December 23, 2025

ವರದ ಗ್ರಾಮೀಣ ಬ್ಯಾಂಕ್ ನಲ್ಲಿ ಸೇವೆನೀಡಿ ನಿವೃತ್ತಿ ಗೊಂಡ ನೌಕರ ಕುಟುಂಬದಿAದ ಅಂಡಮಾನ್ ಮತ್ತು ನೀಲ್ ಐ ಲ್ಯಾಂಡ್ ಪ್ರವಾಸ

ಉಡುಪಿ : ಉತ್ತರ ಕನ್ನಡ ಜಿಲ್ಲೆಯ ವರದ ಗ್ರಾಮೀಣ ಬ್ಯಾಂಕ್‌ನಲ್ಲಿ ಸೇವೆನೀಡಿ ನಿವೃತ್ತಿ ಗೊಂಡ ಸಮಾನ ಮನಸ್ಕ 20 ಕುಟುಂಬ ಒಟ್ಟು 40 ಮಂದಿ ನವೆಂಬರ್ 4 ರಿಂದ 9 ನೇ ತಾರೀಕಿನ ತನಕ ಅಂಡಮಾನ್ ಮತ್ತು ನೀಲ್ ಐ ಲ್ಯಾಂಡ್ ಪ್ರವಾಸ ಕೈ ಗೊಂಡಿತ್ತು.

ಹಿಂದೆ ವರದಾ ಗ್ರಾಮೀಣ ಬ್ಯಾಂಕ್ ಹೆಸರಿನಿಂದ ಉತ್ತರ ಕನ್ನಡದಲ್ಲಿ ಬ್ಯಾಂಕಿAಗ್ ವ್ಯವಹಾರ ನಡೆಸಿದ ಬ್ಯಾಂಖ ಈಗ ಕರ್ನಾಟಕ ಗ್ರಾಮೀಣ ಬ್ಯಾಂಕ್ ಎಂಬ ಹೆಸರಿನಿಂದ ನಡೆಯುತ್ತಿದೆ, ಈ ಹಿಂದೆ ವರದಾ ಗ್ರಾಮೀಣ ಬ್ಯಾಂ ಎಂಭ ಹೆಸರಿರುವಾಗ ಅನೇಕರು ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ, ಆದರೆ ಅವರೆಲ್ಲರು ತಮ್ಮ ಗೆಳೆತನವನ್ನು ಮುಂದುವರಿಸಿಕೊAಡು ಪ್ರತಿ ವರ್ಷ ಒಂದಲ್ಲ ಒಂದು ಕಾರ್ಯಕ್ರಮದ ಮೂಲಕ ಒಂದು ಗುಡಿ ತಮ್ಮ ಸಂತೋಷವನ್ನು ಹಂಚಿಕೊಳ್ಳುತ್ತಿದ್ದಾರೆ, ಈ ಬಗ್ಗೆ ನಿವೃತ್ತ ಮ್ಯಾನೇಜರ್ ಶ್ರೀಕಾಂತ ಹೊಳ್ಳರವರು ತಮ್ಮ ಪ್ರವಾಸ ಕಥನವನ್ನು ನಮ್ಮ ಮುಂದೆ ಬಿಚ್ಚಿತ್ತರು,

