಸಿ ಐದು ಲಕ್ಷ ಕರಪತ್ರಗಳನ್ನು ಅರಣ್ಯವಾಸಿಗಳಿಗೆ ರಾಜ್ಯಾದ್ಯಂತ ಬಿತ್ತರಿಸಲಾಗುವುದು ಎಂದು ಅವರು ಹೇಳಿದರು. ದಾಖಲೆಗಳ ಸಂಗ್ರಹ, ಮಂಜೂರಿ ಪುನರ್ ಪರಿಶೀಲನಾ, ಕಾನೂನು ಅಂಶಗಳು ಮತ್ತು ಒಕ್ಕಲೆಬ್ಬಿಸುವ ಪ್ರಕ್ರಿಯೆ, ಅರಣ್ಯವಾಸಿಗಳಿಗೆ ದೌಜನ್ಯದ ಕುರಿತು ಕಾನೂನಾತ್ಮಕ ಅಂಶಗಳನ್ನು ಒಳಗೊಂಡ ವಿವಿಧ ಅಂಶಗಳನ್ನು ಕರಪತ್ರ ಹೊಂದಿರುತ್ತದೆ ಎಂದು ರಾಜ್ಯಾದ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

About The Author

error: Content is protected !!