ಪರ್ತಗಾಳಿ: ಕೇರಳ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ತಮ್ಮ ಪತ್ನಿಯೊಂದಿಗೆ ಗೋವಾ ರಾಜ್ಯದ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಪರ್ತಗಾಳಿ ಮಠಕ್ಕೆ ವಿಶೇಷ ಭೇಟಿಯನ್ನು ನೀಡಿ, ದೇವರ ಹಾಗೂ ಶ್ರೀಗಳ ದರ್ಶನ ಪಡೆದರು.
ಮಠ ಪ್ರವೇಶದ ವೇಳೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ದಂಪತಿಗಳಿಗೆ ಮಠದ ವ್ಯವಸ್ಥಾಪನ ಸಮಿತಿಯ ಸದಸ್ಯರು ಸ್ವಾಗತ ಕೋರಿದರು. ಮಠದ ಇತಿಹಾಸ, ಪರಂಪರೆ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳ ಬಗ್ಗೆ ಮಠದ ಅಧ್ಯಕ್ಷ ಶ್ರಿನಿವಾಸ ಡೆಂಪೊ ಗವರ್ನರ್ ದಂಪತಿಗಳಿಗೆ ಸಂಪೂರ್ಣ ಮಾಹಿತಿ ನೀಡಿದರು. ಸಾರ್ಧ ಪಂಚಶತಮಾನೋತ್ಸವದ ಅಂಗವಾಗಿ ನಡೆಯುತ್ತಿರುವ ಬೃಹತ್ ಕಾರ್ಯಕ್ರಮವನ್ನು ನೋಡಿ ಅಚ್ಚರಿಗೊಂಡ ರಾಜ್ಯಪಾಲರು ಮಠದ ಪರಿಸರ, ಆಡಳಿತ ವ್ಯವಸ್ಥೆ ಹಾಗೂ ಜಾರಿಯಲ್ಲಿರುವ ಶಿಕ್ಷಣ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಭೇಟಿಯ ಸಂದರ್ಭದಲ್ಲಿ ಗವರ್ನರ್ ಅವರು ಸಮಾಜದ ಶಾಂತಿ, ಸೌಹಾರ್ದತೆ ಮತ್ತು ರಾಷ್ಟ್ರದ ಅಭಿವೃದ್ಧಿಗಾಗಿ ಪ್ರಾರ್ಥಿಸಿದರು. ಪರ್ತಗಾಳಿ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮಿಜಿ ಗವರ್ನರ್ ರಾಜೇಂದ್ರ ಅರ್ಲೇಕರ್ ದಂಪತಿಗಳಿಗೆ ಸ್ಮರಣಿಕೆ ನೀಡಿ, ಅನುಗ್ರಹ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಈ ಸಂದರ್ಬದಲ್ಲಿ ಐಡಿಯಲ್ ಐಸ್‌ಕ್ರೀಮ್‌ನ ಮುಕುಂದ ಕಾಮತ, ಜಗದೀಶ ಪೈ, ಪಲ್ಲವಿ ಡೆಂಪೊ ಇತರರು ಇದ್ದರು. ಬಳಿಕ ಅತಿ ಎತ್ತರದ ಶ್ರೀರಾಮನ ಪ್ರತಿಮೆಗೆ ವಂದಿಸಿ ಅಲ್ಲಿ ಪೋಟೊ ಕ್ಲಿಕ್ಕಿಸಿಕೊಂಡರು.

More Stories
ಜಯ ಕರ್ನಾಟಕ ಸಂಘಟನೆಯಿಂದ ಕೆ.ಆರ್. ಪೇಟೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ,
ಬಿಹಾರದಿಂದ ಪರ್ತಗಾಳಿಗೆ, ನಾಯಕತ್ವದಿಂದ ಭಕ್ತಿಗೆ, ಸಾರ್ಧ ಪಂಚಶತಮಾನೋತ್ಸವಕ್ಕೆ ಮೈಥಿಲಿ ಠಾಕೂರ್
ಪ್ರಧಾನಿ ಮೋದಿ ಭೇಟಿ, ಭವ್ಯ ಮೂರ್ತಿ ಪ್ರತಿಷ್ಠೆ ರಾಮ ಶಕ್ತಿಯೇ ಕಾರಣ: ವಡೇರ್ ಸ್ವಾಮೀಜಿ