December 23, 2025

ಜಿಲ್ಲಾ ಅರಣ್ಯವಾಸಿಗಳ ಕಾನೂನು ಜಾಗೃತ ಜಾಥ ಡಿ.3 ಕ್ಕೆ ಭಟ್ಕಳದಲ್ಲಿ ಚಾಲನೆ

  • ರವೀಂದ್ರ ನಾಯ್ಕ

ಭಟ್ಕಳ: ಅರಣ್ಯವಾಸಿಗಳ ಜಾಗೃತೆ ಮೂಡಿಸುವ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾದ ಅರಣ್ಯವಾಸಿಗಳ ಕಾನೂನು ಜಾಗೃತ ಜಾಥ ಡಿ.3, ಬುಧವಾರ, ಮುಂಜಾನೆ 11 ಗಂಟೆಗೆ ಭಟ್ಕಳದ ಉಪ ವಿಭಾಗ ಅಧಿಕಾರಿಗಳಿಗೆ ಮನವಿ ಮತ್ತು ಜಾಗೃತ ಕರಪತ್ರ ನೀಡುವ ಮೂಲಕ ಉದ್ಗಾಟನೆಗೊಳ್ಳಲಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಭಟ್ಕಳದಲ್ಲಿ ಉದ್ಗಾಟನೆಗೊಂಡ ಅರಣ್ಯವಾಸಿಗಳ ಕಾನೂನು ಜಾಗೃತ ಜಾಥÀವು ಅಂದು ಸಾಯಂಕಾಲ 3.30 ಗೆ ಹೊನ್ನಾವರ ತಾಲೂಕಿನಲ್ಲಿ ಶರಾವತಿ ಸರ್ಕಲ್‌ನಿಂದ ಜಾಥ ಪ್ರಾರಂಭವಾಗಲಿದ್ದು ತದನಂತರ, ಕುಮಟಾದಲ್ಲಿ ದಿ. 4 ರಂದು ಮು.10.30 ಕ್ಕೆ ಗಿಬ್ ಹೈಸ್ಕೂಲ್‌ನಿಂದ ಪ್ರಾರಂಭವಾಗಿ ಪ್ರಮುಖ ಬೀದಿಯಲ್ಲಿ ಸಂಚರಿಸಲಿದೆ. ಜಾಥದ ಮೂರನೇ ದಿನ ಅಂಕೋಲದಲ್ಲಿ ಸ್ವತಂತ್ರ ಭವನದಲ್ಲಿ ಉದ್ಗಾಟನೆಗೊಂಡು ನಗರದಲ್ಲಿ ಸಂಚರಿಸಲಿದೆ. ನಾಲ್ಕನೇ ದಿನ ಕಾರವಾರದಲ್ಲಿ ಭೂಮಿ ಹಕ್ಕು ಸಂವಿಧಾನಭದ್ದ ಹಕ್ಕು- “ ಅಂಬೇಡ್ಕರ ಪರಿವರ್ತನಾ ದಿನ”ವನ್ನು ಅರಣ್ಯವಾಸಿಗಳ ಸಮಾವೇಶಗೊಳ್ಳಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಾರವಾರದಲ್ಲಿ ಜರುಗುವ ಬೃಹತ್ ಸಮಾವೇಶದಲ್ಲಿ ಅರಣ್ಯವಾಸಿಗಳ ಆರು ಪ್ರಮುಖ ಸಮಸ್ಯೆಗಳ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

About The Author

error: Content is protected !!