ಮೊದಲದಿನ (4/11/25) ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ಎಕ್ಷಪ್ರೆಸ್ ವಿಮಾನ ಹತ್ತಿ ಪೋರ್ಟ್ ಬ್ಲೇರ್ ವೀರ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿ ಸಂಜೆ 3.30 ಕ್ಕೆ ಸೆಲ್ಯೂಲರ್ ಜೈಲ್ ವೀಕ್ಷಣೆ ಕೈಗೊಂಡು ಸ್ಥಳೀಯ ಗೈಡ್ ಜೈಲಿನ, ಕೈದಿ ಗಳಿಗೆ ಕೊಡುತ್ತಿದ್ದ ಕರೀನೀರು, ಮರಣ ದಂಡನೆ ಮತ್ತಿತರ ಕಠಿಣ ಶಿಕ್ಷೆ ಗಳ ವಿವರಗಳನ್ನು ಹೇಳುವಾಗ ನಮ್ಮೆಲ್ಲರ ಕಣ್ಣಲ್ಲಿ ನೀರು ಜಿನುಗಿದ್ದು ಮಾತ್ರ ಸುಳ್ಳಲ್ಲ, ಕೊನೆಯಲ್ಲಿ ಗೈಡ್ ನಮ್ಮನ್ನು ತಂದು ನಿಲ್ಲಿಸಿದ್ದು ಸೆಲ್ಯೂಲರ್ ಜೈಲ್ ಎಂಬ ದೇವಸ್ಥಾನದಲ್ಲಿನ ಗರ್ಭಗುಡಿ ಅರ್ತಾರ್ಥ್ ಹಲವಾರು ವರ್ಷ ಬ್ರಿಟಿಷರಿಂದ ಕರೀನೀರು, ಕಠಿಣ ಶಿಕ್ಷೆ ಅನುಭವಿಸಿದ ಸ್ವಾತಂತ್ರ‍್ಯ ಹೋರಾಟಗಾರ ವೀರ ಸಾವರ್ಕರ ಕಳೆದ 8′ ್ಠ 8′ ಅಳತೆಯ ಜೈಲು ಕೊಣೆ ಯಲ್ಲಿ. ಅಲ್ಲಿ ಅವರ ಫೋಟೋ ನೋಡಿದ ತಕ್ಷಣ ರೋಮಾಂಚನ ಗೊಂಡು ತಮಗರಿವಿಲ್ಲದೆ ಕೈ ಜೋಡಿಸಿ ನಮಸ್ಕರಿಸಿದೆವು.

2 ನೇ ದಿನದ ಪಯಣ ಬೆಳಿಗ್ಗೆ 5.30ಕ್ಕೆ 57 ಕೀ. ಮೀ. ದೂರದ ಹೇವ್ ಲೊಕ್ ಐ ಲ್ಯಾಂಡ್ ( ಸ್ವರಾಜ್ ದ್ವೀಪ ) ಕ್ರೂಸ್ ನಲ್ಲಿ ಡಾನ್ಸ್, ಮೋಜು, ಮಸ್ತಿ ಮಾಡಿ 2.30 ಗಂಟೆ ಸಮುದ್ರದಲ್ಲಿ ಪಯಣಿಸಿ, ಲಂಚ್ ಮುಗಿಸಿ ಸ್ವಲ್ಪ ವಿಶ್ರಾಂತಿ ಪಡೆದು ನಮ್ಮವರೆಲ್ಲ ಸೇರಿದ್ದು ಏಶಿಯಾದ ಅಂತ್ಯAತ ಸುಂದರ, ಸ್ವಚ್ಛ, ಸುರಕ್ಷಿತ ಬೀಚ್ ಆದ “ರಾಧ ನಗರ ಬೀಚ್ ” ಗೆ. ನಮ್ಮಲ್ಲಿ ಹೆಚ್ಚಿನವರು ಕರಾವಳಿಗಾರಾಗಿದ್ದರೂ ಇಲ್ಲಿನ ಮಲ್ಪೆ, ಕಾಪು, ಮರವಂತೆ, ಮುರ್ಡೇಶ್ವರ, ಕಾಸರ ಕೊಡು, ಓಂ, ಕೂಡ್ಲೇ ಬೀಚ್ ನೋಡಿದವರಿಗೆ ಇದೂ ಹಾಗೆ ಇರಬಹುದೇಂದು ತಿಳಿದಿದ್ದೆವು, ಆದರೆ ಈ ಬೀಚಿನ ಮರಳು,ಪಾರದರ್ಶಕ ನೀರು,ನೀರಿನ ಸಳೆತ, ಸ್ವಚ್ಛತೆ ನೋಡಿದರೆ ಇದು ನಮ್ಮನ್ನೆಲ್ಲ ಬೇರೆಯೇ ಪ್ರಪಂಚಕ್ಕೆ ಕೊಂಡೋಯ್ದು ಮೈ, ಮನ ಬಿಚ್ಚಿ ಸ್ವಚಂದವಾಗಿ ನೀರಲ್ಲಿ ಆಡಿ, ಕೊನೆಯಲ್ಲಿ ಪೂರ್ವ ಕರಾವಳಿಯಲ್ಲಿ ಸೂರ್ಯಾಸ್ತ ನೋಡಿ ನಮಗಾಗಿ ಕಾಯ್ದಿಟ್ಟ ರೆಸಾರ್ಟಗೆ ಬಂದು ಡಿನ್ನರ್ ಮುಗಿಸಿ ಕೆಲವೊಂದು ಮನೋರಂಜನೆ ಆಟ ಆಡಿ ರೆಸ್ಟ್ ತೆಗೊಳ್ಳುವಲ್ಲಿಗೆ 2 ನೇ ದಿನದ ಪ್ರವಾಸ ಕೊನೆ ಗೊಂಡಿತು.

