December 23, 2025

ಭಟ್ಕಳ ನ್ಯಾಯಾಂಗ ಅಧಿಕಾರಿಗಳ ವಸತಿ ಸಂಕೀರ್ಣ ನಿರ್ಮಾಣಕ್ಕೆ ಅಡಿಗಲ್ಲು

ಭಟ್ಕಳ: ನ್ಯಾಯಾಂಗ ಅಧಿಕಾರಿಗಳ ವಸತಿ ಸಂಕೀರ್ಣ ನಿರ್ಮಾಣಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ನ್ಯಾಯಾಧೀಶರಾದ ಎಸ್.ಜಿ. ಪಂಡಿತ್ ಹಾಗು ನ್ಯಾಯಾಧೀಶ ಪ್ರದೀಪ್ ಸಿಂಗ್ ಯೆರೂರ್ ಅವರಿಂದ ಅಡಿಗಲ್ಲು ಸಮಾರಂಭ ನೆರವೇರಿತು.

ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಪ್ರಭಾರ ನ್ಯಾಯಾಧೀಶ ಮಾಯಣ್ಣ, ಭಟ್ಕಳ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಕಾಂತ ಕುರಣಿ, ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ದೀಪಾ ಅರಳಗುಂಡಿ, ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ನ್ಯಾ. ಧನವತಿ, ಭಟ್ಕಳ ವಕೀಲರ ಸಂಘದ ಅಧ್ಯಕ್ಷ ಈಶ್ವರ ನಾಯ್ಕ, ಸಂಘದ ಸದಸ್ಯರಾದ ಎಂ.ಎಲ್. ನಾಯ್ಕ, ಕೆ.ಎಚ್. ನಾಯ್ಕ, ಎಸ್.ಬಿ.ಬೊಮ್ಮಾಯಿ, ವಿಕ್ಟರ್ ಗೋಮ್ಸ್,ಶಂಕರ ನಾಯ್ಕ, ನಾಗರಾಜ ಈ.ಎಚ್. ವಿ.ಆರ್. ಶರಾಫ್,ಜೆ.ಡಿ. ಭಟ್, ಎಂ.ಜೆ. ನಾಯ್ಕ,ರಾಜೇಶ ನಾಯ್ಕ, ಆರ್.ಜಿ. ನಾಯ್ಕ,ಮಹೇಶ ನಾಯ್ಕ, ನಾಗರಾಜನಾಯ್ಕ ಮೊದಲಾದವರು ಉಪಸ್ಥಿತರಿದ್ದರು

About The Author

error: Content is protected !!