August 30, 2025

ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಮೂರನೇ ಸ್ಥಾನ.

ಹೊನ್ನಾವರ ; ದಿನಾಂಕ 3-8-2025 ರಂದು ಶಿವಮೊಗ್ಗದ ಒಳಾಂಗಣ ನೆಹರು ಸ್ಟೇಡಿಯಂ ದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಹೊನ್ನಾವರ ತಾಲೂಕಿನ ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯ ವಿದ್ಯಾರ್ಥಿ ಕುಮಾರ ರಾಹುಲ ಎಂ. ಗೌಡ ಇವನು ಮೂರನೇ ಸ್ಥಾನ ಪಡೆಯುವುದರ ಮೂಲಕ ನಾಡಿಗೆ, ಜಿಲ್ಲೆಗೆ ಮತ್ತು ತಾಲೂಕಿನ ಶಾಲೆಗೆ ಕೀರ್ತಿ ತಂದಿರುತ್ತಾನೆ. ಈತನ ಸಾಧನೆಯನ್ನು ಕಾರವಾರ ಶೈಕ್ಷಣಿಕ ಜಿಲ್ಲೆಯ ಅಪನಿರ್ದೇಶಕರಾದ ಶ್ರೀಮತಿ ಲತಾ ನಾಯಕ, ಡಯಟ್ ಪ್ರಾಚಾರ್ಯರಾದ ಶ್ರೀ ಜಿ. ಎಸ್. ಭಟ್ಟ,ಹೊನ್ನಾವರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವಿನಾಯಕ ಅವಧಾನಿ, ಸಂಸ್ಥೆಯ ಅಧ್ಯಕ್ಷರಾದ ಶ್ರೀ ಗಜಾನನ ಹೆಗಡೆ, ಮುಖ್ಯಾಧ್ಯಾಪಕರಾದ ಶ್ರೀ ಎಲ್. ಎಂ. ಹೆಗಡೆ, ಅಧ್ಯಾಪಕ ವೃಂದ,ಊರಿನ ನಾಗರಿಕರು ಅಭಿನಂದನೆಗಳನ್ನು ಸಲ್ಲಿಸಿ, ಮುಂದೆಯೂ ಒಲಂಪಿಕನAತಹ ಸ್ಪರ್ಧೆಗಳಲ್ಲಿ ಉತ್ತರೋತ್ತರ ಶ್ರೇಯಸ್ಸನ್ನು ಪಡೆಯುವಂತಾಗಲಿ ಎಂದು ಹಾರೈಸಿರುತ್ತಾರೆ.

About The Author