3ನೇ ದಿನದ ಪ್ರವಾಸ ಇಲ್ಲಿಂದ ಸಮುದ್ರ ದಲ್ಲಿ 10 ನಾಟಿಕಲ್ ಮೈಲ್ ದೂರದ ಎಲಿಫೆಂಟ್ ಬೀಚ್ ಗೆ 10 ಜನ ಕೂರುವ ಬೋಟಿನಲ್ಲಿ ಹೋಗಿ ಅಲ್ಲಿ ಮೊದಲು ಸಬ್ ಮೇರಿನ್ ನಲ್ಲಿ ಸಮುದ್ರದಾಳದಲ್ಲಿ ಪಯಣಿಸಿ ತರ ತರದ, ಬಣ್ಣ ಬಣ್ಣದ, ವಿವಿಧ ಆಕಾರದ ಮೀನುಗಳು ಮತ್ತು ಇತರ ಜಲತರಗಳನ್ನು ಹತ್ತಿರದಿಂದ ನೋಡಿ ಪುಳಕಿತಾರಾಗಿ ಮೇಲೆ ಬಂದು ಅವರವರಿಗೆ ಇಷ್ಟವಾದ ಡ್ರಾಗನ್ ಬೋಟ್, ಸೋಫಾ ಸೆಟ್ ಬೋಟ್, ಸ್ಪೀಡ್ ಬೈಕ್ ಬೋಟ್, ಬನಾನಾ ರೈಡ್,ಪ್ಯಾರಾಚುಟ್ ರೈಡಿಂಗ್ ಮತ್ತಿತರ ಆಟ ಆಡಿ ಸಂತೋಷ ಪಟ್ಟರು. ನಮ್ಮಲ್ಲಿ ಹೆಚ್ಚಿನವರು ವಯಸ್ಸು 60 ದಾಟಿದ್ದರಿಂದ ಸ್ಕೂಭಾ ಡಯಿಂಗ್ ಮಾಡಲಿಲ್ಲ. ಅಲ್ಲಿಗೆ ಸಮಯ ಸಂಜೆ 3.30 ಆಯ್ತು, ನಮಗೆ ಕೊಟ್ಟ ಸಮಯ ಮುಗಿಯಿತು, ಪುನಃ ವಾಪಸು ಬೋಟುಗಳಲ್ಲಿ ಸ್ವರಾಜ್ ದ್ವೀಪಕ್ಕೆಬಂದು ರೆಸಾರ್ಟ್ ನಲ್ಲಿ ರೆಸ್ಟ್ ಮಾಡಿ ಡಿನ್ನರ್ ಮುಗಿಸಿ ಸ್ವಲ್ಪ ಗುಂಪು ಮನೋರಂಜನೆ ನಡೆಸಿ 3 ನೇ ದಿನದ ಪ್ರವಾಸಕ್ಕೆ ಮಂಗಳ ಹಾಡಿದೆವು.

