December 23, 2025

ಜಯ ಕರ್ನಾಟಕ ಸಂಘಟನೆಯಿಂದ ಕೆ.ಆರ್. ಪೇಟೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ,

ಗಣ್ಯರು ಚಲನಚಿತ್ರ ನಟ-ನಟಿ, ಹಾಸ್ಯ ಕಲಾವಿದರ ಸಮಾಗಮ, ಅದ್ದೂರಿ ಕಾರ್ಯಕ್ರಮ ಯಶಸ್ವಿಗೆ ತಾಲೂಕು ಅಧ್ಯಕ್ಷ ಸೋಮಶೇಖರ್ ಮನವಿ.

ಕೃಷ್ಣರಾಜಪೇಟೆ ತಾಲ್ಲೂಕು ಜಯ ಕರ್ನಾಟಕ ಸಂಘಟನೆ ವತಿಯಿಂದ ಅದ್ದೂರಿ 70ನೇ ಕನ್ನಡ ರಾಜ್ಯೋತ್ಸವ ಹಲವು ಸಂಸ್ಕೃತಿಕ ಮನರಂಜನೆ ಕಾರ್ಯಕ್ರಮ ಹಾಗೂ ವೀರಯೋಧರಿಗೆ, ಸಾಧಕರಿಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರದೊಂದಿಗೆ ಕಾರ್ಯಕ್ರಮಕ್ಕೆ ಗಣ್ಯರು ಚಲನಚಿತ್ರ ನಟ ನಟಿಯರು ಆಗಮಿಸಲಿದ್ದಾರೆ ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಹೊನ್ನೇನಹಳ್ಳಿ ಸೋಮಶೇಖರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅದ್ದೂರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಸರ್ವೋಚ್ಚ ನಾಯಕರಾದ ದಿವಂಗತ ಎಂ.ಮುತ್ತಪ್ಪ ರೈ ರವರ ದಿವ್ಯ ಆಶೀರ್ವಾದದೊಂದಿಗೆ ರಾಜ್ಯಾಧ್ಯಕ್ಷ ಡಾ:ಬಿ.ಎನ್. ಜಗಧೀಶ್ ಹಾಗೂ ಜಿಲ್ಲಾಧ್ಯಕ್ಷ ಡಾ.ಯೋಗಣ್ಣ ಅವರ ಮಾರ್ಗದರ್ಶನದಲ್ಲಿ ಡಿಸೆಂಬರ 14ರ ಭಾನುವಾರ ಸಂಜೆ 06ಗಂಟೆಗೆ ಕೆ.ಆರ್.ಪೇಟೆ ಪಟ್ಟಣದಲ್ಲಿರುವ ಪುರಸಭಾ ಮೈದಾನದಲ್ಲಿ ನಮ್ಮ ಜಯ ಕರ್ನಾಟಕ ಸಂಘಟನೆ ವತಿಯಿಂದ 70ನೇ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ತಾಲೂಕಿನಲ್ಲಿ ಜನಿಸಿ ದೇಶ ಸೇವೆ ಸಲ್ಲಿಸುತ್ತಿರುವ ಯೋಧರಿಗೆ, ವಿರುದ್ಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ,2024-25ನೇ ಸಾಲಿನ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರತಿಭಾ ಏರ್ಪಡಿಸಿದ್ದು ಈ ಸುಂದರ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಚಿವ ಕೆ.ಸಿ ನಾರಾಯಣಗೌಡರು ವಹಿಸಲಿದ್ದಾರೆ, ಅಧ್ಯಕ್ಷತೆಯನ್ನು ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಡಾ:ಬಿ.ಎನ್ ಜಗದೀಶ್, ಧ್ವಜಾರೋಹಣ ಶಾಸಕ ಎಚ್.ಟಿ ಮಂಜು, ಶ್ರೀ ಭುವನೇಶ್ವರಿ ಭಾವಚಿತ್ರ ಅನಾವರಣ ಮಾಜಿ ಶಾಸಕ ಕೆ. ಬಿ ಚಂದ್ರಶೇಖರ್, ಪುಸ್ವಾರ್ಚನೆಯನ್ನು ಜಿಲ್ಲಾಧ್ಯಕ್ಷ ಯೋಗಣ್ಣ, ಸಲ್ಲಿಸಿದರೆ ಮುಖ್ಯ ಅತಿಥಿಗಳಾಗಿ ಡಾಲು ರವಿ, ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್,ಕೈ ಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್, ಮಾಜಿ ಶಾಸಕರಾದ ಬಿ.ಪ್ರಕಾಶ್, ಕಾಂಗ್ರೆಸ್ ಮುಖಂಡ ವಿಜಯರಾಮೇಗೌಡ, ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ ಹರೀಶ್, ಎಂ.ಡಿ.ಸಿ.ಸಿ ನಿರ್ದೇಶಕ ಅಂಬರೀಶ್, ಕೆ ಯುಐಡಿಎಫ್ ಸಿ ನಿಗಮದ ಮಾಜಿ ಅಧ್ಯಕ್ಷ ಎಂ.ಡಿ. ಕೃಷ್ಣಮೂರ್ತಿ, ಕೆಪಿಸಿಸಿ ಸದಸ್ಯರಾದ ಕಿಕ್ಕೇರಿ ಸುರೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಜಾನಕಿರಾಮ್ ಟಿಎಪಿಸಿಎಂಎಸ್ ನಿರ್ದೇಶಕ ಬಿ.ಎಂ ಕಿರಣ್,ಕಿಕ್ಕೇರಿ ಪ್ರಭಾಕರ್, ರಾಜಾಹುಲಿ ದಿನೇಶ್ ಸೇರಿದಂತೆ ಜಿಲ್ಲಾ- ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ವಿಶೇಷವಾದ ಮೆರುಗು ತುಂಬಲು ರಾತ್ರಿ 7:00 ಯಿಂದ ತುಮಕೂರು ಹೆಸರಾಂತ ದೇವು ಅರ್ಪಿಸುವ ದರ್ಶನ್ ಮೆಲೋಡಿಸ್ ಆರ್ಕೆಸ್ಟ್ರಾ ಏರ್ಪಡಿಸಲಿದ್ದು ಸುಂದರ ರಸಮಂಜರಿ ಕಾರ್ಯಕ್ರಮಕ್ಕೆ ಚಲನಚಿತ್ರ ಕನ್ನಡದ ಹೆಸರಾಂತ ನಾಯಕ ನಟರಾದ ಶ್ರೀಮುರಳಿ, ವಸಿಷ್ಠಸಿಂಹ, ಹಾಸ್ಯ ಕಲಾವಿದರಾದ ಟೆನ್ನಿಸ್ ಕೃಷ್ಣ, ಚಂದ್ರಪ್ರಭ, ಶೀಳನೆರೆ ಕೇಶವ, ರಾಜ್ಯ ವಿಷ್ಣು ಸೇನೆಯ ಪ್ರಶಾಂತ್ ಚಕ್ರವರ್ತಿ, ಬಿಗ್ ಬಾಸ್ ಖ್ಯಾತಿಯ ತ್ರಿವಿಕ್ರಮ್, ಸೇರಿದಂತೆ ಅನೇಕ ನಟ ನಟಿಯರು ಹಾಸ್ಯ ಕಲಾವಿದರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದು, ಪ್ರತಿಯೊಬ್ಬ ಕನ್ನಡ ಅಭಿಮಾನಿಗಳು ತಾಲೂಕಿನ ಜನತೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಜಯ ಕರ್ನಾಟಕ ಸಂಘಟನೆಯ ಕೆ.ಆರ್.ಪೇಟೆ ತಾಲೂಕು ಅಧ್ಯಕ್ಷ ಸೋಮಶೇಖರ್ ತಿಳಿಸಿದರು.

