December 23, 2025

ನಾಣಿಕಟ್ಟಾದಲ್ಲಿ ಯಶಸ್ವಿಯಾಗಿ ಸಂಪನ್ನಗೊ0ಡ “ಯಕ್ಷ ವಂದನೆ” ನಾಣಿಕಟ್ಟಾ “ಯಕ್ಷಹಬ್ಬ” 95 ನೇ ಹೆಜ್ಜೆ..

ಸಿದ್ದಾಪುರ: ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ ನಾಣಿಕಟ್ಟಾಸಿದ್ದಾಪುರ ಉ . ಕ. ಇವರ ಸಮರ್ಥ ಸಂಯೋಜನೆ ಮತ್ತು ಸಂಘಟನೆಯಲ್ಲಿ , ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ವೇದಿಕೆಯಲ್ಲಿ ವೇದಮೂರ್ತಿ ವಿನಾಯಕ ಸು ಭಟ್ಟ ಮತ್ತೀಹಳ್ಳಿ ಅವರ ಗೌರವ ಉಪಸ್ಥಿತಿಯಲ್ಲಿ ಕಲಾಭಿಮಾನಿಗಳ ಸಂಪೂರ್ಣ ಸಹಕಾರದೊಂದಿಗೆ ಸಿದ್ದಾಪುರ ತಾಲೂಕು ನಾಣಿಕಟ್ಟಾದಲ್ಲಿ ಯಕ್ಷ ವಂದನೆ ಮತ್ತು ನಾಣಿಕಟ್ಟಾ ಯಕ್ಷ ಹಬ್ಬ ಆಯೋಜಿಸಲಾಗಿತ್ತು..

ತನ್ನಿಮಿತ್ತ ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ ಬಂಗಾರಮಕ್ಕಿ ಹೊನ್ನಾವರ ಮತ್ತು ಯಕ್ಷರಂಗದ ಅಗ್ರಗಣ್ಯ ಅಥಿತಿ ಮಹಾರಥರ ದಿಗ್ಗಜರ ಸಮಾಗಮ ದಲ್ಲಿ ಡಿಸೆಂಬರ್ 14 ಭಾನುವಾರ ಮುಸ್ಸಂಜೆ 6:03 ನಿಮಿಷದಿಂದ ಕನಕಾಂಗಿಕಲ್ಯಾಣ ಮತ್ತು ಧರ್ಮಾಂಗದ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು..

ಯಕ್ಷಗಾನದ ಉದಯೋನ್ಮುಖ ದಿಗ್ಗಜ ಕಲಾವಿದರಾದ ಶ್ರೀ ಕಾರ್ತಿಕ ಹೆಗಡೆ ಚಿಟ್ಟಾಣಿ ಮತ್ತು ದಂಪತಿಗಳಿಗೆ ಅವರಿಗೆ “ಯಕ್ಷ ವಂದನೆ” “ಯಕ್ಷ ಸುಂದರ ರತ್ನ” ಎಂಬ ಬಿರುದು ನೀಡಿ ಗೌರವ ನಾಗರೀಕ ಸನ್ಮಾನ ಮತ್ತು ಹಾಗೂ ಹಿರಿಯ ಸಹಕಾರಿ ಧುರೀಣ ಸಮಾಜ ಸೇವಕರಾದ ಶ್ರೀಯುತ ಎಂ ಆರ್ ಹೆಗಡೆ ಬಾಳೆಜಡ್ಡಿ ಮತ್ತೀಹಳ್ಳಿ ಅವರಿಗೆ ಅಭಿನಂದನಾ ಗೌರವ ಸನ್ಮಾನ ಭವ್ಯ ವೇದಿಕೆಯ ಗಣ್ಯಾತಿಗಣ್ಯರಿಂದ ನೆರವೇರಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ “ಯಕ್ಷಸುಂದರ ರತ್ನ” ಬಿರುದಾಂಕಿತ ಶ್ರೀ ಕಾರ್ತಿಕ ಹೆಗಡೆ ಚಿಟ್ಟಾಣಿ ಈ ಸನ್ಮಾನ ತನಗೆ ಸಿಕ್ಕಿದ್ದಲ್ಲ ,ತನಗೆ ಕಳಿಸಿದ ಗುರುಗಳಿಗೆ,ಕಲಾಭಿಮಾನಿಗಳಿಗೆ ಸಿಕ್ಕಿದ ಗೌರವ ಎಂದು ನುಡಿದರು. ಇನ್ನೋರ್ವ ಸನ್ಮಾನಿತರ ಹಿರಿಯ ಸಹಕಾರಿ ಶ್ರೀಯುತ ಎಂ ಆರ್ ಹೆಗಡೆ ಬಾಳೆಜಡ್ಡಿ ಮತ್ತೀಹಳ್ಳಿ ಅವರು ಮಾತನಾಡಿ ಯಕ್ಷಗಾನ ಸಮೃದ್ಧ ಕಲೆ, ಅಪ್ಪಟ ಕನ್ನಡದ ಕಲೆ,ನಮ್ಮ ಸಂಸ್ಕೃತಿ ಪರಂಪರೆಯ ಕಲೆ, ಈ ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ ನಾಣಿಕಟ್ಟಾ ಇವರು ಉತ್ತಮ ಕಾರ್ಯಕ್ರಮ ಸಂಘಟಿಸುತ್ತಾ ಬಂದಿದ್ದಾರೆ, ಇವರಿಗೆ ನಮ್ಮ ಸಹಕಾರ ಸದಾ ಇದೆ, ಸಾರ್ವಜನಿಕರೂ ಸಹ ಇನ್ನೂ ಹೆಚ್ಚು ಹೆಚ್ಚು ಇಂತಹ ಉತ್ತಮ ಕಾರ್ಯಕ್ರಮ ಸಂಘಟಿಸುತ್ತಾ ಇರುವ ಇವರಿಗೆ ಪ್ರೋತ್ಸಾಹ ನೀಡುವ ಮುಖಾಂತರ ಯಕ್ಷಗಾನ ಕಲೆ ಸಂಸ್ಕೃತಿ ಬಗ್ಗೆ ಹೆಚ್ಚಿನ ಸಹಾಯ ಸಹಕಾರ ಮಾಡಬೇಕು, ಕಲೆ ಸಂಸ್ಕೃತಿ ಉಳಿಸಬೇಕು, ನಟರಾಜ ಎಂ ಹೆಗಡೆ ಅವರಿಗೆ ಅವರಂತಹ ಯುವಕರಿಗೆ ಪ್ರೋತ್ಸಾಹ ನೀಡಿ ಸಂಘಟನೆಗೆ ಬಲ ನೀಡಿ ಎಂದು ಹೇಳಿದರು.

About The Author

error: Content is protected !!