4 ನೇ ದಿನದ ಪಯಣ ಕ್ರೂಸ್ ನಲ್ಲಿ 2 ಗಂಟೆ ತೆಲಾಡಿ ಮುಟ್ಟಿದ್ದು ನೀಲ್ ಐ ಲ್ಯಾಂಡ್( ಶಹೀದ್ ದ್ವೀಪ). ಈ ಬೀಚ್ ನಲ್ಲಿ ನೀರಿನ ಮಟ್ಟ ಮೊಳಕಾಲು ಗಿಂತ ಕೆಳಗಿದ್ದರೂ ನಡೆಯಲು ತುಂಬಾ ಕಷ್ಟ. ಇಲ್ಲಿ ಡೆಡ್ ಕೊರಲ್ ಮತ್ತು ಮುತ್ತು ತಯಾರಾಗುವ ಆಲ್ಗೆ ಗಳ ಬಂಡೆ ಯಿಂದ ಅವರಿಸಲ್ಪಟ್ಟ ಪ್ರದೇಶ. ಇಲ್ಲಿ ನಿಸರ್ಗ ನಿರ್ಮಿತ ಮತ್ಸ್ಯ ಗಾರ ಮತ್ತು ನಿಸರ್ಗ ದಿಂದ ಮೂಡಿದ ಸೇತುವೆ ನೋಡಲು ಬಹು ಸುಂದರ. ಇದೆ ಸ್ಥಳದಲ್ಲಿ “ಮೆಕಾನಿಸ್ ಗೋಲ್ಡ್ ” ಇಂಗ್ಲಿಷ್ ಸಿನೆಮಾ ಶೂಟಿಂಗ್ ಆಗಿದ್ದು. ಅಲ್ಲಿಂದ ಲಕ್ಷ್ಮಣ ಪುರ ಬೀಚ್ ನಲ್ಲಿ ಸೂರ್ಯಾಸ್ತಮಾನ ನೋಡಿ 4 ನೇ ದಿನದ ಪ್ರವಾಸ ಕೊನೆ ಗೊಳಿಸಿದೆವು.

5 ನೇ ದಿನ ಬೆಳಿಗ್ಗೆ 9 ಗಂಟೆ ನಂತರ ಭರತ್ ಪುರ ಬೀಚ್ ಗೆ ಬಂದು ಅಲ್ಲಿ ಮೆಗ್ನಿ ಫ್ಯಾಡ್ ಗ್ಲಾಸ್ ( ಭೂತ ಕನ್ನಡಿ) ನಿರ್ಮಿತ ಬೋಟಿನಲ್ಲಿ ಪಯಣಿಸುವಾಗ ಸಮುದ್ರ ದಾಳದಲ್ಲಿ ಜಲಚರ, ಕೊರೆಲ್, ತರ ತರದ ಬಣ್ಣ ಬಣ್ಣದ, ವಿವಿಧ ಆಕಾರದ ಮೀನುಗಳನ್ನು ಹತ್ತಿರದಿಂದ ನೋಡುವ ಭಾಗ್ಯ ನಮ್ಮದಾಯ್ತು.ಅಲ್ಲಿಂದ ನಾವು ವಾಪಾಸು 2.30 ಗಂಟೆ ಕ್ರೂಸ್ ನಲ್ಲಿ ಪಯಣಿಸಿ ಪೋರ್ಟ್ ಬ್ಲೆರ್ ಗೆ ಬಂದು ಸಂಜೆ ಸ್ವಲ್ಪ ಶಾಪಿಂಗ್ ಮಾಡಿ ಹೋಟೆಲ್ ನಲ್ಲಿ ಎಲ್ಲಾ ಸೇರಿ ಕಳೆದ 5 ದಿನದ ಅನುಭವ ಹಂಚಿ ಕೊಂಡೆವು.

