ಭಟ್ಕಳ :ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಮೈ ಭಾರತ್ ಕೇಂದ್ರ ಉತ್ತರ ಕನ್ನಡ ಮತ್ತು ಭಟ್ಕಳ ಎಜ್ಯುಕೇಶನ್ ಟ್ರಸ್ಟ್ (ರಿ) ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ ಪಿಯು ಕಾಲೇಜು, ಭಟ್ಕಳ ಇವರ ಆಶ್ರಯದಲ್ಲಿ ನಡೆದ ಭಟ್ಕಳ ತಾಲೂಕಾ ಮಟ್ಟದ ಮೈ ಭಾರತ ಕ್ರೀಡಾಕೂಟದಲ್ಲಿ ದಿ ನ್ಯೂ ಇಂಗ್ಲೀಷ ಪಿಯು ಕಾಲೇಜಿನ ಉತ್ತಮ ಸಾಧನೆ ಮಾಡಿದ್ದು, ಯುವತಿಯರಿಗಾಗಿ ನಡೆದ ಸ್ಪರ್ಧೆಯಲ್ಲಿ 200 ಮೀ ಓಟದಲ್ಲಿ ಧನ್ಯಾ ಗೊಂಡ ಪ್ರಥಮ, ದೀಪಶ್ರೀ ನಾಯ್ಕ ದ್ವ್ವಿತೀಯ, ಮೇಘನಾ ನಾಯ್ಕ ತ್ರತೀಯ, ಗುಂಪು ವಿಭಾಗದಲ್ಲಿ ಹರ್ಷಿತಾ ಗುರು ನಾಯ್ಕ, ಪೂಜಾ ಖಾರ್ವಿ, ಚಂದ್ರಕಲಾ ನಾಯ್ಕ, ರಕ್ಷಾ ಮೊಗೇರ, ಮೇಘನಾ ನಾಯ್ಕ, ಸಂಜನಾ ಖಾರ್ವಿ, ವರ್ಷಾ ಖಾರ್ವಿ, ಭೂಮಿಕಾ ನಾಯ್ಕ, ಧನ್ಯಾ ಗೊಂಡ, ದೀಪಶ್ರೀ ನಾಯ್ಕ, ಜೀವಿತಾ ನಾಯ್ಕ ಇವರನ್ನೊಳಗೊಂಡ ಖೋ ಖೋ ಪ್ರಥಮ, ಯುವಕರ ವಿಭಾಗದಲ್ಲಿ 400 ಮೀ ಓಟದಲ್ಲಿ ಅಕ್ಷಯ ಕೆಲ್ಸಿ ದ್ವ್ವಿತೀಯ, ಜಯಂತ ವiರಾಠಿ ತ್ರತೀಯ ಹಾಗೂ ನಾಗರಾಜ ಮರಾಠಿ, ಅಕ್ಷಯ ಕೆಲ್ಸಿ, ಪರಮೇಶ್ವರ ಗೊಂಡ, ಮೌನೇಶ ಗೊಂಡ, ಜಯಂತ ಮರಾಠಿ, ಕಾರ್ತಿಕ ಮೊಗೇರ, ಸುಮಿತ ಮೊಗೇರ, ಧನುಷ ನಾಯ್ಕ, ಕೌಶಿಕ ಮೊಗೇರ, ಶ್ರೇಯಸ ನಾಯ್ಕ, ಹರೀಶ ಮರಾಠಿ ಇವರನ್ನೊಳಗೊಂಡ ವಾಲಿಬಾಲ ತಂಡ ದ್ವ್ವಿತೀಯ ಬಹುಮಾನ ಪಡೆದುಕೊಂಡಿರುತ್ತಾರೆ. ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿದ ಎಲ್ಲಾ ವಿದ್ಯಾರ್ಥಿಗಳಿಗೆ ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಅಧ್ಯಕ್ಷರಾದ ಡಾ. ಸುರೇಶ ವಿ. ನಾಯಕ, ಮ್ಯಾನೇಜಿಂಗ್ ಟ್ರಸ್ಟಿಯವರಾದ ಶ್ರೀ ಆರ್, ಜಿ, ಕೊಲ್ಲೆ, ಟ್ರಸ್ಟಿ ಮ್ಯಾನೇಜರ್À ಶ್ರೀ ರಾಜೇಶ ನಾಯಕ, ಪ್ರಾಂಶುಪಾಲರಾದ ಡಾ. ವಿರೇಂದ್ರ ವಿ. ಶಾನಬಾಗ, ದೈಹಿಕ ಶಿಕ್ಷಣ ನಿರ್ದೇಶಕ ಕೃಷ್ಣಪ್ಪ ನಾಯ್ಕ ಹಾಗೂ ಬೋಧಕ- ಬೋಧಕೇತರ ಸಿಬ್ಬಂಧಿಗಳು ಅಭಿನಂದಿಸಿರುತ್ತಾರೆ.

More Stories
ಶ್ರೀವಲಿ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
ಶಿರಾಲಿಯಲ್ಲಿ ಶಿಕ್ಷಕರ ಸಬಲೀಕರಣ ಉಪನ್ಯಾಸ
ಹಿಂದು ರುದ್ರಭೂಮಿ ಸ್ವಚ್ಛಗೊಳಿಸಿದ ಕ್ರಿಯೇಟಿವ್ ಬಾಯ್ಸ್ ಯುವಕರು