December 23, 2025

ಎಸ್‌ಸಿ–ಎಸ್‌ಟಿ ಮೀಸಲಾತಿ ಹೋರಾಟಕ್ಕೆ ಕಿರಣ್ ನಾರಾಯಣ ಶಿರೂರು ಅವರಿಗೆ ರಾಷ್ಟ್ರಮಟ್ಟದ ಗೌರವ

ಕಿರಣ್ ನಾರಾಯಣ ಶಿರೂರು ಅವರಿಗೆ ರಾಷ್ಟ್ರಮಟ್ಟದ ಡಾ. ಅಂಬೇಡ್ಕರ್ ವಿಶಿಷ್ಟ ಸೇವಾ ಪ್ರಶಸ್ತಿ

ಭಟ್ಕಳ:ಕರ್ನಾಟಕ ರಾಜ್ಯ ಎಸ್‌ಸಿ & ಎಸ್‌ಟಿ ಮೀಸಲಾತಿ ರಕ್ಷಣಾ ವೇದಿಕೆಯ ಅಧ್ಯಕ್ಷ ಕಿರಣ್ ನಾರಾಯಣ ಶಿರೂರು ಅವರಿಗೆ ಡಾ. ಅಂಬೇಡ್ಕರ್ ವಿಶಿಷ್ಟ ಸೇವಾ ರಾಷ್ಟ್ರೀಯ ಪ್ರಶಸ್ತಿ – 2025 ಲಭಿಸಿದೆ.
ದೆಹಲಿಯ ಪಂಚಶೀಲ ಜಾದವ್‌ಗಾಂವ್‌ನಲ್ಲಿ ಆಯೋಜಿಸಿದ್ದ 41ನೇ ರಾಷ್ಟ್ರೀಯ ದಲಿತ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಜಾತೀಯತೆ, ವರ್ಣವ್ಯವಸ್ಥೆ, ಅಸಮಾನತೆ ಹಾಗೂ ಸಾಮಾಜಿಕ ಅನ್ಯಾಯಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತಾ, ಎಸ್‌ಸಿ–ಎಸ್‌ಟಿ ಸಮುದಾಯಗಳ ಮೀಸಲಾತಿ ಹಕ್ಕುಗಳ ರಕ್ಷಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕಿರಣ್ ನಾರಾಯಣ ಶಿರೂರು ಅವರ ಸೇವೆಯನ್ನು ಗುರುತಿಸಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಈ ರಾಷ್ಟ್ರಮಟ್ಟದ ಗೌರವ ನೀಡಿದೆ.
ದಲಿತ, ಶೋಷಿತ, ಹಿಂದುಳಿದ ಹಾಗೂ ನಿರ್ಲಕ್ಷಿತ ಸಮುದಾಯಗಳ ಹಕ್ಕುಗಳ ರಕ್ಷಣೆ ಮತ್ತು ಸಬಲೀಕರಣಕ್ಕಾಗಿ ಅವರು ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಅನನ್ಯ ಸೇವೆಗೆ ಈ ಪ್ರಶಸ್ತಿ ಲಭಿಸಿದೆ.
ಈ ಸಂದರ್ಭದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಜಿ ಕೇಂದ್ರ ಸಚಿವ ಡಾ. ಸತ್ಯನಾರಾಯಣ ಜಟಿಯಾ ಹಾಗೂ ದಲಿತ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಅಧ್ಯಕ್ಷ ಡಾ. ಸುಮನಾಕ್ಷರ ಅವರು ಕಿರಣ್ ನಾರಾಯಣ ಶಿರೂರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

About The Author

error: Content is protected !!