
ಬೈಂದೂರು : ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವತಿಯಿಂದ ಬೀಳ್ಕೊಡುಗೆ ಸಮಾರಂಭ ಗುರುವಾರ ಕಾಲೇಜಿನ ರಂಗಮAದಿರದಲ್ಲಿ ನಡೆಯಿತು.
ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಪಿ, ಉಪಪ್ರಾಂಶುಪಾಲ ಸಂಧ್ಯಾ ಪಿ ಭಟ್, ಶಾಲಾ ಅಡುಗೆ ಸಹಾಯಕಿ ಪಾರ್ವತಿ ದೇವಾಡಿಗ ಇವರನ್ನು ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಉಪಪ್ರಾಂಶುಪಾಲ ಸಂಧ್ಯಾ ಪಿ ಭಟ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಬೈಂದೂರಿನಲ್ಲಿ 09 ತಿಂಗಳು ಈ ಪ್ರೌಢಶಾಲೆಯ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಪುಣ್ಯ, ನನ್ನ ಸೇವಾವಧಿಯಲ್ಲಿ ತುಂಬಾ ಸಂತೋಷವಾಗಿ ಕಾರ್ಯ ನಿರ್ವಹಿಸಿದ್ದೇನೆ, ಇದಕ್ಕೆಲ್ಲಾ ಕಾರಣರಾದ ಶಾಲಾ ಆಡಳಿತ ಮಂಡಳಿ ಹಾಗೂ ನಮ್ಮ ಸಿಬ್ಬಂದಿ ವರ್ಗಕ್ಕೆ ಆಭಾರಿಯಾಗಿರುತ್ತೇನೆ ಎಂದರು.
ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಉಮೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.


ಪ್ರೌಢಶಾಲಾ ಎಸ್.ಡಿ.ಎಮ್.ಸಿ ನಾಮನಿರ್ದೇಶಕ ಸದಸ್ಯರಾದ ಸದಾಶಿವ ಡಿ ಪಡುವರಿ, ಪ್ರೌಢಶಾಲಾ ವಿಭಾಗದ ಎಸ್.ಡಿ. ಗಂಗಾಧರ ಮೊಗವೀರ, ದಯಾನಂದ ಪಿ, ಗೋಪಾಲಕೃಷ್ಣ, ಸುಧಾಕರ ದೇವಾಡಿಗ ಜಟ್ಟಿಮನೆ, ಜಾನೇಟಾ, ಅನಿತಾ, ಕನಕಾ, ಮಾಜಿ ಸದಸ್ಯ ನಾಗಪ್ಪ ಬಿಲ್ಲವ, ಪ್ರೌಢಶಾಲಾ ವಿಭಾಗದ ಶಿಕ್ಷಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೌಢಶಾಲಾ ಪ್ರಭಾರ ಉಪ ಪ್ರಾಂಶುಪಾಲ ಪದ್ಮನಾಭ ಪಿ ಸ್ವಾಗತಿಸಿ/ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ದತ್ತಾತ್ರೇಯ ಭಟ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಕಮಲಾ ವಂದಿಸಿದರು.
ವರದಿ: ಎಚ್ ಸುಶಾಂತ್ ಆಚಾರ್ ಬೈಂದೂರು

More Stories
ಮಹತೋಭಾರ ಸೇನೇಶ್ವರ ದೇವಸ್ಥಾನ ಉತ್ಸವ ಮೂರ್ತಿ ವನಭೋಜನ
ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಸಹರ್ಷರಿಗೆ ಶಾಲೆಯಲ್ಲಿ ಭವ್ಯ ಸ್ವಾಗತ
ವತ್ತಿನಕಟ್ಟೆ ಮಹಾಸತಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