August 29, 2025

ಎಸ್.ಎಸ್.ಎಲ್.ಸಿ ಪರೀಕ್ಷಾ ಫಲತಾಂಶ ಹೆಚ್ಚಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ ಕರೆ

ಭಟ್ಕಳ ; ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವೆಂಕಟೇಶ ನಾಯಕರವರು ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಮ್ಮ ಜಿಲ್ಲೆ ರಾಜ್ಯಕ್ಕೆ ೩ನೇ ಸ್ಥಾನ ಹಾಗೂ ನಮ್ಮ ತಾಲೂಕು ಜಿಲ್ಲೆಗೆಪ್ರಥಮ ಸ್ಥಾನ ಪಡೆದಿರುವುದಕ್ಕೆ ಹರ್ಷವ್ಯಕ್ತ ಪಡಿಸುತ್ತಾ, ಇದಕ್ಕೆ ಕಾರಣೀಕತೃರಾದ ಶಿಕ್ಷಕ ವೃಂದವನ್ನು ಅಭನಂದಿಸಿದರು. ಈ ವರ್ಷವೂ ಕೂಡ ಇನ್ನೂ ಹೆಚ್ಚಿನ ಸಾಧನೆ ಮಾಡುವಂತೆ ಪ್ರೇರೇಪಿಸಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಂಬAಧಿಸಿದ ೨೯ಅಂಶಗಳ ಕಾರ್ಯಕ್ರಮದ ಕುರಿತು ಚರ್ಚಸಿ ಅದರಂತೆ ಕಾರ್ಯನಿರ್ವಹಿಸುವಂತೆ ತಿಳಿಸಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಭಾಷಾ ವಿಷಯದಲ್ಲಿ ತೇರ್ಗಡೆ ಕಡಿಮೆ ಇರುವ ಕುರಿತು ಕಳವಳ ವ್ಯಕ್ತಪಡಿಸಿ ಈ ಕುರಿತು ಸಂಬAಧಿಸಿದ ಶಿಕ್ಷಕರು ಸೂಕ್ತ ಕ್ರಿಯಾಯೋಜನೆ ಹಾಕಿಕೊಂಡು ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು. ವಿಷಯವಾರು ಸಂಘಗಳ ಸಭೆನಡೆಸಿ ಹಾಕಿಕೊಳ್ಳಬಹುದಾದ ಕಾರ್ಯಯೋಜನೆ, ಹೆಚ್ಚುವರಿ ತರಗತಿ ನಿರ್ವಹಣೆ, ವಿವಿಧಹಂತಗಳ ವಿದ್ಯಾರ್ಥಿಗಳನಿರ್ವಹಣೆ, ವೈಯಕ್ತಿಕಗಮನ, ಹೆಚ್ಚುವರಿ ಅವಧಿ ಆಯೋಜನೆ ಕುರಿತಾಗಿ ಹಮ್ಮಿಕೊಳ್ಳಬಹುದಾದ ಯೋಜನೆಗಳ ಕುರಿತು ವಿವರಣೆ ನೀಡಿದರು.

ಭಟ್ಕಳ ತಾಲೂಕಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತಪ್ರೌಢಶಾಲೆಗಳ ತಾಲೂಕಾ ಹಂತದ ಮುಖ್ಯ ಶಿಕ್ಷಕರ ಸಭೆಯನ್ನು ಭಟ್ಕಳದ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಭಟ್ಕಳದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವೆಂಕಟೇಶನಾಯಕ, ಪಿ.ಎಂ ಪೋಷಣ್ ಶಕ್ತಿನಿರ್ಮಾಣಯೋಜನೆಯ ಸಹಾಯಕ ನಿರ್ದೇಶಕರಾದ ಶ್ರೀ ರಾಘವೇಂದ್ರ ನಾಯ್ಕ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀಮತಿ ಪೂರ್ಣಿಮಾ ಮೊಗೇರ, ಎಸ್.ಎಸ್.ಎಲ್.ಸಿನೋಡಲ್ ಅಧಿಕಾರಿಗಳಾದ ಶ್ರೀ ಅಶೋಕ ಆಚಾರಿ, ಪ್ರೌಢವಿಭಾಗದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ವನಿತಾ ಎಚ್, ಪ್ರಾಥಮಿಕ ವಿಭಾಗದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ನಾಗೇಶ ಎಸ್ ಮಡಿವಾಳ, ಶ್ರೀ ಬಿ.ಕೆನಾಯ್ಕ ಹಾಗೂ ಭಟ್ಕಳ ತಾಲೂಕಿನ ೩೭ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಹಾಜರಿದ್ದರು.

About The Author