ಪರ್ತಗಾಳಿ: ಇಲ್ಲಿನ ಶ್ರೀ ಗೋಕರ್ಣ ಪರ್ತಗಾಳಿ ಮಠದಲ್ಲಿ ನಡೆಯುತ್ತಿರುವ ಸಾರ್ಧಪಂಚಶತಮಾನೋತ್ಸವ ಕಾರ್ಯಕ್ರಮಕ್ಕೆ ಬಿಹಾರ ಮೂಲದ ಪ್ರಸಿದ್ಧ ಭಜನ ಗಾಯಕಿ ದೇಶದ ಅತಿ ಕಿರಿಯ ಶಾಸಕಿ ಎಂದೆ ಪ್ರಖ್ಯಾತರಾದ ಮೈಥಿಲಿ ಠಾಕೂರ್ ತಮ್ಮ ಭಜನೆಗಳಿಂದ ಕಂಗೊಳಿಸಿದರು.

ಕಾಣಕೋಣದ ಪರ್ತಗಾಳಿಯಲ್ಲಿ ನಡೆಯುತ್ತಿರುವ ಸಾರ್ಥ ಪಂಚಶತಮಾನೋತ್ಸವ ಕಾರ್ಯಕ್ರಮದಲ್ಲಿ ತಮ್ಮ ಆತ್ಮಸ್ಪರ್ಶಿ ಭಜನೆಗಳಿಂದ ಇಲ್ಲಿನ ಸಂಭ್ರಮ ಇಮ್ಮಡಿಗೊಳಿಸಿದರು. ನಾಯಕತ್ವ ಮತ್ತು ಭಕ್ತಿಯ ಸೊಗಡನ್ನು ಒಟ್ಟುಗೂಡಿಸುವ ಈ ವಿಶೇಷ ಸಂಭ್ರಮದಲ್ಲಿ ಮೈಥಿಲಿಯ ಆಗಮನ ಸ್ಥಳೀಯ ಭಕ್ತರಲ್ಲಿಯೂ ಆರಾಧಕರಲ್ಲಿಯೂ ಅಪಾರ ಉತ್ಸಾಹವನ್ನು ಮೂಡಿಸಿ, ಭಕ್ತಿಯ ಸಿಂಚನದ ಮದವೇರಿ ಹುಚ್ಚೆದ್ದು ಕುಣಿಯುವಂತೆ ಮಾಡಿತು.
ಭಾರತದ ವಿವಿಧ ಭಾಷೆಗಳ ಭಜನೆಗಳನ್ನು ಮನಮೋಹಕವಾಗಿ ಹಾಡುವ ಮೂಲಕ ವಿಸ್ತಾರವಾದ ಅಭಿಮಾನಿಗಳನ್ನು ಗಳಿಸಿರುವ ಮೈಥಿಲಿ, ಈ ಮಹೋತ್ಸವಕ್ಕೆ ವಿಶೇಷ ವೈಭವವನ್ನೇ ಮೂಡಿಸಿ, ದಕ್ಷಿಣ ಭಾರತದಲ್ಲೂ ಮತ್ತಷ್ಟು ಅನುಯಾಯಿಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಇವರ ಸಂಪೂರ್ಣ ಕಾರ್ಯಕ್ರಮವನ್ನು ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮಿಜಿ ವೀಕ್ಷಿಸಿರುವದು ಕಾರ್ಯಕ್ರಮದ ಮೆರಗು ಮತ್ತಷ್ಟು ಹೆಚ್ಚಿಸುವಂತೆ ಮಾಡಿತು. ತುಂಬಿದ ಸಭೆಯಲ್ಲಿ ಅವರ ಒಂದೊAದು ಭಜನೆಗಳು ಸಭಿಕರನ್ನು ಮಂತ್ರಮುಗ್ದಗೊಳಸಿ, ಅವರ ಹಾಡಿನಲ್ಲಿ ತಲ್ಲಿನರಾಗುವಂತೆ ಮಾಡಿತು.

More Stories
ಜಯ ಕರ್ನಾಟಕ ಸಂಘಟನೆಯಿಂದ ಕೆ.ಆರ್. ಪೇಟೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ,
ಕೇರಳ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಪರ್ತಗಾಳಿ ಮಠಕ್ಕೆ ಭೇಟಿ
ಪ್ರಧಾನಿ ಮೋದಿ ಭೇಟಿ, ಭವ್ಯ ಮೂರ್ತಿ ಪ್ರತಿಷ್ಠೆ ರಾಮ ಶಕ್ತಿಯೇ ಕಾರಣ: ವಡೇರ್ ಸ್ವಾಮೀಜಿ