ಬಳಿಕ ಮಾತನಾಡಿದ ತಾಲೂಕು ಯುವ ಘಟಕದ ಅಧ್ಯಕ್ಷ ಕೆ.ಎಲ್.ಮಹೇಶ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಜಯಲಕ್ಷ್ಮಮ್ಮ ಕಾರ್ಯಕ್ರಮಕ್ಕೆ ಪ್ರತಿಯೊಬ್ಬ ಕನ್ನಡ ಅಭಿಮಾನಿಗಳನ್ನು ಸ್ವಾಗತಿಸಿ ಕಾರ್ಯಕ್ರಮದ ಯಶಸ್ವಿಗೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಕಾಮನಹಳ್ಳಿ ಮಹೇಶ್, ಕಾರ್ಯಧ್ಯಕ್ಷ ಅನುವಿನಕಟ್ಟೆ ಆನಂದ್, ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಜಯಲಕ್ಷ್ಮಮ್ಮ, ತಾಲ್ಲೂಕು ಕಾರ್ಯಧ್ಯಕ್ಷೆ ಸರಸ್ವತಿ, ನಗರ ಮಹಿಳಾ ಅಧ್ಯಕ್ಷೆ ಅನುಪಮ, ತಾಲ್ಲೂಕು ಉಪಾಧ್ಯಕ್ಷರಾದ ಮನು, ಅಗ್ರಹಾರ ಯೋಗೇಶ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪ್ರಭುನಾಯಕ, ಸಂಘಟನೆಯ ಕಾರ್ಯದರ್ಶಿ ಭಾವಾಜಿ ಚಂದ್ರು, ಕೆ.ಆರ್.ಪೇಟೆ ಟೌನ್ ಅಧ್ಯಕ್ಷ ಅಕ್ಷಯ್,ಕಿಕ್ಕೇರಿ ಹೋಬಳಿ ಅಧ್ಯಕ್ಷ ಸತೀಶ್, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ, ಸಂತೆಬಾಚಹಳ್ಳಿ ಅಧ್ಯಕ್ಷ ಅರುಣ್ ಕುಮಾರ್, ಅಶೋಕ್, ಅಜಿತ್, ಯಶವಂತ್, ರವಿ, ರಾಕೇಶ್, ಸೇರಿದಂತೆ ಉಪಸ್ಥಿತರಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author

error: Content is protected !!