6 ನೇ ಮತ್ತು ಕೊನೆಯ ದಿನ ಬೆಳಿಗ್ಗೆ 9 ಗಂಟೆಗೆ ಟಿ ಟಿ ವಾಹನದಲ್ಲಿ ನಾವು ಬಂದು ನಿಂತಿದ್ದು ಅಂತಿAತ ಜಾಗವಲ್ಲ, ನೇತಾಜಿ ಸುಭಾಸ್ ಚಂದ್ರಭೋಸರು ಮೊತ್ತ ಮೊದಲು ಭಾರತದ ನೆಲದಲ್ಲಿ 1943 ರಲ್ಲಿಯೇ ಸ್ವಾತಂತ್ರ‍್ಯ ಧ್ವಜ ಹಾರಿಸಿ ” ವಂದೇ ಮಾತರಮ್ ” ರಾಷ್ಟ್ರ ಗೀತೆ ಹಾಡಿದ ಸ್ಥಳ. ಈ ಪುಣ್ಯ ಸ್ಥಳದಲ್ಲಿ ನಮ್ಮ ವರದ ಬಳಗದ ಈ 20 ಕುಟುಂಬ ” ವಂದೇ ಮಾತರಮ್ ” ಪೂರ್ಣ ರಾಷ್ಟ್ರ ಗೀತೆ ಎಲ್ಲಾ ಸೇರಿ ಹಾಡಿ ನೇತಾಜಿ ಮತ್ತು ರಾಷ್ಟ್ರಕ್ಕೆ ಗೌರವ ಅರ್ಪಿಸಿದರು. ಮಧ್ಯಾಹ್ನ 3.30 ಕ್ಕೆ ವಾಪಾಸು ಪೋರ್ಟ್ ಬ್ಲೆರ್ ನ ವೀರ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಪಯಣಿಸಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜೆ 5.45 ಕ್ಕೆ ಬಂದಿಳಿದು ಎಲ್ಲಾ 20 ವರದ ಕುಟುಂಬ ಭಾರವಾದ ಹೃದಯದಿಂದ ಅವರವರ ಸ್ಥಳ ಗಳಿಗೆ ನಿರ್ಗಮಿಸಿದರು. ಇಲ್ಲಿಗೆ 20 ವರದ ಕುಟುಂಬದ 6 ದಿನದ ಅಂಡಮಾನ್ ಮತ್ತು ನೀಲ್ ಐ ಲ್ಯಾಂಡ್ ಪ್ರವಾಸ ಯಶಸ್ವಿಯಾಗಿ, ಏನೂ ತೊಂದರೆ ಅಡಚಣೆ ಇಲ್ಲದೆ ಮುಗಿಯಿತು ಎಂದು ತಮ್ಮ ಪ್ರವಾಸ ಕಥನ ಬಿಚ್ಚಿಟ್ಟರು.

ಈ ಪ್ರವಾಸದ ಯೋಚನೆ ಯನ್ನು ಯೋಜನೆ ರೂಪದಲ್ಲಿ ತಂದು ಯಶಸ್ವೀ ಗೊಳಿಸಿದವರು ಎಲ್ಲಾ 20 ವರದ ಕುಟುಂಬ. ಅದರಲ್ಲೂ ಮುಖ್ಯವಾಗಿ ಎಲರನ್ನೂ ಸಂಘಟಿಸಿ, ಹುರುದುಂಬಿಸಿದವರು ಶ್ರೀಕಾಂತ ಹೊಳ್ಳ, ನಾರಾಯಣ ಯಾಜಿ, ಪ್ರಕಾಶ್ ಎ, ವಿ ವಿ ಯಾಜಿ, ಸುಬ್ಬ ರಾವ್ ಕಡೇಕೋಡಿ ಮತ್ತಿತರು,
ಪ್ರವಾಸವನ್ನು ಬಹಳ ಕಡಿಮೆ ಖರ್ಚಿನಲ್ಲಿ, ಉತ್ತಮವಾಗಿ, ಪರಿಣಾಮಕಾರಿಯಾಗಿ ನೆರವೇರಿಸಿ ಕೊಟ್ಟ “Weಟತಿeಣ ಖಿಡಿಚಿveಟ s Pvಣ. ಐಣಜ ಃಚಿಟಿgಚಿಟoಡಿe ಇದರ ಯಜಮಾನರಾದ ಶ್ರೀ ಜಯೇಶ್ ಮತ್ತು ಅವರ ಸಿಬ್ಬಂದಿಗಳಿಗೆ ವಾಹಿನಿಯ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ,

About The Author

error: Content is protected !!