December 23, 2025

ರಸ್ತೆ ಸುರಕ್ಷತಾ ಜಾಗೃತಿ ಪೇಂಟಿ0ಗ್ ಸ್ಪರ್ಧೆಗೆ ವಿದ್ಯಾರ್ಥಿಗಳ ಸಂಭ್ರಮ

ಭಟ್ಕಳ: ಭಟ್ಕಳ ಶಹರ ಪೊಲೀಸ್ ಠಾಣೆ ಹಾಗು ಎಸ್-ಆರ್ಟ್ಸ್ ಇದರ ಸಂಯುಕ್ತ ಆಶ್ರಯದಲ್ಲಿ ಸಾಗರರೋಡ್ ಸಾಲುಮರದ ತಿಮ್ಮಕ್ಕ ಟೀ ಪಾರ್ಕಿನಲ್ಲಿ ನಡೆದ ಟ್ರಾಫಿಕ್ ಹಾಗು ರಸ್ತೆ ಸುರಕ್ಷತಾ ಜಾಗೃತಿ ಪೇಂಟಿAಗ್ ಸ್ಪರ್ಧೆಯಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಭಟ್ಕಳ ಮಜ್ಜಿಸೇ ಇಸ್ಲಾವ ತಂಜೀಮ್ ಇದರ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ. ಪೇಂಟಿAಗ್ ಸ್ಪರ್ಧೆಗೆ ಚಾಲನೆ ನೀಡಿದರು.ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಪಿಐ ದಿವಾಕರ, ರಸ್ತೆ ಸುರಕ್ಷತೆಗೆ ಸಂಬAಧಿಸಿದAತೆ ಪೊಲೀಸ್ ಇಲಾಖೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಸಾರ್ವಜನಿಕರ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ಸೈಬರ್ ಕ್ರೈಮ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ತಂಜೀಮ್ ಮುಖಂಡ ಇಮ್ರಾನ್ ಲಂಕಾ ಮಾತನಾಡಿ, ಮನಸ್ಸಿನಲ್ಲಿ ಸುಪ್ತವಾಗಿರುವ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳು, ಅಗತ್ಯತೆಗಳು, ಪ್ರತಿಭಟನೆಗಳನ್ನು ಕಲೆಯ ಮೂಲಕ ಹೊರ ತರಲು ಸಾಧ್ಯ. ಸ್ಪರ್ಧೆಯಲ್ಲಿ ಬಹುಮಾನ ಪಡೆಯುವುದಕ್ಕಿಂತ ಭಾಗವಹಿಸುವಿಕೆ ಅತಿ ಮುಖ್ಯವಾಗಿದೆ ಎಂದರು. ಎಸ್‌ಐ ತಿಮ್ಮಪ್ಪ, ಎಸ್-ಆರ್ಟ್ಸ್ ಸುಲೇಮ್, ಚಿತ್ರಕಲಾವಿದ ದರ್ಶನ ಮಹಾಬಲೇಶ್ವರ ನಾಯ್ಕ, ಸಾಲೀಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಾಲ್ಕು ವಿವಿಧ ಹಂತಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಎಸ್.ಆರ್. ಜುಬಾಪು ಪ್ರಥಮ, ಪ್ರಣೀತ್ ಎಂ. ದ್ವಿತೀಯ, ವೇದಾಂತ ಸಂಗಮೇಶ ತೃತೀಯ, ಧನ್ವಿ ಪ್ರಥಮ, ದೀಕ್ಷಿತ್ ನಾಯ್ಕ ದ್ವಿತೀಯ, ಸೀಯಾ ತೃತೀಯ, ಚರಣ್ ಎಂ. ನಾಯ್ಕ ಪ್ರಥಮ, ಮಯಾಂಕ್ ನಾಯ್ಕ ದ್ವಿತೀಯ, ಅನುಜ ಹೊಸಕಟ್ಟಾ ತೃತೀಯ, ಫಾತೀನ ಪ್ರಥಮ, ಜಹಾರ ಅಬು ಹುಸೈನ್ ದ್ವಿತೀಯ, ಇಸ್ರಾ ತೃತೀಯ, ಹರ್ಷದ್ ಗೊಂಡ ಪ್ರಥಮ, ಸುಶಾಂತ್ ದ್ವಿತೀಯ, ನಿತೀಶ್ ದೇವಾಡಿಗ ತೃತೀಯ, ಫಾತಿನ ಮುಸ್ಕಾನ್ ಪ್ರಥಮ, ಅಮಾನ್ ಸಾರಾ ದ್ವಿತೀಯ, ಆಯಿಷಾ ತಮನ್ನಾ, ಹೇಮಂತ್ ಪ್ರಕಾಶ ಪ್ರಥಮ, ನಾಗರಾಜ ಶಿರಾಲಿ, ಕಾರ್ತಿಕ ಗೊಂಡ ತೃತೀಯ ಸ್ಥಾನ ಪಡೆದುಕೊಂಡರು.

About The Author

error: Content is protected !!