December 23, 2025

ಭಸ್ಮ ಎರಚಿ ಸುಲಿಗೆ ಮಾಡುವ ಮಹಾರಾಷ್ಟ್ರದ ಖಾವಿಧಾರಿಗಳ ವಿಡಿಯೋ ವೈರಲ್

ಭಟ್ಕಳ: ಮಹಾರಾಷ್ಟ್ರ ನೋಂದಣಿಯ ಗೂಡ್ ಟೆಂಪೋ ಒಂದನ್ನು ಅಪ್ಪಟ ಬೆಳ್ಳಿಯ ರಥದಂತೆ ಮಾರ್ಪಡಿಸಿ, ಒಳಗೆ ದೇವಸ್ಥಾನದ ಗರ್ಭಗುಡಿಯಂತೆ ದೇವರ ವಿಗ್ರಹ ಗಳನ್ನು ಪ್ರತಿಷ್ಟಾಪಿಸಿ, ವಾಹನದ ಸುತ್ತ ಶಿರಡಿ ಸಾಯಿಬಾಬಾ ಪ್ಲೆಕ್ಸ್ ಗಳನ್ನು ಆಳವಡಿಸಿ ಹಣ ಸಂಗ್ರಹಣೆಯಲ್ಲಿ ತೊಡಗಿದ ಮೂವರು ಖಾವಿಧಾರಿಗಳು ಭಸ್ಮ ಎರಚಿ ಸಾರ್ವಜನಿಕರನ್ನು ಸುಲಿಗೆ ಮಾಡಿದ ಆರೋಪ ಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದ್ದು, ಕೆಲವು ಬಾಗದಲ್ಲಿ ರಥದಂತೆ ಮಾರ್ಪಡಿಸಿದ ವಾಹನ ದಲ್ಲಿ ಆಡಿಯಿಂದ ಮುಡಿಯವರೆಗೂ ಕೇಸರಿಯನ್ನು ತೊಟ್ಟು ಸ್ವಾಮೀಜಿಯ ರಂತೆ ಪೋಸು ಕೊಡುತ್ತಿದ್ದ ಮೂವರು ಹಿಂದಿ ಭಾಷಿಗರು ಅದ್ಯಾವುದೋ ಭಸ್ಮವನ್ನು ಕೆಲವು ಸಾರ್ವಜನಿಕರ ಮೇಲೆ ಎರಚಿ ಅವರನ್ನು ಕ್ಷಣಕಾಲ ಮಂಕಾಗುವAತೆ ಮಾಡಿ ಸುಲಿಗೆ ಮಾಡಿದ್ದಾರೆಂದು ಆರೋಪಿಸುವ ವಿಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ ಮೂವರು ಆಗಂತುಕ ಖಾವಿಧಾರಿಗಳ ನ್ನು ಸಾರ್ವಜನಿಕರು ರಥ ಸಹಿತ ಅಡ್ಡ ಹಾಕಿ ವಿಚಾರಿಸುತ್ತಿರುವ ದೃಶ್ಯವೂ ವಿಡಿಯೋದಲ್ಲಿ ದಾಖಲಾಗಿದೆ.

ರಥ ಸಹಿತ ಬರುವ ಈ ಭಸ್ಮ ಪ್ರಯೋಗಿ ಖಾವಿಧಾರಿಗಳಿಂದ ಜಾಗೃತರಾಗಿರುವಂತೆ ಹೇಳಲಾಗಿದೆ. ಅಲ್ಲದೆ ಇವರ ಬಗ್ಗೆ ತಿಳಿದು ಬಂದಲ್ಲಿ ಅಥವಾ ಇವರು ಗೋಚರಿಸಿದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

ಕೆಲವು ತಿಂಗಳುಗಳ ಹಿಂದೆ ಪಕ್ಕದ ಜಿಲ್ಲೆಯ ಬೈಂದೂರಿನ ಉಪ್ಪುಂದ ಬಾಗದಲ್ಲಿ ಕಾರಿನಲ್ಲಿ ಆಗಮಿಸಿದ ಇಬ್ಬರು ಖಾವಿಧಾರಿಗಳು ಹೆದ್ದಾರಿ ಪಕ್ಕದಲ್ಲಿರುವ ಅಂಗಡಿಯ ಮಾಲೀಕನನ್ನು ಇದೇ ರೀತಿ ಭಸ್ಮ ಎರಚಿ ಕೈಯುಂಗುರ ಸಹಿತ ಹಣವನ್ನು ದೋಚಿದ ಘಟನೆ ಹಸಿರಿರುವಾಗಲೇ ಇದೀಗ ರಥಧಾರಿ ಖಾವಿಗಳ ಭಸ್ಮ ಸುಲಿಗೆ ಮತ್ತೆ ಸುದ್ದಿಯಾಗುತ್ತಿದೆ.

About The Author

error: Content is protected !!