December 23, 2025

ಎಸ್.ಡಿ.ಎಂ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ

ಹೊನ್ನಾವರ : ಪಟ್ಟಣದ ಎಸ್.ಡಿ.ಎಂ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶಿರಸಿಯ ಎಂ.ಇ.ಎಸ್ ಪದವಿ ಮಹಾವಿದ್ಯಾಲಯದಲ್ಲಿ ಡಿ. 12 ಹಾಗೂ 13 ರಂದು ನಡೆದ ಕರ್ನಾಟಕ ವಿಶ್ವ ವಿದ್ಯಾಲಯ ಉತ್ತರ ಕನ್ನಡ ವಲಯ ಮಟ್ಟದ ಯುವಜನೋತ್ಸವದಲ್ಲಿ ದ್ವಿತೀಯ ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಭಾಗ್ಯಲಕ್ಷ್ಮೀ ಭಟ್ಟ ಶಾಸ್ತ್ರೀಯ ಗಾಯನ, ಲಘು ಸಂಗೀತ ಪ್ರಥಮ, ಪ್ರಜ್ವಲ್ ಫರ್ನಾಂಡೀಸ್ ಪಾಶ್ಚಾತ್ಯ ಗಾಯನ ವೈಯಕ್ತಿಕ ಪ್ರಥಮ, ನಾಗಶ್ರೀ ಭಟ್ಟ ಸಿದ್ಧ ಭಾಷಣದಲ್ಲಿ ಪ್ರಥಮ, ಪಾಶ್ಚಾತ್ಯ ಸಂಗೀತ ಸಮೂಹ ಗಾಯನದಲ್ಲಿ ಪ್ರಥಮ, ಶ್ರೇಯಾ ಅಲಗೇರಿಕರ್ ಶಾಸ್ತ್ರೀಯ ನೃತ್ಯದಲ್ಲಿ ದ್ವಿತೀಯ, ಜೇಸನ್ ಲೋಪಿಸ್ ಪಾಶ್ಚಾತ್ಯ ವಾದ್ಯ ಸಂಗೀತ ವೈಯಕ್ತಿಕ ವಿಭಾಗದಲ್ಲಿ ದ್ವಿತೀಯ, ಕೊಲೆಜ್ನಲ್ಲಿ ದಿಶಾ ಬೋರಕರ್ ದ್ವಿತೀಯ ಸ್ಥಾನ ಸೇರಿದಂತೆ ಏಕಾಂಕ ನಾಟಕ, ಕಾರ್ಟೂನಿಂಗ್, ಇನ್ಸ್ಟಾಲೇಷನ್ನಲ್ಲಿ ತೃತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಈ ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

About The Author

error: Content is protected !!