ಹೊನ್ನಾವರ : ಡಿ.21ರಂದು ಮಂಕಿ ಪ.ಪಂ.ಚುನಾವಣೆಯಲ್ಲಿ ಅನಂತವಾಡಿ ವಾರ್ಡಿನ ಮುಳಗೋಡು ಗ್ರಾಮಸ್ಥರು ಚುನಾವಣೆಗೆ ಮತದಾನದ ಬಹಿಷ್ಕಾರ ಮಾಡುವುದಾಗಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ.
ಭಟ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅನಂತವಾಡಿ ವಾರ್ಡಿನ ಮುಳಗೋಡು ಚಿಕ್ಕ ಹಳ್ಳಿಯಾಗಿದ್ದು, ಸಂಪರ್ಕ ಕಲ್ಪಿಸಿ ಕೊಡುವ ರಸ್ತೆಯೇ ಇಲ್ಲವಾಗಿದೆ. ಚಿಕ್ಕದಾದ ಹೊಳೆ ಇದ್ದು ಮಳೆಗಾಲದಲ್ಲಿ ಅಪಾಯಕಾರಿ ಆಗಿದ್ದು ಸೇತುವೆ ತೀರಾ ಅಗತ್ಯ ಇದೆ. ಮೂವತ್ತು ವರ್ಷದಿಂದ ಸೇತುವೆಗಾಗಿ ಹೋರಾಟ ನಡೆಸಿದರು ಜನ ಪ್ರತಿನಿಧಿಗಳು, ಅಧಿಕಾರಿಗಳು ಅಸಡ್ಡೆ ತೋರಿದ್ದಾರೆ.
ರೈತರು ತೆಂಗು, ಅಡಿಕೆ, ಬಾಳೆ ಮತ್ತು ಭತ್ತವನ್ನು ಬೆಳೆಯುತ್ತಾರೆ. ಜೀವನೋಪಾಯಕ್ಕೆ ಕೃಷಿಯನ್ನೆ ಅವಲಂಬಿಸಿದ್ದಾರೆ. ಇಲ್ಲಿ ದ್ವಿಚಕ್ರ ವಾಹನ ಬಿಟ್ಟು ನಾಲ್ಕು ಚಕ್ರದ ವಾಹನದ ಸಂಚಾರಕ್ಕೆ ಅವಕಾಶ ಇಲ್ಲವಾಗಿದೆ. ಬೆಳೆದ ಬೆಲೆ ಮಾರುಕಟ್ಟೆಗೆ ಸಾಗಾಟ ಮಾಡುವುದು ಕಷ್ಟವಾಗಿದೆ. ಇಲ್ಲಿಯ ಜನರಿಗೆ ಸರಿಯಾದ ಮನೆಯು ಇಲ್ಲವಾಗಿದೆ. ವಿದ್ಯಾರ್ಥಿಗಳಿಗೆ ಶಾಲಾ ವಾಹನದ ಕೊರತೆಯೂ ಕಾಡುತ್ತಿದೆ. ಸಂಬAಧ ಪಟ್ಟ ಅಧಿಕಾರಿಗಳು ನಮ್ಮ ಊರಿಗೆ ಭೇಟಿಕೊಟ್ಟು ಈ ಭಾಗದ ಸಮಸ್ಯೆ ಪರಿಶೀಲಿಸಿ ನ್ಯಾಯ ಒದಗಿಸಬೇಕು ಒಂದೊಮ್ಮೆ ಬೇಡಕೆ ಈಡೇರದೆ ಹೊದಲ್ಲಿ ಸಾಮೂಹಿಕವಾಗಿ ಮಂಕಿ ಪ. ಪಂ. ಚುನಾವಣೆಗೆ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ತಹಸೀಲ್ದಾರ್ ಪ್ರವೀಣ ಕರಾಂಡೆ ಮತದಾನ ಬಹಿಷ್ಕಾರ ಮಾಡದಂತೆ ಗ್ರಾಮಸ್ಥರಿಗೆ ತಿಳುವಳಿಕೆ ಹೇಳಿದರು. ಕಳೆದ ಹಲವು ವರ್ಷದಿಂದ ನಮಗೆ ಆಶ್ವಾಸನೆ ಕೊಡುತ್ತಾ ಬಂದಿದ್ದಾರೆ. ಈ ಬಾರಿಯೂ ಹಾಗೆ ಮಾಡುತ್ತಾರೆ. ನಮ್ಮ ಸಮಸ್ಯೆ ಬಗೆಹರಿಸಿ ಕೊಡುವ ತನಕ ಮತದಾನ ಮಾಡುವುದಿಲ್ಲ ಎಂದು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ನೀಡಿದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
ಕೆರೆಕೋಣ ಶಾಲೆಯಲ್ಲಿ ಶಿಕ್ಷಕಿ ಲಲಿತಾ ಹೆಗಡೆಯವರಿಗೆ ಬೀಳ್ಕೊಡುಗೆ ಮತ್ತು CCTV ಉದ್ಘಾಟನಾ ಕಾರ್ಯಕ್ರಮ ಸಂಪನ್ನ
ಶ್ರೀ ಸತ್ಯಸಾಯಿ ಸಂಸ್ಥೆಯಲ್ಲಿ ವಾರ್ಷಿಕೋತ್ಸವ ಯಶಸ್ವಿಯಾಗಿ ಸುಸಂಪನ್ನ
ಉತ್ತರ ಕನ್ನಡ ಜಿಲ್ಲಾ ಕ್ಯಾಥೋಲಿಕ್ ಸಂಘಟನೆ ಆಶ್ರಯದಲ್ಲಿ ಜಿಲ್ಲಾಮಟ್ಟದ ಕ್ರಿಸ್ಮಸ್ ಗೀತಾ ಸ್ಪರ್ಧಾ ಕಾರ್ಯಕ್ರಮ