December 23, 2025

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಗಳಲ್ಲಿ ಹೊನ್ನಾವರದ ಎಂ. ಪಿ. ಈ ಸೊಸೈಟಿಯ ಎಸ್. ಡಿ. ಎಂ ಪದವಿಪೂರ್ವ ಮಹಾವಿದ್ಯಾಲಯ ವಿದ್ಯಾರ್ಥಿಗಳು ಗಮನರ್ಹ ಸಾಧನೆ

ಹೊನ್ನಾವರ : ದಿನಾಂಕ 24/11/2025 ರಂದು ಜನತಾ ವಿದ್ಯಾಲಯ ಪಿ. ಯು ಕಾಲೇಜು ದಾಂಡೇಲಿಯಲ್ಲಿ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಗಳಲ್ಲಿ ಹೊನ್ನಾವರದ ಎಂ. ಪಿ. ಈ ಸೊಸೈಟಿಯ ಎಸ್. ಡಿ. ಎಂ ಪದವಿಪೂರ್ವ ಮಹಾವಿದ್ಯಾಲಯ ವಿದ್ಯಾರ್ಥಿಗಳು ಗಮನರ್ಹ ಸಾಧನೆ ಮಾಡಿದ್ದಾರೆ.
ರಕ್ಷಿತಾ ನಾಯ್ಕ ಪ್ರಥಮ ಪಿಯುಸಿ ವಿಜ್ಞಾನ ಮತ್ತು ಎಂ ಎಸ್ ಭೂಮಿಕಾ ಪ್ರಥಮ ಪಿಯುಸಿ ವಿಜ್ಞಾನ, ರಸಪ್ರಶ್ನೆಯಲ್ಲಿ ದ್ವೀತಿಯ ಸ್ಥಾನ ಪಡೆದಿರುತ್ತಾರೆ. ಸಾಗರ ನಾಯ್ಕ್ ದ್ವಿತೀಯ ಪಿಯುಸಿ ವಿಜ್ಞಾನ, ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಕಾಂತಿ ಎಸ್ ಹೆಗಡೆ ದ್ವಿತೀಯ ಪಿಯುಸಿ ವಾಣಿಜ್ಯ, ಚರ್ಚಾ ಸ್ಪರ್ಧೆಯಲ್ಲಿ (ಇಂಗ್ಲೀಷ್ ಮಾಧ್ಯಮ) ತೃತೀಯ ಸ್ಥಾನ ಪಡೆದಿರುತ್ತಾರೆ. ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.

About The Author

error: Content is protected !!